ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಹೂಬಿಸಿಲು

ಅಂದಿನಿಂದ ಅವನ ಪಗಾರದ ಮೂರು ರೂ.ಯಲ್ಲಿ ನಾಲ್ಕಾಣೆಮಾತ್ರ ಅವನ ಕೈಯಲ್ಲಿಟ್ಟು, ಉಳಿದುದನ್ನು ಅವನ ಮನೆಗೆ ಕಳುಹಿಸುತ್ತಿರು ವೆನು. ಒಂದೊಂದು ವಾರ ಒಂದಾಣೆ , ಒಂದೊಂದು ವಾರ ಎರಡಾಣೆಯನ್ನೂ ಕೊಡುವೆನು. ಎಷ್ಟು ಬೈದರೂ, ಆಡಿದರೂ ಸಹನಶೀಲತೆಯಿಂದ ತನ್ನ ತಪ್ಪನ್ನು ಒಪ್ಪಿಕೊಳ್ಳುವನು. ಮೊದಲಿನಂತೆ ದೊಡ್ಡ ರಕಮನ್ನು ಪ್ರತಿವಾರವೂ ಇಡದೆ, ಈಗ ನನ್ನ ಬುದ್ಧಿಯ ಮಾತನ್ನು ಮನ್ನಿಸಿ, ಯಾವಾಗಲಾದರೊಮ್ಮೆ, ಎರಡಾಣೆ ನಾಲ್ಕಾಣೆ ಮಾತ್ರ ರೇವನ್ನಿಡುತ್ತಲೂ, ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಮೈನೋಯಿಸಿ ಕೊಳ್ಳುತ್ತಲೂ ಇರುತ್ತಾನೆ. ಅಷ್ಟು ಹಣವನ್ನು ಸಹ ಅವನಿಗೆ ಕೊಡದೇ ಹೋದರೆ, ನಮಗೆ ಅವನಂಥಾ ನಂಬಿಗ ಆಳು ಮತ್ತೆಲ್ಲ ಸಿಕ್ಕಾನು ?

ಎಂದಾದರೊಮ್ಮೆ, “ದಾಜೀಬಾ, ಏನಂತಾನ ನಿಮ್ಮ ಬ್ಯಾಂಕಿನ ಮ್ಯಾನೇಜರ?” ಎ೦ದು ನಗೆಯಾಡಿದರೆ,

"ಅಂವಾ ಏನಂತಾನ್ರೀ? ನಾಯೇನರ ಅಂದ್ರ ಅಂವಾ ಏನರ ಅ೦ದಾನೊ....??

ಎಷ್ಟು ಸೌಮ್ಯವಾದ-ಸರಳವಾದ ಉತ್ತರ !!