ವಿಷಯಕ್ಕೆ ಹೋಗು

ಪುಟ:Banashankari.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೧೪೩

ಅದನ್ನ ಖಂಡಿತವಾಗಿ ಮಾಡ್ತಿನಿ."

   ಗಂಭಿರವಾದರೂ ಮೃದುವಾದ, ತಡೆತಡೆದು ಬಂದರೂ ಏಕ ಪ್ರಕಾರವಾದ,ಸ್ವರದಲ್ಲಿ ಅಮ್ಮಿಯೆಂದಳು:
  " ಗುರುತು ಪರಿಚಯ ಇಲ್ಲದ ಊರಿನಲ್ಲಿ ವಿಶ್ವಾಸದಿಂದ  ನೀವಿಷ್ಟು ಮಾತಾಡ್ಸೊದೇ ನನ್ಬಾಗ್ಯ. ಈ ಮಕ್ಕಳ್ಪುಣ್ಯ... ಬೇರೇನು ಹೇಳ್ಲಿ?...ಸದ್ಯ: ನಮ್ಮ ವಾಸಕ್ಕೆ ಒಂದಿಷ್ಟು ಜಾಗ ಕೊಡ್ಸಿ ಆಮೇಲೆ ಯಾರಾದರೂ ಗೃಹಸ್ಥರ ಮನೇಲಿ ಕೆಲ್ಸ ಕೊಡ್ಸಿ..." 
   " ಎಂಥ ಕೆಲ್ಸ ಮಾಡ್ತಿಯಮ್ಮ ನೀನು? "
   ಎಂಥಾದ್ದು ಬೇಕಾದರೂ ಮಾದ್ತೀನಿ. ಮುಸುರೆ ತಿಕ್ಕೋದು, ಅಡುಗೆ ಮಾಡೋದು... 

ಬೇರೆ ಯಾಚವ ಕೆಲಸವನ್ನು ಅಮ್ಮಿ ಮಾಡುವುದು ಸಾಧ್ಯವಿತ್ತು? ನೆಲ ನೋಡುತ್ತಲೇ ಇದ್ದವಳ ದೃಷ್ಟಿ ರಾಜ ಸುಶೀಲೆಯರ ಮೇಲೆ ಹರಿದೊಡನೆ ಆಕೆಗೆ ಹೊಳೆಯಿತು.

    " ಮಕ್ಕಳ್ನ ನೋಡ್ಕೊಳ್ಳೊ ಕೆಲಸಾನೂ ಮಾಡ್ತೀನಿ."
ಆ ಮಾತಿನ ಹಿಂದಿನ ನೋವು ಶಾಸ್ತ್ರಿಯ ಸ್ನೇಹಿತನಿಗೆ ಅರ್ಥವಾಗದ ಹೋಗಲಿಲ್ಲ. 

"ಅಗಲಮ್ಮ, ನಾಳೇನೆ ಏನಾದರೂ ಮಾಡೋಣ." ಆ ರಾತ್ರೆ ಗಂಡ ಹೆಂಡತಿ ತಮ್ಮ ಕೋಣೆಯಲ್ಲಿ ಬಹಳ ಹೊತ್ತು ಪಿಸುಮಾತನಾಡುತ್ತಿದ್ದುದನ್ನು ನಡುಮನೆಯಲ್ಲಿ ಮಲಗಿದ ಅಮ್ಮಿ ಗಮನಿಸದೆ ಇರಲಿಲ್ಲ. ನಿದ್ದೆ ಬಾರದೆ ಕತ್ತಲೆಯಲ್ಲಿ ಕಣ್ಣು ಪಿಳಿಪಿಳಿ ಬಿಡುತ್ತಲಿದ್ದ ಆಕೆಗೆ ರಾಮಸಾಸ್ತ್ರಿ--ಸುಂದರಮ್ಮನ ನೆನಪಾಯಿತು. ಈ ಮನೆಯಾಕೆಗೆ ಸುಂದರಮ್ಮನ ನಂ‍ಥದೇ ಹೃದಯವಿರುವುದು ವಾದರೆ? ಸ್ನೇಹ ಪರ ಮಾನವ ಜೀವನದ ಸಹವಾಸ ತನಗೆ ದೊರೆಯುವಂತಾದರೆ?

