ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಬಿ, ಎಸ್. ವೆಂಕಟರಾಮ್

ಗಳಾಗಿ ಒಬ್ಬಾತನು ಸತ್ತನೆಂದೂ, ಕೊನೆಗೆ ಸೈನಿಕರು ಸಿಕ್ಕಿ ಬಿದ್ದು ವಿಚಾರಣೆಗೊಳಪಡಿಸಲ್ಪಟ್ಟಿದ್ದರೆಂದೂ ರಾಜಿಯು ತಿಳಿಸಿದಳು.

ಮೂರ್ತಿಯು, ".......ಓಹೋ ! ಅದಕ್ಕೇನೋ ಮಧ್ಯಾಹ್ನ ಇವರೆಲ್ಲ ಹಾರಾಡ್ತಿದ್ದದ್ದು ?” ಎಂದು ಮನೆಗೆ ಬಂದಿದ್ದ ಅತಿಥಿಗಳನ್ನು ದೇಶಿಸಿ ಟೀಕಿಸುತ್ತಾ........ "ಇಷ್ಟಕ್ಕೆಲ್ಲಾ ಹೀಗೆ ಕುಣಿದಾಡಿದ್ರಲ್ಲಾ ಇವು ಚೈನಾದಲ್ಲಿ ಜಪಾನೀ ಸೈನಿಕರು ನುಗ್ಗಿದ ಒಂದೊಂದು ಊರಲ್ಲೂ ಮನೆ ಮನೆಗೆ ನುಗ್ಗಿ, ಆ ಗಂಡಸ್ರೆದುರ್ಗೆನೇ ಅವರವರ ಮನೇ ಹೆಂಗಸರ ಮೇಲೆ ಅತ್ಯಾಚಾರ ಮಾಡಿದ ಕತೆಗಳೆಲ್ಲಾ ಕೇಳಿದ್ರೆ ಆಗೇನಂತಾ ಇದ್ರೋ ? ಇನ್ನೂ ನಮ್ಮ ಸೈನಿಕರು ಅವರಿಗಿಂತ ಎಷ್ಟೋ ವಾಸಿ ” ಅಂದ.

ರಾಜಿಯು ಅಸಹ್ಯ, ಜಿಗುಪ್ಪೆಗಳಿಂದ ಅವನ ಮುಖ ನೋಡುತ್ತ ಮೌನದಿಂದ ಕುಳಿತಳು. ಆದರೆ ಆ ಮೌನದಲ್ಲಿ ಕಿಂಚಿತ್ ಕೋಪವೂ ತಲೆಹಾಕಿ ಅವಳ ಮನಸ್ಸನ್ನು ಕೆರಳಿಸಿತು.

' ಅವರಿಗಿಂತ ಇವರೆಷ್ಟೋ ವಾಸೀಂತ ಅವರಾಡಿದಾಟಾನೆಲ್ಲಾ ಮೆಚ್ಕೊಳ್ಳಿ' ಎಂದಳು.

'ಹಾಗಲ್ಲ ರಾಜಿ ! ಅವರೂ ಎಲ್ಲರ ಹಾಗೆ ನುನುಷ್ಯರು. ದೇಶಕ್ಕೊಸ್ಕರ ಹೊಡೆದಾಡಿ ಸಾಯೋಕೆ ಸಿದ್ಧನಾಗಿರೋ ಸಿಪಾಯಿಗಳು. ಅಂಥಾವೋರಿಂದ ಏನು ಹೆಚ್ಚು ಕಡಿಮೆ ಆದರೂ ಜನಾ ಸ್ವಲ್ಪ ಔದಾರ್ಯ ಬುದ್ದಿ ತೋರಿಸ್ಬೇಕು. ಪರದೇಶಗಳಲ್ಲಿ ಕೋಟ್ಯಾಂತರ ಹೆಂಗಸರು ಇಂಥಾ ಸಿಪಾಯಿಗಳ ಮನರಂಜನೆಗೇಂತೇನೆ ಯುದ್ದ ಕಾಲದಲ್ಲಿ ತಮ್ಮ ಜೀವನ ಒಪ್ಪಿಸಿಬಿಡ್ತಿದ್ದಾರೆ. ಹಾಗೇನೆ ನಮ್ದೇಶ ದಲ್ಲೂನೂ ಹೆಂಗಸರ ಒಂದು ಸೈನ್ಯ, ಅದೇ ರೀತಿ ಸೈನಿಕರ ಸೇವೆಗೆ ತಮ್ಮ ಜೀವನ ಮೀಸಲಾಗಿಟ್ಟು ಮುಂದೆ ಬರಲಿ. ಅದೂ ಕೂಡ ದೇಶಸೇವೆ ಅಲ್ವೆ? ಆಗ ನೋಡು ; ನೈನಿಕರು ಯಾಕೆ ಒಲ್ಲದ ಹೆಣ್ಣಿನ ಮೇಲೆ ಕೈ ಹಾಕೋಕೆ ಬಂದಾರು ? ಸರ್ಕಾರದೋರು ಈ ತರಹ ಒಂದು ವ್ಯವಸ್ಥೆನ ಹೊರದೇಶಗಳಲ್ಲಿರೋ ಹಾಗೇನೇ ಇಲ್ಲೂ ಜಾರೀಲಿ