ಪುಟ:Abhaya.pdf/೯೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ತಾನೊಬ್ಬಳೇ ಇದ್ದಾಗ ನಾರಾಯಣಮೂರ್ತಿ ಬಂದಂತಹ ಮೊದಲ

ಸಂದರ್ಭದಲ್ಲಿ ತುಂಗಮ್ಮ ಅಳುಕಿದಳು. ಆದರೆ ನಾರಾಯಣಮೂರ್ತಿಯೀಗ ಜವಾಬ್ದಾರಿಯುತನಾದ ಸದ್ಗ್ಯಹಸ್ಧನಾಗಿದ್ದ. ಗೌರವದಿಂದ ದೂರಕುಳಿತು ಲೋಕಾಭಿರಾಮವಾಗಿ ಮಾತನಾಡಿ ಎದ್ದು ಹೋದ.

ಅಂತಹ ಪ್ರತಿಯೊಂದು ಭೇಟಿಯ ಬಳಿಕವೂ ಮುಂದಿನ ಭೇಟಿಗಾಗಿ

ತುಂಗಮ್ಮನ ಹ್ರದಯ ತವಕಿಸುತಿತ್ತು ಮಾಸಿ ಹೋಗತೊಡಗಿದ್ದ ಮೂರ್ತಿಯ ನೆನಪು ಎಲ್ಲ ವರ್ಣಗಳಲ್ಲೂ ಸ್ಛಟಗೊಂಡು ತುಂಗಮ್ಮನನ್ನು ಕಾಡಿತು.

ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಬಲು ದೂರವಿರಲಿಲ್ಲ, ಕಷ್ಟ

ವಿರಲಿಲ್ಲ.

ನಾರಾಯಣಮೂರ್ತಿ ಆರಾಮ ಕುರ್ಚಿಯಮೇಲೆ ಕುಳಿತು ತನ್ನನ್ನೆ

ನೋಡುತಿದ್ದಾಗಲೊಮ್ಮೆ ತುಂಹಮ್ಮ ಹೇಳಿದಳು:

"ಮರತೇ ಹೋಯಿತು ನಂಗೆ... ಬೆಳಗಾಂವಿಯಿಂದ ಪದ್ದಕ್ಕನ

ಕಾಗದ ಬಂದಿದೆ."

"ಹ್ಯಾಗಿದಾರಂತೆ ಪ್ರೊಫೆಸರು?"

"ಪ್ರೊಫೆಸರು?"

"ಅಲ್ದೆ! ಆ ಊಗ್ನಲ್ಲಿ ಕಾಲೇಜು ಮೇಷ್ಟ್ರುಗಳಿಗೆಲ್ಲಾ ಪ್ರೊಫೆ

ಸರೂಂತ್ಲೇ ಹೆಸರು."

"ಓ!...ಚೆನ್ನಾಗಿದಾರಂತೆ ಪ್ರೊಫೆಸರು"

"ಹೂಂ..."

ಒಂದು ನಿಮೆಷ ತಡೆದು ತುಂಗಮ್ಮ ಹೇಳಿದಳು:

"ಗಂಡಸರೆಲ್ಲಾ ಸ್ವಾರ್ಧಿಗಳು!"

"ಯಾಕೋ?"

"ಪ್ರೊಫೆಸರ್ ವಿಷಯ ಕೇಳಿದ್ರೇ ಹೊರತು ಪದ್ದಕ್ಕ ಹ್ಯಾಗಿ

ದಾಳೇಂತೆ-"

"ಕ್ಷಮಿಸು, ಹೀಗೇ ನೊಡ್ತಾ ಇದ್ದಾಗ ಎಲ್ಲೋ ಮರೆತ್ಹೋಯ್ತು."

ತುಂಗಮ್ಮ ಚಕಿತಳಾದಳು. ತಮ್ಮಮನೆಗೆ ಬರತೊಡಗಿದ ಇಷ್ಟು