     ರಾಮಶಾಶ್ತ್ರಿಯ ಸ್ನೇಹಿತನಾದ ಕೇಶವಮೂರ್ತಿ ಒಳ್ಳೆಯವನಾಗಿದ್ದ. ಮನೆಯಾಕೆ ಸಾವಿತ್ರಿಯು ಅನುಕೊಲೆಯಾಗಿದ್ದಳು. ಆಕೆಗೆ ಮೊದಲು ಹುಟ್ಟಿದ ಎರಡು ಗಂಡು ಮಕ್ಕಳೂ ಆರಾರು ತಿಂಗಳಿದ್ದು ಸತ್ತು ಹೋಗಿದ್ದುವು. ಮಕ್ಕಳಿಲ್ಲದೆ ಸಂಸಾರವನ್ನು ನಿರ್ವಹಿಸುವುದು  

ಕೇಶಮೂರ್ತಿ ಗಳಿಗೆ ಕಷ್ಟವಾಗಿರಲಿಲ್ಲ. ಕೋಟಿನೆದುರು ಕುಳಿತು ಅರ್ಜಿ ಬರೆದುಕೊಡುತ್ತಲೊ ದಸ್ತಾವೇಜುಗಳನ್ನು ಪ್ರತಿ ಮಾಡಿಕೊಡುತ್ತಲೊ ಆತ ಸಾಕಷ್ಟು ಸಂಪಾದಿಸುತ್ತದ್ದ. ಸಾವಿತ್ರಿಗೆ , ಅಮ್ಮಿಯ ಮಕ್ಕಳನ್ನು ಕಂಡು ಮಮತೆ ಹುಟ್ಟಿತ್ತು. ಮಕ್ಕಳ ತಾಯಿಯ ಕಥೆ ಕೇಳಿ ಕನಿಕರವೂ ಉಂಟಾಗಿತ್ತು. ಆದರೆ ಅಮ್ಮಿ, ಹಾದಿ ತಪ್ಪಿದ ಹೆಂಗಸನೆಂಬುದನ್ನು ಮರೆಯುವುದು ಅವಳಿಂದ ಸಾಧ್ಯವಿರಲಿಲ್ಲ. ಅಲ್ಲದೆ ಅಮ್ಮಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು. ತನ್ನ ಗಂಡನ ರಕ್ಷಣೆಯನ್ನೂ ಸಾವಿತ್ರಿ ಮಾಡಬೇಕಲ್ಲ?

     ತಾನು ಆ ಬಡಪಾಯಿಗೆ ನೇರವಾಗಲೇ ಬೇಕು ಎಂದು ದೃಡ ನಿರ್ಧಾರ 

ಮಾಡಿದ್ದ ಕೇಶವಮೂತಿ‍ ಪರಿಪರಿಯಾಗಿ ಹೇಳಿ ಸಾವಿತ್ರಿಯನ್ನು ಒಪ್ಪಿಸಿದ. ಮನೆಯ ಹಿಂಭಾಗದಲ್ಲಿ ಹಿತ್ತಿಲಿನೊಳಗೇ ಇದ್ದ ದೊಡ್ಡ ಕೊಠಡಿಯನ್ನು ಅಮ್ಮಿಗೆ ಬಿಟ್ಟುಕೊಡಬೇಕೆಂದು ತೀರ್ಮಾನವಾಯಿತು. ಮರುದಿ ಸಾವಿತ್ರಿ ಅಮ್ಮಿಯನ್ನು ಕಂಡಾಗಲೆಲ್ಲ ಗಂಭಿರವಾಗಿರುತ್ತಿದ್ದಳು. ಆದರೆ ಮಕ್ಕಳನ್ನು ಕಂಡೊಡನೆ ಮುಗುಳುನಗುತ್ತಿದ್ದಳು.