ಪುಟ:Abhaya.pdf/೧೪೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ದುದೂ ವ್ಯರ್ಥವಾಯಿತು "ಡಾಕ್ಟರಮ್ಮ ಸೀರಿಯಸ್ ಕೇಸು ನೋಡ್ಕೊಂಡು ಬರೋಕೆ ಹೋಗಿದಾರೆ," ಎಂದು ಉತ್ತರವಿತ್ತ ಮನೆಯ ಆಳು.

ಅಂಬ್ಯುಲೆನ್ಸ್ ಗಾಡಿ ತರಿಸಿ ಆಸ್ಪತ್ರೆಗೆ ಸೇರಿಸಿ ಬಿಡೋಣವೆ? ಎಂದು ತೋರಿತೊಮ್ಮೆ. ಆದರೆ ಆ ಅವರಾತ್ರಿಯಲ್ಲಿ ಅಭಯಧಾಮದ ರೋಗಿಗೆ ಯೋಗ್ಯ ಚಿಕ್ಕಿತ್ಸೆ ದೊರೆಯುವುದು ಸಾಧ್ಯವೇ ಇಲ್ಲವೆಂಬುದನ್ನು ಸರಸಮ್ಮ ಹಿಂದಿನ ಅನುಭವದಿಂದ ತಿಳಿದಿದ್ದರು

ಹುಡುಗಿಯರಲ್ಲೆಷ್ಟೋ ಜನ ಆ ರಾತ್ರೆ ಬಹಳ ಹೊತ್ತು ನಿದ್ದೆ ಹೋಗಲಿಲ್ಲ. ಸರಸಮ್ಮ,ಜಲಜ-ಲಲಿತ-ಸಾವಿತ್ರಿಯರೊಡಗೂಡಿ ಕಣ್ಣಿಗೆ ಅಂಜನ ಹಾಕಿ ನಿಂತರು ತಿಂಗಳ ಬೆಳಕು ಆ ರಾತ್ರೆಯೂ ಅಣಕಿಸುತ್ತ ನಗುತಿತ್ತು ಆದರೆ ಯಾರೂ ಅದನ್ನು ಗಮನಿಸಲೇ ಇಲ್ಲ.

ರಾತ್ರೆ ಕಳೆದು ಬೆಳಕು ಬರುತಲಿದ್ದಂತೆ ಸರಸಮ್ಮ ಹೊರಬಂದು ಹೇಳಿದರು:

"ಜಲಜ-ಲಲಿತಾ, ಒಂದು ಕೆಲಸ ಮಾಡ್ತೀರೇನಮ್ಮ?"

"ಹೇಳಿ"

"ನೀವಿಬ್ರೂ ಈಗಿಂದೀಗ ನಮ್ಮ ಕಾರ್ಯದರ್ಶಿ ಮನೆಗೆ ಹೋಗ್ಬೇಕು.ಚೀಟಿಕೊಡ್ತೀನಿ ಅವರನ್ನ ಎಬ್ಬಿಸಿ ಆಕೆ ಕಾರನಲ್ಲಿ ಲೇಡಿ ಡಾಕ್ಟರನ್ನೂ ಕರಕೊಂಡು ನೀವು ಬರಬೇಕು."

"ಕೊಡಿ ಚೀಟಿ," ಎಂದಳು ಜಲಜ,

ಮಹಾಧೈರ್ಯನವಂತೆ ಲಲಿತಾ, ಅಳುಮೋರೆಯಿಂದ ತುಂಗಮ್ಮನ ಕೊರಡಿಯತ್ತ ನೋಡಿದಳು. ಆಕೆಯ ಕಣ್ಣಂಚಿನಲ್ಲಿ ನೀರು ತುಳುಕಾಡಿತು.

"ಧೂ," ಎಂದು ಸರಸಮ್ಮ, ಆವರಿಬ್ಬರನ್ನೂ ತಮ್ಮ ಕೊಠಡಿಗೆ ಕರೆದುಕೊಂಡು ಹೋದರು. "ಯಾಕೆ ಹೀಗ್ಮಾಡ್ತೀರಾ? ಏನಾಗಿದೇಂತ? ಅಳಬೇಡಿ! ತುಂಗಮ್ನಿಗೆ ಏನೂ ಕೆಡುಕಾಗೋಲ್ಲ. ದೇವರಿದ್ದಾನೆ.... ಕೇಳಿಸ್ತೇನ್ರೇ?"

ಅವರು, ಅಭಯಧಾಮ ಸಮತಿಯ ಕಾರ್ಯದರ್ಶಿನಿಗೆ ಚೀಟಿಬರೆದು,ಹುಡುಗಿಯರನ್ನು ಕಳುಹಿದರು.