ಪುಟ:Abhaya.pdf/೫೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಅಭಯ

“ಅಂದರೆ ?”

“ಅಯ್ಯೋ ರಾಮ ! ಅವರು ಮೇಟ್ರನ್ ಕಣ್ರೀ ....ನಾವೆಲ್ರೂ ದೊಡ್ಡಮ್ಮಾಂತಲೇ ಕೂಗೋದು ಅವರ್ನ.”

“ಓ !”
“ನೀವೊಳ್ಳೇ'ತುಂಗಕ್ಕ.”
“ನನಗೆ ಹ್ಯಾಗ್ರೀ ಗೊತ್ತಾಗ್ಬೇಕು ?”
“ಅದೂ ಸರಿಯೆ ? ಅಲ್ಲ, ಸಾವಿತ್ರಿ-ಲಲಿತಾ- ಸರಸ್ವತಿ-ಜಲಜ-ತುಂಗಮ್ಮ, ಯಾರಾದ್ರೂ ಅಷ್ಟೇ ಕಣ್ರಿ.....ನಮಗೆಲ್ಲರಿಗೂ ಅವರು ದೊಡ್ಡಮ್ಮ” “ಓ....ಈಗ ಅರ್ಥವಾಯ್ತು....”
“ಅಬ್ಬ ! ಅರ್ಥವಾಯ್ತಲ್ಲಾ ಈಗಲಾದ್ರೂ ! ನಿಜವಾಗೂ ಬುದ್ಧಿವಂತರು ಕಣ್ರೀ ನೀವು !”
ಜಲಜಳ ಆ ಧ್ವನಿಯಲ್ಲಿ ಮೃದು ಹಾಸ್ಯವಿತ್ತು. ಅಣಕಿಸುವ ಉಪಹಾಸದ ಧ್ವನಿ ಒಂದು ಕ್ಷಣ ತುಂಗಮ್ಮನಿಗೆ ಇರುವೆ ಕುಟುಕಿದ ಹಾಗಾಯಿತು, ಆದರೆ ಜಲಜ ನಗುತಿದ್ದಳು-ನಿರ್ಮಲವಾದ ನಗು, ಆಕೆ ತನ್ನನ್ನು ಅವಮಾನಿಸಬಯಸಿದಳೆಂದು ಊಹಿಸುವುದು ಸಾಧ್ಯವೇ ಇರಲಿಲ್ಲ.

ಅಂತಹ ವಿಚಾರ ತುಂಗಮ್ಮನ ಮನಸ್ಸಿನಲ್ಲಿ ಸುಳಿದಿರಬಹುದೆಂಬುದನ್ನೂ ಭಾವಿಸಿರಲಿಲ್ಲ ಜಲಜ, ಒಳ್ಳೆಯದೆಂದು ತೋರಿದೊಂದು ಜೀವ ತನಗೆ ಗೆಳತಿಯಾಗಿ ದೊರೆತ ಸಂತೋಷದ ಸಂಭ್ರಮದಲ್ಲಿ ಸುಖಿಯಾಗಿದ್ದಳು ಆಕೆ.

ತುಂಗಮ್ಮನನ್ನು ಪೂರ್ತಿ ತನ್ನವಳಾಗಿ ಮಾಡಿಕೊಳ್ಳುವ ಬಯಕೆಯಿಂದ ಜಲಜ ಕೇಳಿದಳು.

“ನೀವು ಎಷ್ಟು ಓದಿದೀರಾ ತುಂಗಕ್ಕೆ ???

ಮತ್ತೆ, ಹಿಂದಿನ ರಾತ್ರೆಯ ನೆನಪು ತುಂಗಮ್ಮನಿಗಾಯಿತು. ನೀತಿಯುತವಲ್ಲವೆಂದು ಪರಿಗಣಿಸಲ್ಪಟ್ಟ ಬದುಕಿನಿಂದ ಪಾರಾಗಿ ಬಂದು, ಕಣ್ಣೀರಿನಲ್ಲಿ ಕೈ ತೊಳೆದು ಪ್ರಾಯಶ್ಚಿತ್ತ ಅನುಭವಿಸಬೇಕಾದ ಆಶ್ರಮವಾಗಿ ಇದು ? ನಿಜವಾಗಿಯೂ ಶಾಲೆಯ ಹಾಗಿತ್ತಲ್ಲವೆ ಈ ಅಭಯ