ಪುಟ:AAHVANA.pdf/೧೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ ಕಾರಣ, ಪ್ರಬಲ ಪ್ರತಿಭಟನೆ ಸಾಧ್ಯವಾಗಲಿಲ್ಲ. ಅದೇ ದೌರ್ಬಲ್ಯದಿಂದ ದೇಶ ಬಳಲುತ್ತಿದ್ದಾಗ ಘಜನಿಯ ಮಹಮ್ಮದ ದಂಡೆತ್ತಿ ಬಂದ. ರಜಪೂತರೊಳಗಿನ ಒಳ ಜಗಳಗಳು, ಬಾರಿಬಾರಿಗೂ ಘಜನಿ ಜಯಶೀಲನಾಗಲು ನೆರವಾದುವು.

 ದಕ್ಷಿಣದಲ್ಲಾ ಇದೇ ಕಥೆ. ಬಾದಾಮಿಯಲ್ಲಿ ಚಾಲುಕ್ಯರ;  ಮಳ 

ಖೇಡದಲ್ಲಿ ರಾಷ್ಟ್ರಕೂಟರು; ಕಾಂಚಿಯಲ್ಲಿ ಪಲ್ಲವರು. ಪ್ರತಿಯೊಬ್ಬನಿಗೂ ನೆರೆಯವನನ್ನು ಹಿ೦ಡಿ ತನ್ನ ರಾಜ್ಯವನ್ನು ವಿಸ್ತರಿಸುವ ದುರಾಶೆ.

  ಉತ್ತರದ ಗುರ್ಜರರಿಗೆ, ಪರಕೀಯರಾದ ಅರಬರ ವಿಷಯದಲ್ಲಿ ಎಷ್ಟು

ದ್ವೇಷವಿತ್ತೋ ಅಷ್ಟೇ ದ್ವೇಷ ದೇಶ ಬಾಂಧವರಾದ ರಾಷ್ಟ್ರಕೂಟರ ಬಗೆಗೂ ಇತ್ತು !

  ತೀರಾ ದಕ್ಷಿಣದಲ್ಲಿ, ಮೂವರು ಸಹೋದರರ-ಪಾಂಡ್ಯರು, ಚೋಳರು, 

ಚೇರರು-ತಮಿಳು ರಾಜ್ಯಗಳಿದ್ದುವು. ಅವರೊಳಗೆ ಹಿರಿಮೆಗಾಗಿ ಪರಸ್ಪರ ಮೇಲಾಟ ನಡೆಯುತ್ತಿತ್ತು ; ಯುದ್ಧಗಳಾಗುತ್ತಿದ್ದುವು.

  ಉತ್ತರದಲ್ಲಿ ಘಜನಿ ಹದಿನಾರು ಸಲ ಬಂದು ಹೋದ. ಆನಂತರ 

ಘೋರಿಯ ಮಹಮ್ಮದನ ಆಗಮನವಾಯಿತು [೧೧೭೫-೬ ನೆಯ ಇಸವಿ). ಆಗ ಉಚ್ಚ್ನ ರಾಣಿ ತನ್ನ ಪತಿಯ ವಿರುದ್ಧ ಘೋರಿಗೆ ನೆರವಾದಳು.

  ಆ ವೇಳೆಯಲ್ಲಿ ಉತ್ತರದೆ ಹಾಗೂ ಮಧ್ಯ ಭಾರತದ ರಾಜ್ಯಗಳ 

ನಡುವೆ ಕಲಹಗಳಿದ್ದುವು. ಆಗ ದಿಲ್ಲೀಶ್ವರನಾಗಿದ್ದ ಪೃಥ್ವೀರಾಜ ಚೌಹಾಣ್ ಘೋರಿಯನ್ನು ಇದಿರಿಸಿದ. ಆದರೆ, ಪೃಥ್ವೀರಾಜನ ಮಾವ ಜಯಚಂದ್ರ ಘೋರಿಯ ಪಕ್ಷವಹಿಸಿ, ದಿಲ್ಲಿ ಪರಕೀಯರ ವಶವಾಗಲು ಕಾರಣನಾದ.

  ಹದಿನಾಲ್ಕನೆಯ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ 

ಸೇನಾನಿ ಮಲ್ಲಿಕ್ ಕಾಫರ್ ದಕ್ಷಿಣದ ಮೇಲೆ ದಂಡೆತ್ತಿಹೋದ. ಅಲ್ಲಿ ಮುಖ್ಯ ರಾಗಿದ್ದವರು ತೆಲಂಗಾಣದ ಕಾಕತೀಯರು, ದೇವಗಿರಿಯ ಅರಸರು, ದ್ವಾರ ಸಮುದ್ರದ ಹೊಯ್ಸಳರು. ಇವರೊಳಗೆ ಐಕ್ಯವಿರಲಿಲ್ಲ. ಮಲ್ಲಿಕ್ ಕಾಫರ್ ಸುಲಭವಾಗಿ ಒಬ್ಬೊಬ್ಬರನ್ನಾಗಿ ಅವರನ್ನು ಸದೆಬಡೆದ. ಮುಂದೆ ಅವನ ದ೦ಡು ತಮಳು ನಾಡನ್ನು ಪ್ರವೇಶಿಸಿತು. ಆಗ ಮಧುರೆಯ ಪಾಂಡ್ಯರು