ಪುಟ:AAHVANA.pdf/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ ನಿರೂಪಕ : ನಾವಾದರೋ ನೆಲದ ಮೇಲೆ ನಿಂತು ಮುಗಿಲಿನ ಚಿತ್ರಶಾಲೆಯನ್ನು ನೋಡುವ ಪ್ರೇಕ್ಷಕರು. ಆತ ಮೇಘಕ್ಕಿಂತಲೂ ಮೇಲಿದ್ದು,ಎಲ್ಲವನ್ನೂ ದಿಟ್ಟಿಸುವ ಭಾಗ್ಯಶಾಲಿ. ಸತ್ಯಾನ್ವೇಷಕ: [ಯೋಚನೆಗೊಳಗಾಗಿ, ನಿಧಾನವಾಗಿ] ಅಲ್ಲಿಂದ ಸತ್ಯಾನ್ವೇಷಣೆ ಎಷ್ಟೊಂದು ಸುಲಭವಿದ್ದೀತು! ನಿಜಸ್ಥಿತಿಯ ಸಮೀಕ್ಷೆ ಸಮರ್ಪಕವಾದೀತು! [ಒಮ್ಮೆಲೆ ಗಟ್ಟಿಯಾಗಿ, ಆಕಾಶ ದತ್ತ ಮುಖಮಾಡಿ] ಅಪ್ಪಾ, ಅಪ್ಪಾ, ವಿಶ್ವಮಾನವ ! ವಿಶ್ವಮಾನವ : [Beep Beep] ಯಾರು ? ಸತ್ಯಾನ್ವೇಷಕ : ನಾನು ಸತ್ಯಾನ್ವೇಷಕ. ಬಡ ಭಾರತೀಯ. ನಿರೂಪಕ : ಬಡ ಭಾರತೀಯ! ಯುಗಯುಗಗಳ ಸಂಸಾರದ ಲಕ್ಷಣ ಈ ವಿನಯಶೀಲತೆ . ವಿಶ್ವಮಾನವ : ಮಹಾನ್ ರಾಷ್ಟ್ರವೊಂದರ ಪ್ರಜೆ. ಸತಾನ್ವೇಷಕ : [ಭಾವೋದ್ವೇಗದಿಂದೆ] ಹಾಗಾದರೆ ನನ್ನ ದೇಶವನ್ನು ನೀನು ಬಲ್ಲೆ ! ವಿಶ್ವಮಾನವ : ಹಲವು ಹೆಸರುಗಳ ನಾಡು : ಜಂಬೂದ್ವೀಪ, ಆರ್ಯಾವರ್ತ, ಭರತವರ್ಷ, ಹಿಂದೂಸ್ಥಾನ, ಇಂಡಿಯಾ. ಗತವೈಭವಗಳ ಭಾರತವನ್ನು ಯಾರು ತಾನೇ ಅರಿಯರು?

೫೯