ಪುಟ:Abhaya.pdf/೧೩೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನಾನಿರುವಾಗ ಯಾ ವ ನಾ ದ ರೂ ಮೈ ಮುಟ್ಟೋ ಯೋಚ್ನೆ ಮಾಡ್ಲಿ!"

"ಸಾಕು-ಸಾಕೇ!"

-ಎನ್ನುತ್ತ ಲಲಿತಾ, ಜಲಜೆಯನ್ನೆಳೆದು ಕೊಂಡು ಹೋದಳು.

....ಬಿಸಿಲು ಕ್ರೂರವಾಗಿತ್ತು ಕಣ್ಣು ಮುಚ್ಚಿ ನಿದ್ದೆ ಹೋಗಲು ತುಂಗಮ್ಮ ಯತ್ನಿಸಿದಳು. ಬಹಳ್ ಹೊತ್ತು ನಿದ್ದೆ ಬರಲಿಲ್ಲ....ಆಮೇಲೆ ಮಂಪರು.

ಆದರೂ ಏನೇನೊ ಸ್ವರಗಳು ಕೇಳಿಸುತಿದ್ದುವು.

ಯಾರೋ-ದೊಡ್ದಮ್ಮನೇ ಇರಬಹುದು-ಇಣಿಕಿನೋಡಿ,ಬಳಿಕ ಬಾಗಿಲೆಳೆದುಕೊಂಡು ಹೋದ ಹಾಗಾಯಿತು.

....ಹೊರ ಬಾಗಿಲನ್ನು ಬಡೆದ ಸದ್ಪು.

ಬಾಗಿಲಿನೆದುರು ಜಗಲಿಯಲ್ಲಿ ಹುಡುಗಿಯೊಬ್ಬಳ ಸ್ವರ:

"ಮಗ್ಗದ ಮೇಷ್ಟ್ರು ಬಂದ್ರು, ಬನ್ರೇ...."

ಗಂಡಸೊ, ಹೆಂಗನೊ...ಅಂತೂ ದಾರವನ್ನು ಬಟ್ಟೆಯಾಗಿ ಹೇಗೆ ಮಾರ್ಪಡಿಸಬೇಕೆಂದು ಹೇಳೆ ಕೊಡುವವರೊಬ್ಬರು.

....ಮತ್ತೋಮ್ಮೆ ಬಾಗಿಲು ಬಡೆದು ಸದ್ದು.

ಯಾರು ಬಂದರೊ ಈಗ?

ಸ-ರಿ-ಗ-ಮ-ಪ-ದ-ನಿ-ಸ

ಸರಿಗಮಪದನಿಸ.... ಸಂಗೀತ ಹೇಳಿ ಕೊಡುತಿದ್ದಾರೆ ಯಾರೋ.

ಹಾಗಾದರೆ, ತನಗೆ ಎಚ್ಚರನಾಗದಂತೆ ಕೊಠಡಿಯೊಳಕ್ಕೆ ಬಂದು,ಹುಡುಗಿಯರು ಹಾರ್ಮೋನಿಯಂ ಪೆಟ್ಟಿಗೆಯನ್ನು ಒಯ್ದಿರಬೇಕು.

"ಕತ್ತೆಗಳು! ಥುತ್!"

-ಎಂದು ಯಾರೋ ಬಯ್ಯುತಿದ್ದರು. ಯಾರ ಸ್ವರ? ದೊಡ್ಡಮ್ಮ ಹಾಗೆ ಬಯ್ಯುವವರಲ್ಲ. ಹಾಗಿದ್ದರೆ ಸಂಗೀತದ ಅಧ್ಯಾಪಿಕೆ ಇರಬಹುದು.

ಸತಾಲ್-ಸಿತೀಲ್....ಮಗ್ಗ ಚಲಿಸುತ್ತಿದೆ....ಸತಾಲ್-ಸಿತೀಲ್.