ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀಲೆಯ ಸಂಸಾರ

೧೯

ಕೆಲ್ಸಾ ಮಾಡಬಾರ್ಡಿತ್ತು. ನೀವು, ಇಷ್ಟು ಜುಕ್ಕಾನ್‌ ಜುಲಮೀಲೆ ಮಗಳ ಲಗ್ನ ಮಾಡಿದ್ರ, ಆಕೀ ಜನ್ಮದ ಗೋಳಾ ಕಟಿಗೊಂಡ್ಹಾಂಗಾದೀತೂ....." ಗೌಡರು ಎಲ್ಲರನ್ನು ಚಂಡು ಹಿಡಿದು ದಬ್ಬಿಸಿಬಿಟ್ಟರು.

ಸೋದರತ್ತೆ ಮತ್ತೆ ಬಂದಳು,....... "ಇದೇನು, ಇಕೀ ದಂಡೆ ಕಟ್ಟಿಲಿಕ್ಹತ್ಯಾರೋ, ಹರೀಲಿಕ್ಹತ್ಯಾರೋ?...... " "ಹರೀತಾರ...ಹರೀತಾರs........ ಇಲ್ಲೇ ಕುಂತೈತಿ ಆಕೀ ಗಂಡನ ಹೆಣಾ ಆಕೀ ಬಾಜುಕs..." ಎಂದು ಮದುವಣಿಗ ಕತ್ತೆ ಹೇಂಕರಿಸಿತು.

ಸೋದರತ್ತೆ ದಿಙ್ಮೂಢಳಾದಳು. ನಿಂತಲ್ಲಿಯೇ ಕ್ಷಣಹೊತ್ತು ಹೌಹಾರಿ ನಿಂತುಬಿಟ್ಟಳು. ಹುಲಿಯ ದವಡೆಯಲ್ಲಿ ಸಿಕ್ಕಿದ್ದರೂ ಸೊಸೆಯನ್ನು ಬಿಡಿಸಿಕೊಂಡು ಬಂದೇ ತೀರೇನೆಂಬ ಹಟದಿಂದ ಬಂದಿದ್ದ ಅವಳಿಗೆ, ಸಾವಧಾನಳಾದಾಗ ಕೆಲಸವು ಕೈಮೀರಿ ಕೋಗಿದೆಯೆಂದು ಗೊತ್ತಾಯಿತು; ಬಂದ ಮೋಟಾರಿನಿಂದ ಹಾಗೆಯೇ ಊರಿಗೆ ತೆರಳಿಬಿಟ್ಟಳು.

ಮರುದಿವಸ ನೀಲಿಯು ಅತ್ತೆಯ ಮನೆಗೆ ಬಂದಳು. ಒಂದುತುಟಿ ಎರಡು ಮಾಡದೆ, ಅತ್ಯಂತ ಪ್ರೀತಿಯಿಂದ ಎಲ್ಲರೊಡನೆ ನಿತ್ಯವೂ ಇರಲಾರಂಭಿಸಿದಳು. "ನಾ ಹೇಳ್ಳಿಲ್ಲs, ಮದಿವ್ಯಾದ ಮ್ಯಾಗ ತಾನs ಹಾದಿಗೆ ಬರ್‍ತಾಳಂತ......." ಕ್ಯಾರಕೊಪ್ಪದ ಗೌಡನಾದ ಆವಳ ಮಾವ ನುಡಿದನು.

ಶಿದ್ಲಿಂಗಗೌಡನಂತೂ ನೀಲೆಯ ಸೇವೆಯಿಂದ ಸದಾ ಸಂತುಷ್ಟನಾಗಿರುವನು; ಅವಳ ಅಚ್ಚುಕಟ್ಟುತನ, ಕೆಲಸ-ಬೊಗಸೆ ಇವನ್ನೇ ಬಾಯಿಬಿಡುತ್ತ ನೋಡುತ್ತಿರುವನು.

ಅವಳ ತಾಯಿತಂದೆಗಳಿಗೂ ಸಂತೋಷವಾಯಿತು. ಮೊದಭೊದಲು ಅವಳನ್ನೆಲ್ಲರೂ ಬಂಧನದಲ್ಲಿಟ್ಟಿದ್ದರು. ಆದರೆ ಈಗ