ಪುಟ:Abhaya.pdf/೨೪೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೪೩
ಅಭಯ

"ಅಭಯಧಾಮಾನ ನೀವು ಮರೀ ಕೊಡ್ದೂ ”
"ಖಂಡಿತಾ ಮರೆಯೋಲ್ಲ.”
"ಅದಕ್ಕೋಸ್ಕರ ಮದುವೆ ಸಮಯದಲ್ಲಿ ವಧೂವರರು ಅಭಯ
ಧಾಮಕ್ಕೆ ಒಂದಿಷ್ಟು ಒಳ್ಳೆಯ ಕಾಣಿಕೆ ಕೊಡ್ಬೇಕು ”
ಆ ಹೆಚ್ಚಿನ ಖರ್ಚಿನ ಅವಶ್ಯತೆಯನ್ನು ಕಂಡು ಮಹಾಬಲನ ತಲೆ
ಗಿರ್‍ರೆಂದಿತು ಆದರೂ ತನ್ನ ಕೈ ಹಿಡಿಯಲೆಂದು ಬಂದು, ನಿಂತವಳ ಮುಂದೆ,
ತಾನು ಬಡವನೆಂದು ತೋರಿಸಿಕೊಳ್ಳಲು ಆತ ಸಿದ್ಧನಿರಲಿಲ್ಲ
"ಆಗಲಿ"
-ಎಂದ ಮಹಾಬಲ ಆದರೆ ಸ್ವರ ಅಷ್ಟರಲ್ಲೆ ಕುಂಟಿತ್ತು
"ಇಷ್ಟೆ ನೀವು ಹೋಗಬಹುದಿನ್ನು ”
-ಎಂದರು ಸರಸಮ್ಮ.
ಮಹಾಬಲ ಎದ್ದುನಿಂತ
"ವರನಿಗೆ ನಮಸ್ಕಾರ ಮಾಡು ಮಗೂ”
-ಎಂದು ಸರಸಮ್ಮ ಕನಕಲಕ್ಷಮ್ಮನಿಗೆ ಹೇಳಿದರು ಕನಕಲಕ್ಷಮ್ಮ
ಮುಂದೆಬಂದು, ಬಾಗಿ, ಮಹಾಬಲನ ಪಾದಗಳಿಗೆ ವಂದಿಸಿದಳು.
"ಛೆ!ಛೆ!"
-ಎಂದು ಮಹಾಬಲ ಆ ಎರಡು ಭುಜಗಳನ್ನೂ ತನ್ನ ಕೈಗಳಿಂದ
ಒತ್ತಿ ಆಕೆಯನ್ನೆತ್ತಿ ನಿಲ್ಲಿಸಬೇಕೆಂದು ಆತನಿಗೆ ಆಸೆಯಾಯಿತು ಆದರೆ,
ಅಲ್ಲಿ ನಿಂತಿದ್ದ ಸರಸಮ್ಮನೆದುರು ಹಾಗೆ ಮಾಡಲು ಧೈರ್ಯಬರಲಿಲ್ಲ

ಹಾಗೆ, ಕೆಲವೇ ದಿನಗಳಮೇಲೆ ಗುರುವಾರ ದಿನ ಶುಭ ಮುಹೂರ್ತ
ದಲ್ಲಿ, ಕನಕಲಕ್ಷಮ್ಮ- ಮಹಾಬಲರ ಪಾಣಿಗ್ರಹಣ ಘಾಟಿ ಸುಬ್ರಹ್ಮಣ್ಯ
ದೇವರ ಸನ್ನಿಧಿಯಲ್ಲಿ ನೆರವೇರಿತು.
ಆದೇ ಸಂಜೆ ಹಿಂತಿರುಗಿದ ನೂತನ ದಂಪತಿಗಳನ್ನೂ ಅಭಯಧಾಮ
ದಲ್ಲಿ ಸತ್ಕರಿಸಿದರು. ಸಮಿತಿಯಕಾರ್ಯದರ್ಶಿನಿ ತಮ್ಮ ಪ ರ ವಾ ಗಿ
ಹದಿನೈದು ರೂವಾಯಿ ಬೆಲೆಬಾಳುವ ಒಂದು ಸೀರೆಯನ್ನು ಓದಿಸಿದರು
ಸರಸಮ್ಮ ಎರಡು ರವಕೆ ಕಣಗಳ ಉಡುಗೊರೆ ಕೊಟ್ಟರು.