ಎಂದದನು. "ಒಳಗ ತಾರಪ್ಪಾ ಎಂದು ಅವಳೆಂದ ಕೂಡಲೆ "ಕೈಗೇನs ಸಿಗವಲ್ಲವು ” ಎನ್ನುತ್ತ, ಆಟ ಮುಗಿದ ಮೇಲೆ ಒಳಗೆ ಬಂದನು. ತಾಯಿಯ ಒದಿಕೆ ಬಿದ್ದ ಕೂಡಲೆ, ಪಡಸಾಲೆಯೊಳಗಿನ ತನ್ನ ಕೋಣೆಯಲ್ಲಿ ಹೋಗಿ ಬಾಗಿಲಿಕ್ಕಿಕೊಂಡು ಕುಳಿತುಕೊಂಡನು. ಇದನ್ನೆಲ್ಲ ನೋಡಿ, ಹುಡುಗಿಯರು ಗಾಬರಿಯಾಗಿ, ಒಬ್ಬರ ಮೊರೆಯನ್ನೊಬ್ಬರು ಹುಳುಹುಳು ನೋಡುತ್ತ ಇದ್ದಕ್ಕಿದ್ದಲ್ಲಿಯೆ ತಣ್ಣಗಾಗಿ ಬಿಟ್ಟರು. ಒಂದರ್ಧ ಗಂಟೆಯ ವರೆಗೆ ಅಭ್ಯಾಸ ಮಾಡಿಕೊಂಡು ಬಾಗಿಲು ತೆಗೆದು ಹೊರಕ್ಕೆ ಬಂದನು; ಒಂದು ಕೈಯಲ್ಲಿ ಅಂಕಗಣಿತ, ಒಂದು ಕೈಯಲ್ಲಿ ನೋಟು ಬುಕ್ಕು-ಇವಗಳನ್ನು ಹಿಡಿದುಕೊಂಡು ತಾಯಿಯ ಬಳಿ ಬಂದು, "ಅವ್ವಾ, ನವಲೂರ ಶಿನ್ನ ಮನಿಗೆ ಹೊಗಿ, ನಿನ್ನೆ ಮಾಸ್ತರರು ಹೇಳಿದ ಲೆಖ್ಯಾ ಬರವಲ್ಲೂ-ಸಂಖ್ಯಾ ತಪ್ಪೆಂದೇನು ನೋಡಿಕೊಂಡು ಬರೆನಿ ” ಎಂದನು. ಲಗೂ ಬಾ ಹs, ಹತ್ತು ಹಡಿಲಿಕ್ಕೆ ಬಂದದ, ಇನ್ನೂ ನಿನ್ನ ಸ್ನಾನಾ~ಊಟಾ ಆಗಬೇಕಾಗದ ” ಎಂದಳು ತಾಯಿ. ಅರ್ಧ ಗಂಟೆಯಲ್ಲಿಯೆ ಮರಳಿ ಬಂದನು. ಅವನ ಸಣ್ಣ ಅಕ್ಕನು ಗಪ್ಪನೆ: ಸಾಯಜಮೆಯ ಮೇಲೆ ಕೈಯಾಡಿಸಿದವಳೆ, " ಕಳ್ಳಾ, ಈಸಬಿದ್ದು ಬದಿ ಹೌದಲ್ಲೊ ಆ ಜಕಣಿ ಭಾಂವೀ ಒಳಗ! ಅಲ್ಲೆಲ್ಲಾ ತುಂಬ ಕಾಫಡೀ ಆವ, ಎಲ್ಲೆರ ತಲಿ ಗಿಲಿ ಸಿಕ್ಕಿ ತಪ್ಪಾ, ಹಾಂಗ ಹೊಗತ ಬರಬ್ಯಾಡಾ ” ಎಂದಳು. ಕೂಡಲೆ ತಾಯಿ ಗದ್ದರಿಸಿದಳು, "ಸಾಯಲಿ, ಅರಿಷ್ಟ ಯೋಡಿ, ಅವನ ಮರಣ ಒಂದಿಸ ಭಾಂವೀ ಒಳಗಳ ಅದ-ನಾನಗ ಗೊತ್ತದ."
ಊಟ ಮಾಡಿ ಶಾಲೆಗೆ ಹೋದನು. ಸಾಯಂಕಾಲ ಮನೆಯಲ್ಲಿ ಕುಂಟುತ್ತಲೆ ಕಾಲಿಟ್ಟನು. ಅವನ ಹಿರಿಯಕ್ಕ "ಯಾಕಪ್ಪಾ, ಏನಾತೊ? ಎಲ್ಲಿಂದತೊನೋ ಎತ್ತರದ ಮ್ಯಾಲಿಂದ ಬಿದ್ದಿಹೌದಲ್ಲೊ? " ಎಂದು ಕೇಳಿದಳು. ಅದಕ್ಕೆ ಅವನು ಸರಳವಾಗಿ ಹೇಳಿಬಿಟ್ಟನು,