ವಿಷಯಕ್ಕೆ ಹೋಗು

ಪುಟ:Abhaya.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಯಾರಿಗೆ?-ಅಂದ್ರು. ಅದೇ, ತುಂಗಮ್ನವರಿಗೆ ಅಂದ್ದಿದಕ್ಕೆ,

ಅವರಿಗೇನಾಗಿದೆ?-ಅಂತ ಆಶ್ಚರ್ಯಪಟ್ರು...ಆಮೇಲೆ ವಿಷಯ

ತಿಳಿಯಿತೂಂತಿಟ್ಕೊಳ್ಳಿ...."

ತಮಾಷೆ ಒಟ್ಟಿನಲ್ಲಿ. ಆದರೆ ತನ್ನನ್ನು ಆತ ಹುಡುಕಿಕೊಂದು ಬಂದು

ದಂತೂ ನಿಜ ಅಳುಕುತ್ತ, ಛೆ-ಇರಲಾರದು ಎಂದು, ತಾನು ಮಾಡಿದ್ದ

ಯೋಚನೆ ತಪ್ಪಾಗಿತ್ತು.

ಆತನ ಸರಳ ವರ್ತನೆಯ ಎದುರಿಗೆ ಆಕೆಯ ಸಂಕೋಚದ ಮಂಜಿನ

ತೆರೆ ಮೆಲ್ಲ ಮೆಲ್ಲನೆ ಕರಗ ತೊದಗಿತು ತನ್ನನ್ನು ನೋಡಿದ್ದಾಯಿತು.ಇನ್ನು

ಆತ ಹೊರಟುಬಿಡಬಹುದು. ಒಳಗೆ ಲಲಿತೆಯನ್ನು ನೋಡುವುದಕ್ಕೂ ಆತ

ಬರಬಾರದೆ"..ತುಂಗಮ್ಮ ವಾರ್ಡಿನತ್ತ ದೃಷ್ಟಿಸರಿಸಿದಳು.

ಅದನ್ನು ಗಮನಿಸಿ ಅವನೆಂದ:

ಬನ್ನಿ ಒಳಕ್ಕೆ ಹೋಗೋಣ...."

ಲಲಿತೆಯ ಮೈಯಲ್ಲಿನ್ನೂ ಜ್ವರವಿತ್ತು ಎಚ್ಚರವಾಗಿಯೋ ಇದ್ದಳಾಕೆ.

ಮಂಚದ ಬಳಿನಿಂತ ತುಂಗಮ್ಮನ ಬೆರಳುಗಳನ್ನು ಮುಟ್ಟಿ ಆಕೆ ನರಳಾಡಿದಳು.

ಆಕೆಗೆ ಪಕ್ಕದಲ್ಲಿ ನಿಂತವನ ಗುರತು ಸಿಕ್ಕಿದಂತೆ,ಇಲ್ಲವೆ ಗುರುತುತಿಳಿಯುವ

ಕುತೂಹಲವಿದ್ದಂತೆ, ಕಾಣಲಿಲ್ಲ.

ಸೋಮಶೇಖರ ವರ್ಡಿನ ಉದ್ದಗಲಕ್ಕೂ ನೋಡಿದ ಬಹಳ ವರ್ಷ

ಗಳಿಂದ ಅವನು ಆಸ್ಪತ್ರೆಯ ಜನರಲ್ ವಾರ್ಡುಗಳನ್ನು ಕಂಡಿರಲಿಲ್ಲ.

ಹೇಗಿತ್ತು! ಅ ರೋಗಿಗಳೊ --ಆ ಸಂದರ್ಶದಕರೊ! ಒಂದೆರಡು ಮಂಚ

ಗಳನ್ನಂತೂ ಹತ್ತಾರು ಜನ ಸಂದರ್ಶಕರು ಮುತ್ತಿದ್ದರು.

ಈ ಗದ್ದಲದೆಡೆಯಲ್ಲಿ ಅಭಯಧಾಮದ ರೋಗಿಗೆ--ತುಂಗಮ್ಮನ

ಗೆಳತಿಗೆ--ಗುಣವಾಗಬೇಕು!

"ಇಲ್ಲೇ ಇರಿ,ಈಗ ಬರ್‍ತೀನಿ"

--ಎಂದು ಸೋಮಶೇಖರ ಅತ್ತಿತ್ತ ನೋಡುತ್ತ ಹೊರಟುಹೋದ.

ಆತನ್ನನ್ನೆ ಲಲಿತೆಯ ದೃಷ್ಥಹಿಂಬಾಲಿಸಿತು.ಆದರೆ, ಯಾರು?--ಎಂದು

ಕೇಳುವ ಸಾಮರ್ಥ್ಯವಾಗಲೀ ತಿಳಿಯುವ ಇಚ್ಛೆಯಾಗಲೀ ರೋಗಿಗೆ ಇದ್ದಂತೆ

ತೋರಲಿಲ್ಲ. ತುಂಗಮ್ಮ ತಾನಾಗಿ ಹೇಳಲಿಲ್ಲ.