ಪುಟ:Abhaya.pdf/೧೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಆಕೆ ಚೇತರಿಸಿಕೊಂಡಾಗ, "ಮಗು ಸತ್ತು ಬದುಕಿತು" ಎಂದು ಸಮಾಧಾನದ ಉಸಿರೆಳೆದರು ತಂದೆ.

ಆದರೆ ಚೇತರಿಸಿಕೊಳ್ಳುತಿದ್ದ ತುಂಗಮ್ಮ ಮಲಗ್ಗಿದ್ದಲ್ಲಿಂದಲೆ ತಂದೆಯ ಕೈಗಳಿಗೆ ಆತುಕೊಂಡು, ವಯಸಾಗ್ಗಿದ್ದ ಆ ಬೆರಳುಗಳಿಗೆ ಕಣ್ಣೀರಿನ ಸ್ನಾನಮಾಡಿಸಿದಳು.

"ಯಾಕಮ್ಮ, ಯಾಕೆ ಅಳ್ತಿದ್ದೀಯಾ? ಬೇಗನೆ ಗುಣವಾಗತ್ತೆ ಯಾವ ಹೆದರಿಕೇನೂ ಇಲ್ಲ...."

-ಎಂದು ತಂದೆ ರೋಗಿಯನ್ನು ಸಂತೈಸಿದರು ಕ್ಷೀಣವಾಗಿದ್ದರೂ ಕೇಳಿಸಿತು.

"ನುಂಗೆ ಗುಣವಾಗದೇ ಇದ್ರೂ ಮೇಲು ಅಣ್ಣ"

"ಯಾಕೆ, ಯಾಕೆ ಹಾಗಂತೀಯಾ ಮಗಳೆ."

"ಅಣ್ಣ, ಅಣ್ಣಯ್ಯ, ನಾನು ದೊಡ್ಡ ತಪ್ಪು ಮಾಡಿದೀನಿ ಅಣ್ಣಯ್ಯ."

ತುಂಗಮ್ಮನ ತಂದೆಗೆ ಆಕ್ಷಣ ಅರ್ಥವಾಗಲಿಲ್ಲ; ಆದರೆ ಮರುಕ್ಷಣವೆ ಅರ್ಥವಾಯಿತು ಅರ್ಥವಾದಗ ಹೃದಯ ಕ್ರಿಯೆ ನಿಂತು ಚಲಿಸಿತು.

ತನ್ನ ಬಲಗೈಯನ್ನು ಮಗಳ ಬಿಗಿತದಿಂದ ಬಿಡಿಸಿಕೊಂಡು, ಆಕೆಯ ತಲೆಗೂದಲ ಮೇಲೆ ಆ ತಂದೆ ಕೈಯಾಡಿಸಿದರು. ಆ ವಯಸ್ಸಾದ ಕಣ್ಣುಗಳಲ್ಲಿ ಮೂಡಿ ಬಂದ ಬಿಸಿಯಾದ ಮೇಲೆ ಬಾಗಿ, ಮಗಳ ತಲೆಯನ್ನು ಭಾರವಾದ ತನ್ನ ಹೃದಯಕ್ಕೆ ಅನಿಸಿಕೊಂಡು ಬಹಳ ಹೊತ್ತು ಅವರು ಹಾಗೆಯೇ ಕುಳಿತರು.

ಮಗಳು ಮತ್ತಷ್ಟು ಕ್ಷೀಣವಾದ ಸ್ವರದಲ್ಲಿ ಕೇಳಿದಳು:

"ತವ್ವಾಯ್ತು, ಕ್ಷಮಿಸ್ತೀಯಾ ಅಣ್ಣ, ಅಣ್ಣ, ಕ್ಷಮಿಸ್ತೀಯಾ?"

"ಮಾತಡ್ಬೇಡ ತುಂಗ ಆಯಾಸವಾಗುತ್ತಿ...."

ಎನ್ನುತ್ತ ತಂದೆ ಬಲುಪ್ರೀತಿಯಿಂದ ತನ್ನ ತೋರು

ಬೆರಳಮನ್ನು ಮಗಳ ತುಟಿಗಳಿಗೆ ಅಡ್ಡವಾಗಿ ಹಿಡಿದರು. ಆ ಸ್ವರವೂ ನಡುಗುತ್ತಿತ್ತು-ಬೆರಳೂ ಕೂಡಾ.

....ಮಗಳು ಬದುಕಿದಳು. ತಂದೆ ತಲೆಕೆಡಿಸಿಕೊಳ್ಳಲಿಲ್ಲ.