ದಿನಗಳು ಕಳೆದು ಮಾಸಗಳಾದುವು.ಕಾಲ,ಖೂತುಮತಿಯಾಯಿತು.
ಮಂಜುಕವಿದಿದ್ದ ಆ ಮುಂಜಾವ!
ರಾತ್ರೆ ಮಲಗಿದಾಗ ಸರಸಮ್ಮ ಕಿಟಕಿ ಮುಚ್ಚಿದ್ದರು-ಗಾಳಿಮಳೆಯ ಅವಾಂತರದಿಂದ ನೀರು ಒಳಕ್ಕ ಹರಿಯದಿರಲೆಂದು ಕೂಠಡಿಯ ಬಾಗಿಲೇನೋ ತೆರೆದೇ ಇತ್ತು ಉಷಃಕಾಲದಲ್ಲೆ ಎಚ್ಚರಗೂಂಡಾಗ ಅವರಿಗೆ, ಬಾಗಿಲಿನೆಡೆಯಿಂದ ತಣ್ನನೆ ಬೀಸುತಿದ್ದ ಗಾಳಿಯ ಸುಖಸ್ಪಶ ದ ಅನುಭವವಾಯಿತು.ಹೂದೆದಿದ್ದ ಕಂಬಳಿಯನ್ನು ಮತ್ತಷ್ಟು ಬೆಚ್ಚಗೆ ಅವರು ದೇಹಕ್ಕೆ ಅಂಟಿಸಿಕೂಂಡರು.ಅದರೆ ನಿದ್ದೆ ಓಡಿಯೇ ಹೋಯಿತು.ಬೆಳಗಾದರೂ ಅಗಿರಬಹುದು ಎನಿಸಿತು ಸರಸಮ್ಮನಿಗೆ, ಸರಿಯಾಗಿ ಕಣು ತೆರೆದು ಅವರು ಬಾಗಿಲಿನಾಚೆ ನೋಡಿದರು ಎನೂಕಾಣಿಸಲಿಲ್ಲ.ಮತ್ತೂಮ್ಮೆ ನಿದ್ದೆ ಹೋಗಲು ಅವರು ಮಾಡಿದ ಯತ್ನವೂ ವಿಫವಾಯಿತು.ಎದ್ದು ಕುಳಿತು,ಮಂಚದಿಂದ ಕೆಳಕ್ಕಿಳಿದು,ದೀಪಹಾಕಿ ಟೈಂಪೀಸಿನತ್ತ ನೋಡಿದರು.ಐದೂವರೆ!...ಅವರು ಕಿಟಕಿ ತೆರೆದರು ಏನೂ ಕಾಣಿಸಲಿಲ್ಲ ಹೂರಗೆ ನಸುಬೆಳಕೂ ಇಲ್ಲ ವೆಂದರೆ! ಇದು ಆಶ್ಚಯ ವೇ ಸರಿ.ಏನೋ ಹೊಳೆದು,ಅವರು ದೀಪ ಆರಿಸಿ ಕಿಟಕಿಯ ಬಳಿ ಬಂದು ನಿಂತರು.
ಆಹ್ ! ತಪ್ಪಾಗಿರಲಿಲ್ಲ ಅವರು ಊಹೆ!
ಕಳ್ಳ ಹೆಜ್ಜೆಯಾಡನೆ ಬೆಳಕು ಭೂಮಿಗಿಳಿದು ಬರುತಿತ್ತು-ಬೆಳಿಯ ನವುರಾದ ಸೀರೆಯುಟ್ಡುಕೊಂಡು,ಮಂಜು, ತನ್ನ ಶೀತಲ ಅಪ್ಪುಗೆಯಿಂದ ಯಾರೂ ತಪ್ಪಿಸಿ ಕೊಳಲಾರದಂತೆ,ಮನೆಮರಗಳನ್ನು ಗಿಡಹೂಗಳನ್ನು ಮುತ್ತಿಟ್ಟತ್ತು.
ನಿಸರ್ಗದ ಆ ಸುಂದರ ರಮಣೀಯತೆಯಲ್ಲಿ,ನಿದ್ದೆ ಹೋದ ಎಳೆಯ 18