ಪುಟ:Abhaya.pdf/೨೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಮೊನ್ನೆ....ಅವನ ಅತ್ತೇ ಮನೇಲಿ ಯಾರೂ ಇಲ್ಲಾಂತ, ಹೆರಿಗೆಗೆ ಇಲ್ಲಿಗೇ ಕಳಿಸಿದಾನೆ."

"ಓ, ಹಾಗೋ."

ಯಾವ ಚಿಕ್ಕಪ್ಪನೊ, ಚಿಕ್ಕಪ್ಪನ ಮಗನೊ! ಯಾವ ಉತ್ತರ

ಪ್ರದೇಶವೊ! ತನಗೂ ಒಬ್ಬ ಗಂಡನಿರುವನೆಂದು ಸಾರಿ ಹೇಳುವ ಸುಳ್ಳು.ಎಂತಹ ತಮಾಷೆ!

ಮನೆಯಾಕೆಯೂ ಹಿಂಜರಿಯಲಿಲ್ಲ.

"ನಿಮ್ಬಳಗ ಅಂದ್ರಾ?"

"ಹೂಂ ಕಣ್ರೀ....ಹೆರಿಗೆಗೆ ಬೆಂಗಳೂರೇ ಅನುಕೂಲ ಅಂತ ಕರೆಸಿ

ಕೊಂಡಿದೀವಿ."

"ಅದೇನೋ ನಿಜವೇ ಅನ್ನಿ...ಅಲ್ಲ,ಮೊನ್ನೆ ನಮ್ಸುಂದರೀಬಾಣಂತನ

ದಲ್ಲಿ ಏನಾಯ್ತೂಂತ....ನಮ್ಮನ್ನ ಹ್ಯಾಗೆ ಸುಲಿದ್ಬಿಟ್ರು ಗೊತ್ತೆ ಆ ನರ್ಸುಗಳು?...."

"ಅಯ್ಯೊ, ಅದನ್ನ ಕೇಳ್ಲೇ ಬೇಡಿ. ಆಸ್ಪತ್ರೇಲಿ ದೊಡ್ಡೋರಿಂದ

ಹಿಡ್ದು ಚಿಕ್ಕೋರವರೆಗೆ ಅದೊಂದು ಖರ್ಚು ಇದ್ದದ್ದೇ....ಅವರಾದ್ರೂ ಏನ್ಮಾಡ್ತಾರೆ ಪಾಪ, ಕೈ ತುಂಬ ಸಂಬಳ ಬರುತ್ತೇನು?"

"ನೀವೂ ಸರಿಯೆ!"

ಹಾಗೆ ಮಾತಿನ ಪ್ರವಾಹ ತುಂಗಮ್ಮನನ್ನು ಅಲ್ಲೆ ಬಿಟ್ಟು ಮುಂದಕ್ಕೆ

ಸರಿಯುತಿತ್ತು.ಕೈ ತುಂಬ ಸಂಬಳ ಬಾರದ ತಮ್ಮ ಗುಮಾಸ್ತೆ ಗಂಡಂದಿರೂ ಆಗೊಮ್ಮೆ ಈಗೊಮ್ಮೆ ಗಿಂಬಳ ತರುತಿದ್ದುದನ್ನು ಸ್ಮರಿಸಿಕೊಂಡು ಆ ಹೆಂಗಸಾರು ಮುಗುಳ್ನಗುತಿದ್ದರೇ ಹೊರತು, ತುಂಗಮ್ಮನನ್ನು ಕುರಿತಾದ ಚರ್ಚೆ ಅಲ್ಲಿ ನಡೆಯುತ್ತಿರಲಿಲ್ಲ.

ಹಾಗೆ ಆಕೆ ಕಳೆದ ಐದು ತಿಂಗಳು.

ತುಂಗಮ್ಮನಿಗೆ ತಿಳಿದಿತ್ತು ಆ ದಂಪತಿಗಳ ದೃಷ್ಟಿಯಲ್ಲಿ ತಾನು

ಅಪರಾಧಿಯೇ. ತನ್ನ ಬಗೆಗೆ ಅವರು ತೋರುತಿದ್ದುದು ಕನಿಕರ, ವಾತ್ಸಲ್ಯವನ್ನಲ್ಲ. ತಾನು ಹರ್ಷಚಿತ್ತಳಾಗುವಂತೆ ಮಾಡಲು ಅವರು ಯತ್ನಿಸುತಿದ್ದರು ನಿಜ. ಆದರೆ ಹಾಗೆ ಯತ್ನಿಸುತಿದ್ದುದು, ಆ ಹುಡುಗಿ