ಪುಟ:Abhaya.pdf/೬೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಊಯ್ ಊಯ್__ಆ__ಊ"

__ಎಂದು ಆಕೆ ಕಿಟಕಿಯ ಹೊರನೋಡುತ್ತಾ ಏನೋ ಸದ್ದು

ಮಾಡಿದಳು.

ನಿನ್ನ ಕಾಫಿ ತಿಂಡಿ ಯಾಯಿತೇ? ಎಂದು ಕೈಸನ್ನೆಯಿಂದ ಕೇಳಿದಳು

ಜಲಜ.

ಆಗಿರಲಿಲ್ಲ.

ಹೋಗು ಹಾಗಾದರೆ__ಎಂದಳು ಜಲಜ ಮೂಗಿಯ ಭಾಷೆಯಲ್ಲೇ.

ಆಕೆ ಮತ್ತೊಮ್ಮೆ 'ಕಿಕಿವಿಕಿ' ಸದ್ದು ಮಾಡಿದಳು. ತುಂಗಮ್ಮನನ್ನು

ನೋಡಿ ನಕ್ಕಳು. 'ಹೀಂ' ಎಂದಳು.ವೈಯಾರವಾಗಿ ಜಡೆಯನ್ನು ಕೊರಳಿಗೆ ಸುತ್ತುಗಟ್ಟಿ ಹೊರಟು ಹೋದಳು.

ತುಂಗಮ್ಮನ ಗಂಟಲಿನಿಂದ ಉಪ್ಪಿಟ್ಟನ ತುತ್ತುಗಳು ಸುಲಭವಾಗಿ

ಕೆಳಕ್ಕಿಳಿಯಲಿಲ್ಲ. ಕಾಫಿಯ ಗುಟುಕುಗಳನ್ನು ಸುರಿದು ಉಪ್ಪಿಟ್ಟನ್ನು ಕೆಳಕ್ಕೆ ತಳ್ಳಬೇಕಾಯಿತು.

ಎಷ್ಟೊಂದು ಜನ ಎಂಧೆಂಥ ಸಂಕಟಗಳನ್ನು ಅನುಭವಿಸುತ್ತಾರೆ!__

ಆ ಯೋಚನೆಯಿಂದ ತುಂಗಮ್ಮನ ಹ್ರುದಯ ಭಾರವೂ ಆಯಿತು; ಲೋಕದಲ್ಲಿ ಕಷ್ಟ ಅನುಭವಿಸುವವಳು ತಾನೊಬ್ಬಳೇ ಅಲ್ಲವೆಂದು ಹಗುರವೂ ಆಯಿತು.