ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಹೂಬಿಸಿಲು

ದಿಲ್ಲೇನು, ನೋಡ್ಲಿಕ್ಕೆ? ” ಎನ್ನಬೇಕು. ಆಯಿತು, ಅವನೂ ನಿರ್ವಾಹವಿಲ್ಲದೆ ಕರಕೊಂಡು ಹೊರಡುತ್ತಿದ್ದನು-ಕುರುಬನು ದಡ್ಡಿಯೊಳಗಿನ ಕುರಿಗಳನ್ನು ಅಟ್ಟಿಕೊಂಡು ಹೊರಡುವ೦ತೆ ! ಮರಳಿ ಬರುವಾಗ ತೀರ ಚಿಕ್ಕವಾದ ಒಂದೆರಡನ್ನು ಹೆಗಲಮೇಲೆ ಹೇರಿಕೊಂಡು, ಒಂದೆರಡನ್ನು ಸಂಗಡ ಕರೆದುಕೊಂಡು, ಸ್ವಲ್ಪ ದೊಡ್ಡ ಹುಡುಗಿಯರನ್ನು ಚಿಕ್ಕವರನ್ನೆತ್ತಿಕೊಳ್ಳದ್ದಕ್ಕೆ ದೂರವಾಗಿ ಹಿಂದಕ್ಕೆ ಬಿಟ್ಟು, ಮುಂದೆ ಓಡಿಬರುವನು.

ದಿನಾಲು ಮುಂಜಾನೆ ಎಲ್ಲರೊಡನೆ ಚಹಾ-ಫಲಾಹಾರಕ್ಕೆ ಕುಳಿತುಕೊಳ್ಳುವನು. ಆಗ ಇವನ ತಂದೆ ನೋಡಿ, "ಗೋವಿಂದಾ ಅಭ್ಯಾಸಕ್ಕೆ ಕೂಡ್ರು, ನಡೆ !” ಎಂದು ಬೆದರಿಸಿ, ಕಚೇರಿಗೆ ಹೊರಟು ಹೋಗುವರು; ಮೆಲ್ಲಗೆ ಹೂಕಾರಾರ್ಥವಾಗಿ ಉತ್ತರ ಕೊಡುವನು. ಅವರು ಓಣಿಯನ್ನು ದಾಟುವವರೆಗೆ ಬಾಗಿಲಲ್ಲಿ ನಿಂತು ನೋಡುವನು; ಕೂಡಲೆ ಹಕ್ಕೆಯೊಳಗಿನ ನಾಲ್ಕಾರು ಚಿಕ್ಕವಾದ ಚಂದವಾದ ಹೋರಿಗಳನ್ನು ಬಿಚ್ಚಿ, 'ಹಲೆ-ಹಲೆ-ಚಕ್-ಚಕ್' ಎನ್ನುತ್ತ, ಅವುಗಳನ್ನು ಬೀದಿಗಳಲ್ಲಿ ಟಣ್ ಪುಣ್ ಹಾರಾಡಿಸುತ್ತ, ತಾನೂ ಅವುಗಳ ಬೆನ್ನು ಹತ್ತಿ ಓಡಾಡುವನು. ಮನೆಯೊಳಗಿನ ಹುಡುಗಿಯರ ತ೦ಡವೆಲ್ಲ, ಹೆಬ್ಬಾಗಿಲ ಕಟ್ಟೆಯ ಮೇಲೆ ಕುಳಿತು ಈ ಚಿನ್ನಾಟಿಗೆಯನ್ನು ನೋಡಿ ನಗುವದು; ಗೊವಿಂದನು ಒಮ್ಮೊಮ್ಮೆ ಹೋರಿಗಳನ್ನು ಬೆದರಿಸುತ್ತಿದ್ದನು. --ಒಮ್ಮೊಮ್ಮೆ ಅವು ಇವನಿಗೆ ಇರಿಯಬರುತ್ತಿದ್ದವು. ಅವುಗಳಿಗೆ ಕೋಡುಗಳಂತೂ ಇಲ್ಲವೇ ಇಲ್ಲ--ಅವುಗಳ ಬಾಲವನ್ನು ಹಿಡಿದು ಮನೆಯ ಕಡೆಗೆ ಜಗ್ಗ ಹೋದ ಕೂಡಲೆ, ಅವುಗಳೇ ಇವನನ್ನು ದರದರವಾಗಿ ಎಳೆದುಕೊಂಡು ಭರದಿಂದ ಓಡುವವು; ಆಗ ಹುಡುಗಿಯರೆಲ್ಲ ಚಪ್ಪಾಳೆಯಿಕ್ಕಿ ನಗುವರು.

ಒಂದು ದಿನ ಮುಂಜಾನೆ ಸಿಹಿನೀರಿನ ಕೊಡವನ್ನು ಹೊತ್ತುಕೊಂಡು ಎದುರಿಗೆ ಬರುತ್ತಿದ್ದ ತನ್ನ ತಾಯಿಯನ್ನು ಕಂಡೊಡನೆಯೆ "ಅವ್ವಾ, ಎಲ್ಲಾ ಹೋರಿ ಬಿಚಿಗೊಂಡ ಬಿಟ್ಟಾವ ನೋಡವ್ವಾ”