ಬರೋಕೆ ಅವಕಾಶ ಕಲ್ಪಿಸಿಕೊಡಬೇಕು; ಹಾಗೆ ಮುಂದೆ ಬಂದ
ಹೆಂಗಸರ ಸಾಮಾಜಿಕ ಜೀವನದ ಸ್ಥಾನಮಾನ, ಸ್ಥಿತಿಗತಿಗಳ
ಭದ್ರತೆಯ ಭರವಸೆ ಕೊಡಬೇಕು. ಅಂದ್ರೆ ಆಗ ಯಾವ ತಂಟೇನೂ
ಇರೋದಿಲ್ಲ. ಹೆಂಗಸರೂಗೂ....'
ರಾಜಿ ಬೆರಗಾದಳು ; ಇವೆಲ್ಲ ಕೇಳುತ್ತ ಕೇಳುತ್ತ ಮೂರ್ತಿಯ
ಮೇಲೇ ಒಂದು ಬಗೆಯ ದ್ವೇಷ ಹುಟ್ಟುತ್ತಿರುವಂತೆ ಅವಳಿಗೆ ಭಾನ
ವಾಯಿತು. ಆ ಭಾವನೆಗೆಡೆಗೊಡುವ ಸಂಭಾಷಣೆಯೇ ತನ್ನ ಕಿವಿಗೆ
ಬೀಳದಿದ್ದರೆ ಲೇಸೆಂದು ಅವಳು, “ ಸಾಕು ಸುಮ್ನಿರಿ! ನನಗೆ ಬೇಡ
ನಿಮ್ಮ ಪುರಾಣ ” ಎಂದು ಎದ್ದಳು. ರಾಜಿಯಾಡಿದ ಮಾತಿನ
ಧ್ವನಿಯು ಮೂರ್ತಿಯ ಹೃದಯದಲ್ಲೊಂದು ಕಿಚ್ಚನ್ನು ಹೊತ್ತಿಸಿತು.
ರಾಜಿಯ ಮನವನ್ನಿರಿದು ನೋವುಂಟುಮಾಡಬೇಕೆಂಬ ಒಂದು
ಆಕಾಂಕ್ಷೆ ತಟ್ಟನೆ ತಲೆಹಾಕಿತು.
ಪುರಾಣವೇನು ಎಂದು ? ..ಇವೆಲ್ಲ ಒಂದಲ್ಲ ಒಂದು ದಿನ
ಆಗಲೇ ಬೇಕು. ಎಂದೋ ಬಲಾತ್ಕಾರದಿಂದ ರೂಢಿಗೆ ಬರೋದು
ಈ ಹೊತ್ತೇ ತಾನಾಗಿ ಆರಂಭವಾಗಿ, ಹೆಂಗಸ್ರೇನೂ ಇದನ್ನ ಅವಮಾನ
ಅಂತ ತಿಳಿದು ತಲೆತಗ್ಗಿಸ್ಬೇಕಾಗಿಲ್ಲ ಸಿಪಾಯಿಗಳ
ತ್ಯಾಗಕ್ಕಿಂತ ಇದು ಹೆಚ್ಚಿನ ತ್ಯಾಗ. ಅವರನ್ನ ಇದಕ್ಕಾಗಿ ಯಾರೂ
ಅವಹೇಳನ ಮಾಡಿ ನಿಕೃಷ್ಟವಾಗಿ ನೋಡೋ ಹಾಗಿಲ್ಲ. ನಾಳೆ ನೀನೇ
ಹಾಗೆ ದೇಶಸೇವೆ ಮಾಡೋಕೆ ನಿಂತರೆ ನನ್ನ ದೃಷ್ಟಿಲೇನೂ ನೀನು
ಕೀಳಾಗೊಲ್ಲ. ಅದರ ಬದಲು ನೀನೊಬ್ಬ ಮಹಾ ತ್ಯಾಗಿ, 'ಹಿರೊಯಿನ್'
ಅಂತ ನಿನಗೆ ನಾನು ಗೌರವ ಕೊಟ್ಟೇನು” ಅಂದ.
ರಾಜಿಯ ತುಟಿಗಳು ಕಂಪಿಸುತ್ತಿದ್ದವು. 'ಈ ಮಾತುಗಳು ತನ್ನ ಮೂರ್ತಿಯ ಬಾಯಿಂದಲ್ಲ. ಕ್ಯಾಪ್ಟನ್ ಮೂರ್ತಿಯ ಬಾಯಿಂದ ಹೊರಟು ಬರುತ್ತಿವೆ' ಯೆಂದು ಅವಳ ಮನಸ್ಸು ಒತ್ತಿ ಒತ್ತಿ ಹೇಳಿತು. ತನ್ನ ಮೂರ್ತಿಯು ಯುದ್ಧರಂಗದಲ್ಲೇ ಮಡಿದನೇ ಎಂದು ಹೃದಯವು