ಬಂದು ನಿಂತಿರೋದಕ್ಕೆ ಇದು ಸೂಚನೆ ; ಯಾವ ದಿನ ಬಂದಿಳಿದರೂ
ಇಳಿದಾರು. ಈಗ ಈ ತಿಂಡಿಪೋತರಾಯರೆಲ್ಲಾ ಏನೇನು ಕಡಿದು ಕಟ್ಟೆ
ಹಾಕ್ತಾರೋ ಎಲ್ಲಾ ಗೊತ್ತಾಗುತ್ತೆ. ಕುಟೀಕೆ ಮಾಡ್ತಾ ಊಟದ
ರುಚಿ ಎಣಿಸಿದ ಹಾಗಲ್ಲ. ಜಪಾನೀಯರನ್ನು ಎದುರಿಸೋದು ಅಂದ್ರೆ,
ಸುಮ್ನೆ ನಮ್ಮ ಸೈನಿಕರ ಹೆಸರಿನಲ್ಲಿ ಶಂಖ ಹೊಡೀತಿದ್ರಲ್ಲಾ, ಇನ್ನೇಲೆ
ಗೊತ್ತಾಗುತ್ತೆ ಅವರ ಬೆಲೆ ಎಷ್ಟೂಂತ.”
ರಾಜಿಯು ಮುಂದಕ್ಕೆ ತನ್ನ ವಾಡಿಗೆ ತಾನು ಓದಿಕೊಂಡು
ಹೋದಳು........ “.... ಮದರಾಸು ಬಂದರಿಗೆ ಸುಮಾರು ೫ ಮೈಲಿ
ದೂರದಲ್ಲೇ ಶತ್ರು ನೌಕೆಗಳೂ, ಏರ್ ಕ್ರಾಫ್ಟ್ ಜಹಜುಗಳೂ ಸಂಚರಿ
ಸುತ್ತಿರುವುವೆಂದು ತಿಳಿದು ಬಂದಿದೆ....' ...
ಮೂರ್ತಿಯು,.... ನಮ್ಮ ಜನ ಈಗ್ಲೆ ಎಚ್ಚತ್ತು, ತಂತಮ್ಮ
ಜಗಳಾ ಕದನಗಳೆಲ್ಲಾ ಮೂಲೆಗೊತ್ತಿ ಒಗ್ಗಟ್ಟಾಗಿ ನಿಂತು ಶತ್ರುಗಳನ್ನೆ
ದುರಿಸಿ ಮಟ್ಟಾ ಹಾಕೋಕೆ ಸಿದ್ದವಾದ್ರೂ ಬದುಕಿದ್ರು ; ಇಲ್ಲೇ
ಹೋದ್ರೆ ಜಪಾನಿಗಳು ನಮ್ಮ ದೇಶದೊಳಕ್ಕೆ ನುಗ್ಗಿ ಬರೋಕೆ ಅವಕಾಶ
ವಾಗುತ್ತೆ. ಬಂದ್ಮೇಲೆ , ನಿದ್ದೆ ಮಾಡ್ತಿರೋ ನಂಜಿನ ಎಚ್ಚರವಾಗೋ
ದೊಳಗಾಗಿ ಅವರನ್ನೆಲ್ಲಾ ತಿಗಣೆಗಳನ್ನ ಹೊಸಕಿದ ಹಾಗೆ ಹೊಸಕ್ಷಾಕಿ
ಬಿಡ್ತಾರೆ ” ಎಂದ.
ರಾಜಿಯು ಮುಂದೆ ಮುಂದೆ ಓದಿಕೊಂಡು ಹೊರಟಳು. ಮಧ್ಯೆ
ಮಧ್ಯೆ ಮೂರ್ತಿಯು ತನ್ನ ಟೀಕೆಯನ್ನೂ ಮುಂದುವರಿಸುತ್ತಿದ್ದ.
ರಾಜಿಯು ಪುಟ ತಿರುಗಿಸಿ ಓದುತ್ತಿದ್ದಾಗ ನ್ಯಾಯಾಸ್ಥಾನಗಳ ಸುದ್ದಿ
ಸಂಗ್ರಹದಲ್ಲಿ ಸೈನಿಕರಿಗೆ ಶಿಕ್ಷೆ' ಎಂಬ ಶಿರೋನಾಮೆ ಕಣ್ಣಿಗೆ ಬೀಳಲು
ಅದನ್ನು ಕುತೂಹಲದಿಂದ ಓದಿದಳು. ಅದರ ವಿವರಗಳನ್ನು
ಮೂರ್ತಿಯು ಕೇಳಲು, ಕೆಲವು ದಿನಗಳ ಹಿಂದೆ ಆ ಸೈನಿಕರು ಒಂದು
ಹಳ್ಳಿಗೆ ನುಗ್ಗಿ ಅಲ್ಲಿ ಒಬ್ಬಿಬ್ಬರು ಹೆಂಗಸರ ಮೇಲೆ ಅತ್ಯಾಚಾರ
ನಡೆಸಲು ತೊಡಗಿದಾಗ ಹಳ್ಳಿಯವರಿಗೂ ಅವರಿಗೂ ಹೊಡೆದಾಟ
ಪುಟ:27-Ghuntigalalli.pdf/೮೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಆಕಾಂಕ್ಷೆ
೭೭
