ಪುಟ:Abhaya.pdf/೧೧೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ಮದುವೆಯಾಗೆಂದು ಆ ಬೇಡಿಕೆಯಲ್ಲ.ಅದರ ಆಸೆ ಅವರಿಗಿರಲಿಲ್ಲ.ಸಪತ್ನೀಕನಾಗಿದ್ದ ಆತನೊಡನೆ ತನ್ನ ಮನೆತನದ ಮಾನರಕ್ಷಣೆಯ ಅಭಯವನ್ನು ಅವರು ಯಾಚಿಸಿದರು.

ಮೊದಲು ಆಳುಕಿದರೂ ಆತ ನಿರಾಕರಿಸಲಿಲ್ಲ.

...ಹಾಗೆ ತುಂಗಮ್ಮ ಬೆಳಗಾಂವಿಯ ಅಕ್ಕನಮನೆಗೆಂದು ಹೊರಟು,ತಮನನ್ನು ಬೀಳ್ಕೊಟ್ಟು ತಂದೆಯೊಡನೆ ಬೆಂಗಳುರಿನ ಹಾದಿ ಹಿದಿದಳು.

ಆಕೆಯನ್ನು ಶಿಷ್ಯನ ಮನೆಯಲ್ಲಿರಿಸಿ ತಂದೆ, ತಮ್ಮ ಒಂಟಯಾದ ಬರಡು ಜೀವಸದತ್ತ ಹೊರಟರು.

ಹೊರಡುತ್ತ ಅವರೆಂದರು:

"ಹೋಗ್ತೀನಿ ತುಂಗಾ. ದೇವರಿದ್ದಾನೆ ಮನೆಯವರಿಗೇನೂ ತೊಂದರೆ ಕೊಡ ಬೇಡವಮ್ಮ..."

ಬಿಕ್ಕಿ ಬಿಕ್ಕಿ ಅಳುತಿದ್ದುದೇ ತುಂಗಮ್ಮ ಕೊಟ್ಟ ಉತ್ತರ.

ತಂದೆಯ ಮನಸ್ಸು ಕಹಿಯಾಗಿತ್ತು. ಆದರೂ ಅವರು ಅಳುತಿದ್ದ ಮಗಳ ಬಳಿಗೆ ಬಂದು ಸಂತೈಸಿದರು.

"ಆಗಬಾರದ್ದು ಆಗಿ ಹೋಯ್ತು. ಅಳಬೇಡ ತುಂಗಾ. ಅಳ ಬೇಡ...."

ತುಂಗಮ್ಮ ಧ್ವನಿ ತೆಗೆದು ಅತ್ತಳು.

ತಂದೆ, ತನ್ನ ಮಗಳ ತಲೆಗೂದಲ ಮೇಲೆ ಬೆನಿನ ಮೇಲೆ ಕೈಯಾಡಿಸಿದರು. ಕಂಬನಿ ನಿಲಜ್ಜನಾಗಿ ಅವರ ಬತ್ತಿದ ಕಪೋಲಗಳ ಮೇಲಿಂದ,ನರೆತ ಕುರಚಲುಗಡ್ಡದ ಮೇಲಿಂದ, ಹರಿಯಿತು.