ಪುಟ:Abhaya.pdf/೮೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಗಮ್ಮನಿಗೆ ನಿರಾಶೆಯಾಯಿತು ಎಲ್ಲರೂ ಹೊರಟು ಹೋದ

ಮೇಲೆ ಅಳುಮೊರೆ ಹಾಕಿಕೊಂಡು ಮನೆಯೊಳಕ್ಕೆ ಬಂದಳು ಅಲ್ಲಿ ಅಕ್ಕ ಅಳುತಿದ್ದಳು. ಅಕ್ಕನ ಜತೆಯಲ್ಲಿ ತಂಗಿಯೂ ಅತ್ತಳು

ಆಮೇಲೆ ಎರಡು ವರ್ಷಗಳಕಾಲ ಆತನ ಪ್ರಸ್ತಾವವೇ ಬರಲಿಲ್ಲ.

ಆ ಅವದಿಯಲ್ಲಿ ತುಗಂಮ್ಮನ ಅಕ್ಕ ಗಂಡನ ಮನೆಗೆ ಹೋದಳು.ಅಲ್ಲಿಂದ, ಬೆಳಗಾಂವಿಯ ಕಾಲೇಗಿನಲ್ಲಿ ಪ್ರಾಧ್ಯಾಪಕ ಕೆಲಸ ದೊರೆತ ಗಂಡನೊಡನೆ ಆ ಊರಿಗೆ ಹೋದಳು. ಮನೆಗೆಲಸ ನೋಡಿಕೊಳ್ಳಲೆಂದು ತುಗಂಮ್ಮ ಹೈಸ್ಕೂಲಿನ ಓದು ನಿಲ್ಲಿಸಬೇಕಾಯಿತು

ಆ ಅವದಿಯ ಮೇಲೊಂದು ದಿನ ತುಗಂಮ್ಮನ ತಂದೆ ಕೇಳಿದರು:

"ತುಂಗಾ,ಅವತ್ತು ಪದ್ಮಾ ಮದುವೆಗೆ ಮೈಸೂರಿನಿಂದ ನಾರಾಯಣ

ಮೂರ್ತೀಂತ ಒಬ್ಬ ಬಂದಿದ್ದ ನೆನಪಿದೆಯೇನೆ?"

"ಎರಡು ವರ್ಷದ ಹಿಂದೆ?"

ಆ ಅವದಿ ಎಷ್ಟೆಂಬುದನ್ನು ತುಗಂಮ್ಮ ಮರೆಯುವುದು ಸಾಧ್ಯವಿತ್ತೆ?

"ಹೂಂ, ಪದ್ಮಾ ಮದುವೆಗೆ-"

"ಅದೇ,ಯಾರೋ ಹುಡುಗಿ ಬಂದು ನನ್ಜತೇಲಿ ಮಾತಾಡ್ತಿದ್ಲು.

ಅವಳಣ್ಣ ಇರ್ಬೇಕು."

"ಹೂಂ.ಹೂಂ.ಅವರೇನೇ ಆ ಹುಡುಗಿಗೆ ಮದುವೆಯಾಯಂತೆ.

ಮೈಸೂರಿನಿಂದ ಬಂದೋರು ಯಾರೋ ಹೇಳಿದ್ರು ಮೊನ್ನೆ."

"ಓ!" ಎಂದಳು ತುಗಂಮ್ಮ. ಅಷ್ಟೇನೆ-ಎಂದು ನಾಲಿಗೆ ಮೌನ

ವಾಗಿ ತೊದಲಿತು

ಆದರೆ ಆಕೆಯ ತಂದೆ,ಒಂದು ಕ್ಷಣ ತಡೆದು ಹೇಳಿದರು:

"ನಾರಾಯಣಮೂರ್ತಿಗೆ ಪಾಸಾಯ್ತಂತೆ."

ತಾನು 'ಹೂಂ' ಎಂದರೆ ಮಾತು ಅಲ್ಲಿಗೇ ನಿಂತು ಹೋಗುವುದೇನೋ

ಎಂದು ಹೆದರಿ ತುಂಗಮ್ಮ ಕೇಳಿದಳು:

"ಯಾವ ಪರೀಕ್ಷೆ ಆಣ್ಣ?"

ಉತ್ತರ ತನಗೆ ತಿಳಿದೇ ಇತ್ತು. ಆದರೂ ಕೇಳಿದ್ದಳಾಕೆ.

"ಬಿ.ಎ., ಮತ್ಯಾವುದು?"