ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಬಿ. ಎಸ್. ವೆಂಕಟರಾಮ್

ಇಬ್ಬರು ರು 'ರಾಮಾ'ಗಳು ಕಾದಿದ್ದರು. ಕಾರು ನಿಲ್ಲುತ್ತಲೇ ಓಡಿಬಂದು ಗಿರೀಶನಿಗೆ ಸಲಾಂ ಹಾಕಿ ಅವನ ಕ್ಷೇಮಸಮಾಚಾರ ಕೇಳುತ್ತ ಕಾರಿನ ಬಾಗಿಲನ್ನು ತೆಗೆದು ನಿಂತರು. ಗಿರೀಶನು ಕಾರಿನಿಂದಿಳಿದು ಶಶಿಯನ್ನಿ ಳಿಸಿಕೊಂಡು ಕಟ್ಟಡದೊಳಕ್ಕೆ ಕರೆದೊಯ್ದ. ಮಹಡಿಯ ಮೆಟ್ಟಿಲು ಗಳನ್ನು ಹತ್ತುತ್ತಲಿದ್ದಾಗ ಪಿಸುಮಾತಿನಲ್ಲಿ, “ಮೇಲೆ ಹೋದಮೇಲೆ ನಾನೇನೇ ಹೇಳಿದರೂ ಆಶ್ಚರ ಪಡಬೇಡಾ, ಶಶಿ ! ಅಲ್ಲದೆ ಮೊದಲೇ ನಾನು ಟ್ಯಾಕ್ಸಿಯಲ್ಲಿ ಹೇಳಿದ್ದನ್ನೆಲ್ಲಾ ಮರೆಯಲೂ ಬೇಡ.” ಎಂದು ಅವಳನ್ನು ಎಚ್ಚರಿಸಿದ.

ನಾಲ್ಕನೆಯ ಮಹಡಿಯಲ್ಲಿ ಒಟ್ಟು ಆರು ಪುಟ್ಟ ಸಂಸಾರಗಳಿಗೆ ಆಗುವಷ್ಟು ವಾಸದ ಭಾಗಗಳಿದ್ದವು. ಅಲ್ಲಿ ಮೂರು ಭಾಗಗಳಲ್ಲಿ ಗಿರೀಶನ ಮಿತ್ರರೇ ಸಂಸಾರಸಮೇತ ವಾಸಿಸುತ್ತಿದ್ದರು. ಇನ್ನೊಂದರಲ್ಲಿ ಗಿರೀಶನಿದ್ದ. ಉಳಿದೆರಡರಲ್ಲಿ ಇದ್ದವರು ಗಿರೀಶನಿಗೆ ಅಪರಿಚಯಸ್ಥರು. ಅಲ್ಲಿದ್ದ ಗಿರೀಶನ ಮೂರು ಮಿತ್ರರಪೈಕಿ ಪುರುಷೋತ್ತಮ್ ಎಂಬ ಒಬ್ಬಾತನು ಗಿರೀಶನ ಆಪ್ತ ಮಿತ್ರ. ಇವರಿಬ್ಬರೂ ಹೆಚ್ಚು ಕಡಿಮೆ ಅಣ್ಣ- ತಮ್ಮಂದಿರಂತಿದ್ದರು, ಪುರುಷೋತ್ತಮನ ಪತ್ನಿ ಉಮಾ ದೇವಿಯು ಗಿರೀಶನನ್ನು ತನ್ನ ಮನೆಯವನಂತೆಯೇ ಆದರದಿಂದ ಕಾಣುತ್ತಿದ್ದಳು. ಅವನು ಬೊಂಬಾಯಿಯಲ್ಲಿ ಏಕಾಂಗಿಯಾಗಿ ವಾಸಿಸು ತಿದ್ದುದನ್ನು ಉಮಾದೇವಿಯು ಅನೇಕವೇಳೆ ಖಂಡಿಸಿ, ಅವನು ತನ್ನ ಹೆಂಡತಿಯನ್ನು ಕರೆತರಬೇಕೆಂದೂ, ಅವನು ಕಾಯಿಲೆ ಕಸಾಲೆಯಿಂದ ನರಳುತ್ತಿದ್ದರೆ ಅವನಿಗೆ ಉಪಚಾರ ಮಾಡುವವರಾರೆಂದೂ, ಹಾಗೆ ಗಿರೀಶನು ಏಕಾಂತವಾಸಿಯಾಗಿ ಇಲ್ಲಿದ್ದರೆ ಅಲ್ಲಿ ಅವನ ಹೆಂಡತಿಗೆ ಹೇಗೆ ಮನಶ್ಯಾಂತಿ ಇದ್ದೀತೆಂದೂ ಆಗಾಗ್ಗೆ ಹೇಳುತ್ತಲೇ ಇದ್ದಳು. ಹೀಗೆ ಹೇಳುತ್ತಿದ್ದರೂ ತಾನೇ ಮಮತೆಯಿಂದ ಅವನ ಉಪಚಾರದ ಹೊರೆಯನ್ನೂ ಹೊತ್ತುಕೊಳ್ಳುತ್ತಿದ್ದಳು. ಉಮಾದೇವಿಯು ತನ್ನ ಹೆಂಡತಿಯ ಪ್ರಸ್ತಾಪವೆತ್ತಿದಾಗಲೆಲ್ಲ ಗಿರೀಶನು, ತಾನು ಅದುವರೆಗೆ