ಪುಟ:Abhaya.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೭೦

ಅಭಯ

'


ಯನ್ನುಟ್ಟು ಆಕೆ ಇನ್ನೊಬ್ಬ ಗಂಡಸಿನೋಡನೆ ಸರಸವಾಡುಬಹುದೆಂಬ ಕಲ್ಪನೆಯಿಂದ ಆತನಿಗೆ ನೋವಾಯಿತು. ನೋವನ್ನೆಲ್ಲ ಮರೆಯುವಂತೆ ಮಹಾಬಲ ಹಲ್ಲುಕಡಿದು, ಉಗುಳನ್ನು 'ಥೂ' ಎಂದು ಹೊರಕ್ಕೆ ಉಗುಳಿ ಕೊಳೆಯ ಮಾತು ಹೇಳಿದ:

"ಹೋಗು! ತೊಲಗಿ ಹೋಗು! ಹಾಳಾಗಿಹೋಗು!"

ಅವಳು ಸರಸನೆ ಹೊರಟೇ ಹೋದಳು. ಆಕೆಯ ಹಿಂದೆ ಓಡಿ ಹೋಗಿ ಕಾಲುಕಟ್ಟಿಕೊಂಡು ಬೇಡೋಣವೆನಿಸಿತು ಆತನಿಗೆ. ಆದರೆ ಕಾಲುಗಳು ಚಲಿಸಲು ನಿರಾಕರಿಸಿದುವು. ಆತೆ ಅಲ್ಲೆ ಆಟದ ಬಯಲಿನಲ್ಲಿ ಕುಸಿಕುಳಿತು, ಬಹಳ ಹೊತ್ತು ಮಗುವಿನಂತೆ ಅತ್ತ.

ಅದು ನಿನ್ನೆ. ಈದಿನ ಅದನ್ನು ಸರಸಮ್ಮ ಮತ್ತು ತುಂಗಮ್ಮನೆದುರು ವಿವರಿಸಿದಾಗ ಮಹಾಬಲ ಹೆಚ್ಚು ಕಡಿಮೆ ನಿರ್ವಿಕಾರನಾಗಿಯೇ ಇದ್ದ.

ವಿವರಣೆ ಮುಗಿದಮೇಲೆ ಆತ ಅಂದ:

"ಕನಕ ಹೊರಟೋಗಿದ್ರೂ ಪರವಾಇರಲ್ಲಿಲ್ಲ ಆದರೆ ಅವ್ಳು ಸುಳ್ಹೇಳಿದ್ಲು.ಸರ--ಬಳೆ ಕಳೆದ್ಹೋಯ್ತು ಅಂದ್ಲು !"

ಮಗಳು ಮಾಡಿದ್ದ ತಪ್ಪಿಗೆ ತಾಯಿಯೇ ಜವಾಬ್ದಾರಳಾದ ಹಾಗಿತ್ತು ಸರಸಮ್ಮನ ಪರಿಸ್ಥಿತಿ. ಆದರೂ ಸಂತೈಸುವ ಧ್ವನಿಯಲ್ಲಿ ಅವರು ಹೇಳಿದರು:

"ಬೇಜಾರು ಪಟ್ಕೋಬೇಡಿ. ಆದದ್ದು ಆಗ್ಹೋಯ್ತ. ಕನಕಲಕ್ಷಮ್ಮ ಹೀಗೆ ಮೋಸ ಮಾಡ್ವಹೂದೊಂತೆ ನಾವು ಭಾವಿಸಿರಲ್ಲಿಲ್ಲ. ನಮ್ಮ ದುರ್ದೈವ."

ಕನಕಲಕ್ಷಮ್ಮ ತಪ್ಪು ಮಾಡಿದಲಳೆಂದು ಸರಸಮ್ಮ ಒಪ್ಪಿಕೊಂಡುದರಿಂದ ಮಹಾಬಲನಿಗೆ ಒಂದು ರೀತಿಯ ಸಮಾಧಾನವಾಯಿತು. ತನ್ನನ್ನು ಕುರಿತು ತೋರಿದ ಸಹಾನುಭೂತಿ ಪ್ರಿಯವೆನಿಸಿತು.

ಮಹಾಬಲನ ಮನಸ್ಸು ಪ್ರಸನ್ನವಾಗಲೆಂದು ಸರಸಮ್ಮ ಕಾಫಿಯ ಮಾತನ್ನೆತ್ತಿದ್ದಳು.

"ಒಂದಿಷ್ಟು ಕಾಫಿ ಮಾಡಿಸ್ಲಾ ?"

"ಬೇಡ್ರಮ್ಮ, ಬೇಡಿ."