ಪುಟ:Abhaya.pdf/೧೭೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೬೮
ಅಭಯ


ಮಯಿ. ಸದ್ಗುಣಗಳ ಖನಿ. ಆಕೆ ಅಭಯಧಾಮಕ್ಕೆ ಬಂದುದರಿಂದಲೆ,
ಅಲ್ಲಿನ ವಾತಾವರಣದ ಕಾರಣಾದಿಂದಲೆ, ತಾವು ತೋರಿದ ಪ್ರೀತಿಯ
ಪರಿನಣಾಮವಾಗಿಯೆ, ಜಲಜ ಒಳ್ಳೆಯವಳಾಗಿ ಮಾರ್ಪಟ್ಟಳೆಂಬುದನ್ನು
ಸರಸಮ್ಮ ಅರಿತಿದ್ದರು. ಮೊದಲು ಅಕೆಯಲ್ಲಿದ್ದುದು ಸಂಕೋಚ ಪ್ರಕೃತ್ತಿ.
ಕ್ರಮೇಣ ಅದು ಮರೆಯಾಗಿ, ಅವರ ಜಾಗದಲ್ಲಿ ಸಂಕೋಚ ಪ್ರವೃತ್ತಿ
ಮರೆಯಿತು. ಬೇಗನೆ ಆ ಘಟ್ಟವನ್ನೂ ದಾಟ ಆಕೆ ಅಭಯಧಾಮದ
ಕೆಲವೇ ಆಧಾರ ಸ್ತಂಭಗಳಲ್ಲಿ ಒಬ್ಬಳಾದಳು.

ಒಂದಲ್ಲ ಒಂದು ದಿನ ಈ ಹಕ್ಕಿ ಗೂಡು ಬಿಟ್ಟು ಹಾರಿ ಹೋಗುವು
ದೆಂಬುದರ ಬಗ್ಗೆ ಸರಸಮ್ಮನಿಗೆ ಸಂಶಯವಿರಲಿಲ್ಲ ಯಾರ ಕಣ್ಣಿಗಾದರೊ
ಆಕೆ ಬಿದ್ದು ಒಳ್ಳೆಯ ವರ ಕೂಡಿಬಂದರೆ ಜಲಜೆಯನ್ನು ಬೇಗನೆ ಮದುವೆ
ಮಾಡಿಸಿ ಕಳುಹಿಸಬೇಕೆಂಬುದೇ ಸರಸಮ್ಮನ ಅಪೇಕ್ಷೇಯಾಗಿತ್ತು ಹಾಗೆ
ಹೋಗುವ ಜಲಜ, ಅಭಯಧಾಮದ ಹಿರಿಮೆಯ ಕೀರ್ತಿಸತಾಕೆಯೊಡನೆ
ಹೋಗುತಿದ್ದಳು...ಜಲಜ ತಮ್ಮ ಪ್ರಿತಿವಾತ್ರಲಳಾಗಿದ್ದರೂ ಆಕೆ ಹೋಗು
ವುದರಿಂದ ತಾವು ದುರ್ಬಲರಾದೇನೆಂದು ಸರಸಮ್ಮನಿಗೆ ಅನಿಸುತ್ತಿರಲಿಲ್ಲ.
ಆದರೆ ತುಂಗಮ್ಮನ ವಿಷಯವೇ ಬೇರೆ.ಬೌದ್ಧಿಕವಾಗಿ ಅಕೆಗೂ
ಜಲಜೆಗೂ ನಡುವೆ ಆಳೆಯಲಾಗದ ಅಂತರವಿತ್ತು ಜಲಜೆಯಲ್ಲಿ ಸರಸಮ್ಮ
ಕಂಡುದು ಒಂದು ಸಂಸಾರವನ್ನು ಬೆಳಗಿಸುವ ಶಕ್ತಿ. ತುಂಗಮ್ಮನಲ್ಲಿ ಮಾತ್ರ
ಅಪರಿಮಿತವಾದ ಸುಪ್ತ ಸಾಮರ್ಥ್ಯವಿದೆ ಎಂಬುದು ಅವರ ಅಭಿಪ್ರಾ
ಯವಾಗಿತ್ತು.
ಸರಸಮ್ಮ, ಮೇಜಿನ ಕೆಳಗೆ ಕಾಲ ಚಾಚಿ ಕುರ್ಚಿಗೊರಿಗಿ ಕುಳಿತರು.

ಕಟ್ಟಡದೊಳಗಿಸ ಹೊದೋಟದೊಂದು ಮೂಲೆಯಲ್ಲಿ ಸುರ್ಯಕಾಂತಿ
ಹೂವೊಂದು ಅಷ್ಟೆಗಲಕ್ಕೆ ಅರಳಿ ಸರಸಮ್ಮೆನನ್ನೇ ನೋಡುತಿತ್ತು.

ಅಭಯಧಾಮದಲ್ಲಿ ಕೆಲಸಮಾಡಲು ಸರಸಮ್ಮ ಬಂದಾಗ, ಅವರ
ಯವನ ಕಾನನದ ಕುಸುಮವಾಗಿ ಕಳೆಗುಂದಿತ್ತು. ಹೃದತವೋ ಕಹಿ-
ಕಲ್ಲು. ಮೊದಲು ಹೊತ್ತುಕಳೆಯುವ, ಒಂದಿಷ್ಟು ಸಂಪಾದಿಸುವ,
ವೃತ್ತಿಯಾಗಿದ್ದುದು, ಕ್ರಮೇಣ ಜೀವಿತದಮಹಾದೇಹವಾಗಿ
ಮಾರ್ಪಟ್ಟಿತು....ಆಗ ಕಟ್ಟಡವಿದ್ದುದು ಇಕ್ಕಟ್ಟಾದ ಜಾಗದಲ್ಲಿ. ಯಾವ