ಪುಟ:Abhaya.pdf/೧೭೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೬೭
ಅಭಯ


ತುಂಗಮ್ಮ ನಕ್ಕು ಸಮಾಧಾನದ ಉಸಿರುಬಿಟ್ಟಳು. ಪುಸ್ತಕಕೀಟ
ಎನ್ನುವುದು ಲಜ್ಜೆ ಪಟ್ಟುಕೊಳ್ಳಬೇಕಾದ ವಿಷಯವೇನೂ ಆಗಿರಲಿಲ್ಲ.
ಜಲಜ ಕಾರ್ಯನಿಮಿತ್ತದಿಂದ ಬಂದಿದ್ದಳು.
{{gap}"ದೊಡ್ದಮ್ಮ, ನಿಮ್ಮ ಒಪ್ಪಿಗೆ ಪಡೆಯೋಕೆ ನನ್ನ ಕಳಿಸಿದಾರೆ
ಒಪ್ಪಿಗೆ ಕೊಡ್ತೀರಾ?"
"ಏನು ಸಮಾಚಾರ?"
"ಒಪ್ಪಿಗೆ ಕೊಡ್ತೀರಿ ತಾನೆ?"
"ಸಾಕು ಹುಡುಗಾಟ!"
ದೊಡ್ಡಮ್ಮನ ಸ್ವರವನ್ನೂ ಮುಖಮುದ್ರೆಯನ್ನೂ ಗಮನಿಸಿ ಜಲಜ
ಗಂಭೀರಳಾದಳು.
"ಇವತ್ತು ಸಾಯಂಕಾಲ ಸಮತೀ ನರ್ತನ ಇಟ್ಕೋ ಬೇಕೂಂತ
ಮಾಡಿದೀವಿ.ಜತೇಲೆ ಸುಂದ್ರಾ ಮತ್ತು ರಾಧಾ ದೇವರ ನಾಮ ಹೇಳ್ತಾರೆ.
ತುಂಗಕ್ಕನಿಗೆ ಗುಣವಾಗಿದೇಂತ ಈ ಕಾರ್ಯಕ್ರಮ"
"ಅಷ್ಟೇತಾನೆ? ಸರಿ. ರಾತ್ರೆ ಅಡುಗೆ ಮಾಡಿ ಆದ್ಮೇಲೆ ಕಾರ್ಯ
ಕ್ರಮ ಷುರುವಾಗ್ಲಿ ಎಲ್ಲಿ ಇಟ್ಕೋತೀರಾ?"
ಸಂತೋಷದಿಂದ ಜಲಜೆಯ ಮುಖ ಗೆಲುವಾಯಿತು.
"ಹಜಾರದಲ್ಲೇ.ತುಂಗಕ್ಕನ ರೂಮ್ನಲಿ ಜಾಗ ಇಲ್ಲ. ಹಜಾರದಲ್ಲೇ
ಮೇಲು, ಅಲ್ವೆ ದೊಡ್ಡಮ್ಮ?"

"ಹೂಂ ಹೌದು ಸಂಗೀದತದ ಮೇಷ್ಟ್ರುನ್ನೂ ಇರೋಕೆ ಹೇಳ್ತೀರೊ?"
"ಇಲ್ಲ. ಆ ಅಮ್ಮ ಇದ್ರೆ ಸುಮತಿ ಕುಣಿಯೋಲ್ವಂತೆ?"
"ಸರಿ ಸರಿ. ನಾನೂ ಹೊರಟೋಹಗ್ಬೇಕೊ?"
"ನೀವು ಇರಬೇಕು ದೊಡ್ದಮ್ಮ. ಅಯ್ಯೊ!"
ಅಷ್ಟು ಹೇಳಿ, ಕಾಯಕ್ರಮದ ಸಿದ್ದತೆಯ ಭಾರ ಹೊತ್ತ ಜಲಜ
ಹೊರಟು ಹೋದಳು.
"ನಾನೂ ಹೋಗ್ತೀನಿ ದೊಡ್ಡಮ್ಮ"
-ಎನ್ನುತ್ತ ತುಂಗಮ್ಮನೂ ಜಲಜೆಯನ್ನು ಹಿಂಬಾಲಿಸಿದಳು.
ಜಲಜ,- ಸರಸಮ್ಮನ ನಂಬುಗೆಗೆ ಅರ್ಹಳಾಗಿದ್ದ ಹುಡುಗಿ ಸ್ನೇಹ