ಪುಟ:Abhaya.pdf/೩೧೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

*೨೧

ಅಂತೂ ಜಲಜೆಗೆ ಗೊತ್ತಾಯಿತು,ಸಾವಿತ್ರಿಗೂ ತಿಳಿದು ಹೋಯಿತು.
ಆದರೂ ಆ ವಿಷಯ ರಹಸ್ಯನಾಗಿಯೇ ಮತ್ತೂ ಉಳಿಯಿತು
ದೊಡ್ಡಮ್ಮ,ತುಂಗಮ್ಮನನ್ನು ಕರೆದುಕೊಂಡು ಸುಂದರಮ್ಮನ ಮನೆಗೆ
ಹೋಗಿ ಸೋಮಶೇಖರನ ವೃದ್ಧ ತಾಯಿಯನ್ನು ಕಂಡುಬಂದರು ಆ ವೃದ್ಧೆಗೆ
ಅಸಮಾಧಾನವಿತ್ತು ಆದರೆ ಅದೆಲ್ಲಾ ಆಕೆ ನುಂಗಿದ ಉಗುಳು ಮಗನ
ಹಟಮಾರಿತನದ ಮುಂದೆ ಆಕೆಯದೇನೂ ನಡೆಯುವಂತಿರಲಿಲ್ಲ.
ತುಂಗಮ್ಮನ ತಂದೆ ಬಂದರು ಅವರಿಗೆ ಸಂತೋಷಕ್ಕಿಂತಲೂ ಆಶ್ಚ
ರ್ಯವೇ ಹೆಚ್ಚಾಗಿತ್ತು ಬರುತ್ತ,ಇದರಲ್ಲೇನೋ ಮೋಸವಿದ್ದರೂ ಇರಬ
ಹುದೆಂಬ ಶಂಕೆ ಇತ್ತು ಅವರಿಗೆ.
ಆದರೆ ಇಲ್ಲಿ ಯಾವ ಮೋಸವೂ ಇರಲಿಲ್ಲ
ಸಂದರಮ್ಮ_ ಆನಂತರಾಮಯ್ಯ ದಂಪತಿಗಳ ಅತಿಧಿಯಾಗಿ ಅವರು
ಉಳಿದರು.ಇಂತಹ ಗಂಡ ದೊರೆಯ ಬೇಕಾದರೆ ಜೀವನದಲ್ಲಿ
ಹೀಗೂ ಆಗಬೇಕಾಗಿತ್ತೇನೋ-ಎಂದು ಅವರಿಗೆ ಅನಿಸದಿರಲಿಲ್ಲ ಇವೆಲ್ಲ
ವಿಧಿಯ ಆಟ-ಎಂಬ ಉದ್ಗಾರವೂ ಆವರ ಬಾಯಿಂದ ಬಂತು.
ಅಭಯಧಾಮಕ್ಕೆ ಬಂದು ಅಲ್ಲಿ ಆಫೀಸು ಕೊಠೆಡಿಯಲ್ಲಿ ಸರಸಮ್ಮ
ನೊಡನೆ ಕುಳಿತಾಗ,ಅವರ ಕಂಠ ಉಮ್ಮಳಿಸಿ ಸ್ವಲ್ಪಹೊತ್ತು ಮಾತೇ ಹೊರಬ
ರಲಿಲ್ಲ. "ನನಗೊಂದೂ ಅರ್ಥವಾಗ್ತಿಲ್ಲ ಸರಸಮ್ಮನವರೆ.ಇದೆಲ್ಲಾ ನಿಜವೆ
ಅಂತ ಗಾಬರಿಯಾಗುತ್ತೆ ಒಮ್ಮೊಮ್ಮೆ ಅಂತೂ ನಾನು ಕಣ್ಮುಚ್ಚೋಕ್ಮುಂಚೆ
ಮನಶ್ಯಾಂತಿ ಸಿಗೋಹಾಗೆ ಮಾಡಿದ್ರಿ ನಿಮ್ಮ ಉಪಕಾರಾನ ಈ ಜನ್ಮದಲ್ಲಿ
ತೀರಿಸೋಕಾಗುತ್ತೋ ಇಲ್ವೋ."
ಅವರು ಅಷ್ಟದರೂ ಅಂದರು.ಆದರೆ ಸರಸಮ್ಮ ಮಾತನಾಡುವ