ವಿಷಯಕ್ಕೆ ಹೋಗು

ಪುಟ:Abhaya.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
'೨೭೨
ಅಭಯ
'

ಎಂದು ತುಂಗಮ್ಮ , ನಗು ತಡೆಯಲಾರದೆ ಅಂದಳು,

ಮನಸ್ಸು ಮುದುಡಿಕೊಳ್ಳುವ ಆ ಪರಿಸ್ತಿತಿಯಲ್ಲೂ ಸರಸಮ್ಮಕೂಡಾ ನಕ್ಕರು.

ನಕ್ಕು ಮುಗಿದಮೇಲೆ ಅವರು ಮತ್ತೊಮ್ಮೆ ಸಪ್ಪಗಾದರು.

ಯಾಕೆ ಹೀಗಾಯಿತು?ಯಾಕೆ? ಮಹಾಬಲ ಒಳ್ಳೆಯವನಿರಬಹುದು.ಆದರ ಆತ ಮಹಾಮೂರ್ಖ.ಅಲ್ಲದೆ ಕನಕಲಕಮ್ಮನೇನು ಪರಮ ಸಾಧ್ವಿಯೆ? ಹಳೆಯ ಗೆಳೆಯನ ಆಕರ್ಷಣೆಗೆ ಆಕೆ ಬಲಿಯಾಗಿರಬಹುದು....ಮರಳಿ ಆ ಬದುಕಿಗೆ...ಎಂತಹ ಅನ್ಯಾಯ! ಇಷ್ಟುಕಾಲ ಅಭಯಧಾಮ ಆಕೆಗೆ ನೀಡಿದ ಶಿಕ್ಷಣವೆಲ್ಲ ವ್ಯರ್ಥ ವಾಯಿತಲ್ಲ!

__ಅಥವಾ , ಅಭಯಧಾಮದ ಈ ಜೀವನದಿಂದ ನಿಜವಾದ ಪ್ರಯೋಜನ ಏನೂ ಇಲ್ಲದೆ?

......ಸರಸಮ್ಮನ ಮೆದುಳು ಧೀಂಗುಡುತಿತ್ತು...ನಿರಾಸೆಯ ಅ ವಿಚಾರಗಳೆನ್ನೆಲ್ಲ ಅವರು ತುಂಗಮ್ಮನಿಗೆ ಹೇಳಲಿಲ್ಲ.ತಮ್ಮ ಮನಸ್ಸಿನಲ್ಲೆ ಬಚ್ಚಿಟ್ಟರು.