ಆಹ್ವಾನ ಏನಾಯ್ತು ? ಅಂಥವಾಗ್ತದೆ. ನಾವೆಲ್ಲೂ ಪಾಪಿಗಳೇ, ರಾಜೀ ಮಾಡ್ಕೊಂಡು ಮುಗಿಸ್ಬಿಡಿ. ಸಿಟ್ಟನ್ನು ಹಾಗೇ ಉಳಿಸಿದಿರೋ ನಿಮಗೆ ಅದರಿಂದ ಕೇಡಾಗಿದೆ. ಕಥನಕಾರ: ವೃದ್ಧನ ವಿವೇಕದ ನುಡಿಗೆ ಎಳೆಯರು ಕಿವಿಗೊಡಲಿಲ್ಲ. ವೈಮನಸ್ಸು ಬೆಳೆ ಯಿತು. ಐವಾನ್-ಗೇಬ್ರಿಯಲರು ನ್ಯಾಯಾಸ್ಥಾನದ ಕಟ್ಟೆಯನ್ನು ಹತ್ತಿದರು. ಪ್ರತಿ ದಿನವೂ ಆ ಎರಡು ಕುಟುಂಬಗಳ ನಡುವೆ, ಏನಾದರೊಂದು ಕಾರಣ ಕ್ಕಾಗಿ ಜಗಳವಾಗುತ್ತಿತ್ತು. ಹಿರಿಯರ ಅನುಕರಣೆಯನ್ನು ಮಕ್ಕಳು ಮಾಡಿದರು. ಮೊದಮೊದಲು ಪರಸ್ಪರ ಬೈಗಳು, ನಿಂದನೆ, ದೂಷಣೆ, ಮುಂದೆ, ಉದ್ದೇಶಪೂರ್ವಕವಾಗಿಯೇ ಪರಸ್ಪರರಿಗೆ ಕೇಡುಂಟುಮಾಡುವ ಪ್ರಯತ್ನ, ನ್ಯಾಯಾಸ್ಥಾನದಲ್ಲಿ ಒಮ್ಮೆ ಐವಾನನಿಗೆ ಶಿಕ್ಷೆಯಾದರೆ ಮತ್ತೊಮ್ಮೆ ಗೇಬ್ರಿಯಲನಿಗೆ, ಹೀಗೆ ಆರು ವರ್ಷಗಳು ಕಳೆದುವು. ಏಳನೆಯ ವರ್ಷದಲ್ಲಿ ಒಂದು ಮದುವೆಯ ಕೂಟದಲ್ಲಿ, ಗೇಬ್ರಿಯಲನನ್ನು ಐವಾನನ ಸೊಸೆ ಕುದುರೆಗಳ !” ಎಂದು ಅವಮಾನಿಸಿದಳು. ಕುಡಿದು ಮತ್ತನಾಗಿದ್ದ ಗೇಬ್ರಿಯಲ್, ಸಿಟ್ಟು ತಡೆಯಲಾಗದೆ ಅವಳಿಗೆ ಹೊಡೆದ. ಒಂದು ವಾರ ಆ ಹೆಣ್ಣು ಮಲಗಿರಬೇ ಕಾಯಿತು. ಆಗ ಅವಳು ಗರ್ಭಿಣಿ ಬೇರೆ. ಐವಾನನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಈ ಸಲ ನೆರೆಯವನ ಕತೆ ಮುಗಿದೇ ಹೋಯ್ತದೆ' ಅಂದುಕೊಂಡ ಆದರೆ ನ್ಯಾಯಾಧೀಶರು ವಿಚಾರಣೆ ನಡೆಸುವ ಹೊತ್ತಿಗೆ ಐವಾನನ ಸೊಸೆ ಮೊದಲಿನ ಹಾಗೆಯೇ ಓಡಾಡುತ್ತಿದ್ದಳು. ಪುರಾವೆ ಇಲ್ಲವೆಂದು ನ್ಯಾಯಾ ಧೀಶರು ದೂರನ್ನು ತಳ್ಳಿ ಹಾಕಿದರು. ಐವಾನ್ ಜಿಲ್ಲಾ ಕೋರ್ಟಿಗೆ ಅಪೀಲು ಮಾಡಿದ. ಕೋರ್ಟಿನ ಸಿಬ್ಬಂದಿಗಾಗಿ ಒಂದು ಗ್ಯಾಲನ್ ಮಾದಕ ಪಾನೀಯ ಖರ್ಚಾಯಿತು. “ಗೇಬ್ರಿಯಲ್‌ಗೆ ಬಾರುಕೋಲಿನಿಂದ ಇಪ್ಪತ್ತು ಛಡಿ ಏಟು ಕೊಡಬೇಕು,” ಎಂದು ಕೋರ್ಟು ಶಿಕ್ಷೆ ವಿಧಿಸಿತು. ಗೇಬ್ರಿಯಲ್ ಛಡಿ ಏಟು ಪಡೆಯುವುದನ್ನು ನೋಡಲು ನಿಲ್ಲದೆ, ಐವಾನ್ ಕುದುರೆ ಏರಿ ಏಳು ಮೈಲು ದೂರವಿದ್ದ ತನ್ನ ಹಳ್ಳಿಗೆ ಮರಳಿದ. ನ್ಯಾಯಾಸ್ಥಾನದ ತೀರ್ಪನ್ನು ತಿಳಿದ ತಂದೆಗೆ ಸಂಕಟವಾಯಿತು. ೧೧೫
ಪುಟ:AAHVANA.pdf/೧೧೫
ಗೋಚರ