ಪುಟ:Abhaya.pdf/೭೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಬಂದೋರಿಗೆ ಸ್ವಲ್ಪ ವಿಶ್ರಾಂತಿ ಕೊಡೋಣಾಂತ ಹಾಗೆಯೇ

ಬಿಟ್ಟಿದೀನಿ!"

"ಓ ಸರಿ! ಬರ್ರ್ತಿನಿ ನಾನು..."

ಸರಸಮ್ಮ ಬರೆಯುವುದನ್ನು ನಿಲ್ಲಿಸಿ,ಬಾಗಿಲಬಳಿ ಹೋಗಿ ರಜಮ್ಮ

ನನ್ನು ಕಳುಹಿಸಿ ಕೊಟ್ಟು ಬಂದರು.

ಹಿಂತಿರುಗಿ ಬಂದು ಬರೆಯೂವುದನ್ನು ಮುಂದುವರಿಸುತ್ತಲೇ ಅವರು

ಕೇಳಿದರು:

"ಏನಮ್ಮ ತುಂಗ,ಎಲ್ಲರ್ದೊ ಪರಿಚಯ ಮಾಡ್ಕೊಂಡ್ಯಾ?"

"ಹೂಂ ದೊಡ್ಡಮ್ಮ..."

ಜಲಜ,ಹಾಲು ಚೆಲ್ಲಿದ ಹಾಗೆ, ಎಲ್ಲ ಹಲ್ಲುಗಳನ್ನೂ ತೋರಿಸಿ

ನಕ್ಕಳು.

"ಸುಳ್ಳು ದೊಡ್ಡಮ್ಮ ಜಲಜಾ ಪರಿಚಯ, ಅದ್ರೆ ಎಲ್ಲರೂದು ಆದ

ಹಾಗೇಂತ ತಿಳಿಕೊಂಡಿದಾಳೆ ಈ ತುಂಗಕ್ಕ"

ಆ ಮಾತಿನಲ್ಲಿದ್ದ ಆತ್ಮೀಯತೆಯ ಸಲಿಗೆಯ ದ್ವನಿಕೇಳಿ ಸರಸಮ್ಮ

ಸಂತುಷ್ಟರಾದರು.

"ಅಂತು ನೀವಿಬ್ಬರು ಒಳ್ಳೇ ಸ್ನೇಹಿತರಗಿದೀರಲ್ಲ. ಅಷ್ಟು ಸಾಕು

ಸದ್ಯಃ!"

"...ಆ ಬಳಿಕ ಒಂದು ಘಂಟೆಯ ಊಟದ ಗಂಟೆ ಬಾರಿಸಿತು

'ನಾವು ಎಲ್ಲಿ ಕೊತ್ಕೋಬೇಕು ದೊಡ್ದಮ್ಮ?"ಎಂದಳು ಜಲಜ

"ನೀನು ಇಲೇ ಇರು.ತುಂಗ ಬೇಕಾದರೆ_"

"ಊ ಹೂಂ ದೊಡ್ದಮ್ಮ. ನಾನು ಇಲ್ಲಿರ್ಬೆಕಾದರೆ ಆಕೇನೂ ಇಲ್ಲೇ

ಇರ್ಲ್ಲಿ."

"ಸರೀನಮ್ಮ."

ಹಾಗೆ ಒಪ್ಪಿಗೆಯನ್ನಿತ್ತು ಸರಸಮ್ಮ ಹೊರಗೆ ಊಟದ ಉಸ್ತುವಾರಿಗೆ

ಹೋದರು. ಹಜಾರದಲ್ಲಿ ತಮ್ಮ ತಮ್ಮ ತಟ್ಟಿಗಳೆದುರು ಸಾಲಾಗಿ ಕುಳಿತಿದ್ದರು ಹಸಿದ ಹುಡುಗಿಯರು.ಬಡಿಸುವ ವರೆಗು ಸಣ್ಣ ಪುಟ್ಟ ಜಗಳ. ಆಮೇಲಿನ ಜಗಳವೆಲ್ಲ ಕೈ-ಬಾಯಿಗೆ.