ಪುಟ:Abhaya.pdf/೧೪೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಯಾದ ತನ್ನನ್ನು ಸುತ್ತಲಿನ ಜನ ಬಂಜೆಯೆಂದು ಕರೆದಿದ್ದರು. ಆದರೂ ಚೊಚ್ಚಲ‍ ಹೆರಿಗೆಯಲ್ಲಿ ಯಾವಾಗಲೂ ಹೆಣ್ಣು, ಗಂಡುಮಗುನ್ನೇ ಬಯಸುತ್ತಾಳೆಂಬುದು ಸರಸಮ್ಮನ ತಿಳಿವಳಿಕೆಯಾಗಿತ್ತು...

ಕತ್ತಲಾಗಿ ಊಟವಾಗಿ ಹುಡುಗಿಯರು ಮಲಗುವ ಸಿದ್ದತೆ

ಮಾಡಿದರು. ತುಂಗಮ್ಮನ ಬಳಿ ನಿಂತಿದ್ದವರೂ ಒಬ್ಬೊಬ್ಬರಾಗಿ ಹೋಗಿ ಊಟಮಾಡಿ ಬಂದರು. ಹೆಚ್ಚಿನ ದೀಪಗಳನ್ನು ಆರಿಸಿದ್ದಾಯಿತು. ಹೊರಗೆ ಹಾಲು ಚೆಲ್ಲಿದಹಾಗೆ ಬೆಳುದಿಂಗಳಿತ್ತು. ಆ ತಿಂಗಳು ಬೆಳಕಿಗೆ ಸುಂದರವಾಗಿ ತೋರುತಿತ್ತು ಹೂವಿನ ಉದ್ಯಾನ. ಬಡಕಲು ದಾರದ ನೆರವಿನಿಂದ ಹೊರ ಹೋಗಲು ಬಯಸುತ್ತ ಗೋಡೆಯೇರಿದ್ದ ಮಲ್ಲಿಗೆಯ ಬಳ್ಳಿಯಿಂದ ನೂರಾರು ಹೂಗಳು ಕಂಪನ್ನು ಸೂಸುತಿದ್ದುವು. ಗುಲಾಬಿಯ ಮೊಗ್ಗುಗಳು ಕ್ಷಣ ಕ್ಷಣವೂ ಬೆಳೆಯುತ್ತ, ಬಿರಿಯುವ ಸಿದ್ಧತೆ ಮಾಡುತಿದ್ದುವು

ಉಂಡು ಕೈ ತೊಳೆದ ಸರಸಮ್ಮ, ಚೂರು ಕಡ್ಡಿಯಿಂದ ಹಲ್ಲುಕೀಳುತ್ತ,

ಒಂದೆರಡು ನಿಮಿಷ ನಿಸರ್ಗದ ರಮಣೀಯತೆಯನ್ನು ನೋಡುತ್ತ, ನಿಂತರು.ಯಾವ ಯೋಚನೆಯನ್ನೂ ಮಾಡದೆ ಆವರ ಮೆದುಳು ವಿರಮಿಸಿ ಆ ದ್ಯಶ್ಯದಲ್ಲಿ ತಲ್ಲೀನವಾಯಿತು.

ಕೊಠಡಿಯೊಳಗಿಂದ ಯಾಕೊ ನರಳಾಟ ಕೇಳಿಸುತ್ತಿರಲಿಲ್ಲ.

ಸರಸಮ್ಮ ಮೆಲ್ಲನೆ ಕೊಠಡಿಯತ್ತ ಹೆಜ್ಜೆ ಇಟ್ಟು ಬಾಗಿಲನ್ನು ಹಿಂದಕ್ಕೆ

ತಳ್ಳಿ, ಕೈಸನ್ನೆಯಿಂದ ಜಲಜೆಯನ್ನು ಹೊರಕ್ಕೆ ಕರದರು ಆ ಬಳಿಕ ಪಿಸಮಾತು.

"ತುಂಗಾ ಮಲಕೊಂಡ್ಲಾ ?" '

'ಹೂಂ ದೊಡ್ದಮ್ಮ. ನೋವು ನಿಂತೋಯ್ತೆ ದೊಡ್ಡಮ್ಮ ಹಾಗಾದ್ರೆ !

"ಒಮ್ಮೊಮ್ಮೆ ಹಾಗಾಗುತ್ತೆ, ಹಿಂದೆ ಗೋದಾವರಿ ಇದ್ಲು ನೋಡು.

ಅವಳಿಗೂ ಹಾಗೇ ಆಗಿತ್ತು. ನೆನಪಿಲ್ವಾ ?

ಹೂಂ...ಹೂಂ...ಹೌದು. ನಾನು ಬಂದ ವರ್ಷ ಆದರೆ ಆಕೇನ

ಆಗ ಆಸ್ಪತ್ರೆಗೆ ಕರಕೊಂಡು ಹೋದ್ರಿ ಅಲ್ವೆ ?"

ಹೂಂ."