ಪುಟ:Abhaya.pdf/೨೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


            ಆಭಯ

ಮುಟ್ಟಿದಾಗ ತೆರೆದು ಕೊಂಡಿತು ಬಾಗಿಲು, ಪ್ರಭಾಕೂಡಾ, ಕಿಟಕಿಯ ಎಡೆಯಿಂದ ನೀರ ಸಾಗರವನ್ನೆ ನೋಡುತ್ತ ನಿಂತಿದ್ದಳು. " ನೋಡೋಕೆ ಚೆನ್ನಾಗಿದೆ ಅಲ್ವೇನ್ರೀ ?". .....ಎ೦ದು ತು೦ಗಮ್ಮ ಕೇಳಿದಳು. "ಹೌದು" ಮಳೆಯಾನ್ನು ಕುರಿತಾದ ಚರ್ಚೆಯಲ್ಲಿ ಯಾವತೊದರೆಯೂ ಇರಲಿಲ್ಲ ಆದರೆ ಬೇರೆ ಮಾತುಗಳು ಬಂದಾಗ ಒಮ್ಮೆ ಪ್ರಭಾ ಕೇಳಿದಳು: " ನೀವು ಎಷ್ಟು ಓದಿದೀರಾ ತುಂಗಮ್ಮ?” " ಹೆಚ್ಚೇನೂ ಇಲ್ಲ ಕಣ್ರೀ. ಹೈಸ್ಕೂಲು ಕೊಡ ಪೂರ್ತಿಯಾಗಲಿಲ್ಲ.” " ಓ ನೀವು ಗ್ರಾಜುಯೇಟೇನೋ ಅಂತಿದ್ದೆ” " ಇಲ್ಲವಪ್ಪ – ಅದಕ್ಕೆ ನಾನು ಇಂಗ್ಲಿಷ್ ಅಷ್ಟಾಗಿ ಮಾತಾಡೋಲ್ಲ.” " ಮೇಟ್ರನ್ ಎಷ್ಟು ಓದಿದಾರೆ ?" ఆ ಪ್ರಭಾ 'ದೊಡ್ಡಮ್ಮ' ಎ೦ದು ಒಮ್ಮೆಯೂ ಅ೦ದಿರಲಿಲ್ಲ.ಆಕೆಯ ಪಾಲಿಗೆ ಸರಸಮ್ಮ ಮೇಟ್ರನ್ ಮಾತ್ರ, ಆ ಪ್ರಶ್ನೆಯ ಹಿ೦ದಿನ ಪ್ರವೃತ್ತಿ ತುಂಗಮ್ಮನಿಗೆ ಮೆಚ್ಚುಗೆ ಇರಲಿಲ್ಲ. ಅವಳು ಸುಳ್ಳಾಡಿದಳು. " ದೊಡ್ಡಮ್ಮ, ಎಂ. ಎ. ಬಿ. ಟೀ೦ತ ಕಾಣುತ್ತೆ ಸರಿಯಾಗಿ ಗೊತ್ತಿಲ್ಲ." “I see.” " ನೀವೆಷ್ಟು ಓದಿದೀರಾ ಮಿಸ್ ಪ್ರಭಾ ? " ಈ ವರ್ಷ ಬಿ. ಎಸ್. ಸಿ.ಡಿಗ್ರಿ ಪರೀಕ್ಷೆಗೆ ಕೂತ್ಕೋಬೇಕಾಗಿತ್ತು. ಅಗ್ಲಿಲ್ಲ ನೋಡಿ...” ಇನ್ನೊಮ್ಮೆ ಬೇರೆಮಾತು. " ತು೦ಗಮ್ಮ, ನೀವು ಇಲ್ಲಿ ಹ್ಯಾಗೆ ಸೇರ್ಕೋ೦ಡ್ರಿ ಕೆಲಸಕ್ಕೆ?" " ಮೂರುತಿ೦ಗಳ ಹಿ೦ದೆ ಒ೦ದುರಾತ್ರಿ ನಿಮ್ಮ ಹಾಗೇ ನಾನೂ ಬ೦ದೆ ಮಿಸ್ಸ್ ಪ್ರಭಾ.” ಆ ಮಾತು ಪ್ರಭಾಳ ಮೇಲೆ ಪರಿಣಾಮ ಮಾಡದೆ ಇರಲಿಲ್ಲ. 17