ಪುಟ:Abhaya.pdf/೩೧೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೧೦
ಅಭಯ

ಸುಂದರಮ್ಮ ನಗುತ್ತ ಅಂದರು:
"ಹೋಗಲಿಬಿಡಿ ನನ್ತಮ್ಮನಿಗೆ ನಾಚಿಕೆ ಜಾಸ್ತಿ.ನಾನೇ ಕೇಳ್ತೀನಿ.
ನನ್ನ ತಮ್ಮನ್ನ ಅಳಿಯನಾಗಿ ನೀವು ಸ್ವೀಕರಿಸಬೇಕು"
"ಅದಕ್ಕೆ, ಯಾರೇ ಆಗಲಿ ಭಾಗ್ಯ ಮಾಡಿದಬೇಕು ಸುಂದರಮ್ಮ."
"ಆ ಭಾಗ್ಯ ನೀವು ಮಾಡಿದೀರಿ. ಇಷ್ಟು ವರ್ಷ ಈತ ಮದುವೆ
ಯಾಗೊಲ್ಲ ಅಂದಿದ್ದ ಈಗ ಮದುವೆಯಾದರೆ ನಿಮ್ಮ ಹುಡುಗಿ ಒಬ್ಬಳನ್ನೇ
ಅಂತ ಹಟ ಹಿಡಿದಿದ್ದಾನೆ ಎಲ್ಲದಕ್ಕೂ ಹೆಚ್ಚಾಗಿ ತಾಯಿನ ಒಪ್ಪಿಸಿದ್ದಾನೆ."
"ನಿಮ್ಮ ತಮ್ಮ ಯಾವ ಹುಡುಗಿ ವಿಷಯ ಹೇಳಿದ್ದಾರೆ".
"ಅಷ್ಟೂ ಊಹಿಸ್ಕೊಳ್ಳೋಕೆ ಆಗೊಲ್ವೇನ್ರಿ? ನಿಮ್ಮ ಆಸಿಸ್ಟೆಂಟ್
ಮೇಲೆಯೇ ಅವನಿಗೆ ಕಣ್ಣು ತುಂಗಮ್ಮನ್ನ ನಿಮ್ಮಿಂದ ತಪ್ಪಿಸ್ಬಿಟ್ರಿ ಅಭಯ
ಧಾಮ ಹ್ಯಾಗೆ ನಡಿಯುತ್ತೆ ನೋಡ್ಭೇಕೂಂತ ಆತನ ಹಟ ಹ್ಯಾಗೂ ಅಭಯ
ಧಾಮದಿಂದ ಪ್ರಯೋಜನ ಇಲ್ಲ ನೋಡಿ".
ದುಃಖದ ಸಂತೋಷದ ಭಾವನೆಗಳನ್ನೆಲ್ಲ ಮರೆಸಲು ಸರಸಮ್ಮ ಗಟ್ಟಿ
ಯಾಗಿ ನಕ್ಕರು. ಸೋಮಶೇಖರನೂ ನಕ್ಕ ಸರಸಮ್ಮ ಕಾರ್ಯದರ್ಶಿನಿಯ
ಕಡೆಗೆ ತಿರುಗುತ್ತ ಕೇಳಿದರು.
"ಇದೊಂದೂ ತಮಾಷೆ ಅಲ್ಲಾಂತ್ಲೇ ತಿಳಕೊಳ್ಲಾ?"
"ಹೌದು ಸರಸಮ್ಮ. ಯುಗಾದಿ ಹೊತ್ತಿಗೆ ಮದುವೇಂತ ಗೊತ್ತು
ಮಾಡಿದ್ದಾರೆ. ಹುಡುಗೀನ ಒಪ್ಪಿಸಿ. ಆಕೆ ತಂದೇನ ಕರೀರಿ."
ತುಂಗಮ್ಮ ತಮ್ಮ ಕೈ ಬಿಟ್ಟು ಹೋಗುವಳೆಂಬುದು ಸರಸಮ್ಮನಿಗೆ
ಖಚಿತವಾಯಿತು. ಭಾರವಾದ ಹೃದಯದೊಡನೆ ಅವರು ಎದ್ದು ನಿಂತರು.
"ಆಗಲಿ. ಇವತ್ತೇ ತುಂಗನ ಕೂಡೆ ಮಾತಾಡ್ತೀನಿ. ನಾಳೆ ಬೆಳಿಗ್ಗೆ
ಅವರ ತಂದೆಗೆ ಬರೀತೀನಿ."
"ಅಂತೂ ನಮ್ಮ ಬೀಗರಾದಿರಿ. ಮನೆಕಾರಿನಲ್ಲೇ ಹೋಗೋಣ ಬನ್ನಿ"
-ಎಂದರು ಸುಂದರಮ್ಮ ನಗುತ್ತ.
ತನ್ನ ಭಾವನ ಆ ಕಾರನ್ನು ಪುಟುಕೋಸು ಕಾರೆಂದು ತುಂಗಮ್ಮ
ನೊಡನೆ ತಾನು ಅಂದದು ನೆನವಾಗಿ ಸೋಮಶೇಖರ ತನ್ನಷ್ಟಕ್ಕೇ
ಮುಗುಳ್ನಕ್ಕ.