ಪುಟ:Abhaya.pdf/೧೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


ಏಳು ಘಂಟೆಯ ಹೊತ್ತಿಗೆಲ್ಲಾ ಹಾನ್ರ ಮಾಡುತ್ತಲೇ ಕಾರು ಬಂತು

"ನೆನ್ನೇನೇ ಯಾಕೆ ತಿಳಿಸ್ಲಿಲ್ಲ?" ಎನ್ನುತ್ತಲೇ ಕಾಯ್ರದಶಿನಿಯೂ ಲೇಡಿ ಡಾಕ್ಟರೂ ಆಕೆಯ ಸಸೋ ಜಲಜ - ಲಲಿತೆಯರೂ ಒಳಬಂದರು. ಹಿಂದಿನ ಸಂಜೆರಾತ್ತೇಯೆಲ್ಲ ಡಾಕ್ಟರು, ನೆರವಿಗೆ ನಿಮತ ನಸ್ರೂ- ಈ ಮೂವರನ್ನು ಒಳಗಿಟ್ಟುಕೊಂಡು, ಕೊಠಡಿಯ ಬಾಗಿಲು ಮುಚ್ಚಿಕೊಮಡಿತು.

ಇವ್ವತ್ತು ನಿಮಿಷಗಳ ಮೇಲೆ ಆ ಲೇಡಿ ಡಾಕ್ಟರ ಹೊರಬಂದರು, ಅಲ್ಲಿ ಮುಳ್ಳಿನಮೆಲ್ಲೆ ನಿಂತಿದ್ದ ಗಂಡನಿರಲಿಲ್ಲ. ಎಂಥ ಮಗುವೆಂದು ತಿಳಿಯಲು ಅತುರ ವಡುತ್ತಿದ್ದ ಸಂಬಂಧಿಕರಿರಲಿಲ್ಲ ಆದರೂಎಷ್ಟೋಂದು ಜನರಿದ್ದರು ಆಲ್ಲಿ! ಕಂಬಗಳಾಗಿದ್ದರು ಕೆಲವು ಹುಡುಗಿಯರು. ಕುಳಿತಲ್ಲೆ ನಿಂತಲ್ಲೆ ನಷ್ಚಿಲವಾಗಿ ನಿಗ್ರಹಗಳಾಗಿದ್ದರು ಕೆಲವರು ಮೂಗಿ ಕಲ್ಯಾಣಿ ಎಲ್ಲರಿಗಿಂತಲು ದಾರ ಮೂಲೆಯಲ್ಲಿ ಮ್ವನವಾಗಿದ್ದರು ಕುರುಡಿ ಸುಂದ್ರಾಳ ಕಣ್ಣುಗಳುಮಾತನಾಡುತಿದ್ದುವು ಆ ಘಳಿಗೆಯಲ್ಲಿ ಎಷ್ಟೊಂದು ಜನ ಸಂಬಂಧಿಕರು ಒಳಗಿದ್ದ ಒಂದು ಜೀವಕ್ಕೆ! ಆಲೇಡಿ ಡಾಕ್ಟರು ಒಂದು ಮಾತು ಹೇಳಿದರೆ ಸಾಕು, ಅವರೆಲ್ಲ ಗೋಳೋ ಎಂದು ಅಳುವುದಕ್ಕೂ, ಸಿದ್ದ; ಓಹೋ ಎಂದು ನಗುವುದಕ್ಕೂ ಸದ್ದ

ಆದರೆ ಆ ಡಾಕ್ಟರು ಏನನ್ನೂ ಅನ್ನಲಿಲ್ಲ ಕೈ ಸನ್ನೆಯಿಂದಲೆ ಸರಸಮ್ಮನನ್ನೂ ಕಾಯ್ರಾದಶಿನಿಯನ್ನೂ ಕರೆದುಕೊಂಡು ನಕ್ಕದ ಕೊಠಡಿಗೆ ಹೋದರು. ಅಲ್ಲಿ ಒಂದು ನಿಮಿಷ-ಅಲ್ಲಿ ಒಂದು ಯುಗ ಮಾತುಕತೆ.

ಮತ್ತೋಮ್ಮೆ ತುಂಗಮ್ಮನ ಕೊಠಡಿಯ ಬಾಗಿಲು, ಡಾಕ್ಟರನ್ನು ಬರಗೊಟ್ಟು, ಮುಚ್ಚಿಕೊಂಡಿತು.

ಆನಂತ ಕಾಲದಂತೆ ಕಂಡ ಅನಂತರದ ಹದಿನ್ಐದು-ಇಪ್ಪತ್ತು-ಇಪ್ಪತ್ತೆದು ನಿಮಿಷ....

ಡಾಕ್ಟರು ಬಾಗಿಲು ತೆರೆದು ಸರಸಮ್ಮನನ್ನು ಒಳಗೆ ಕರೆದರು.