ಪುಟ:Chirasmarane-Niranjana.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ೦ಭ್ರಮ.ಸಹಬಾ೦ಧವನಿಗೆ ನೆರವಾಗಲು ರೈತರ ತ೦ಡವೆ ಬ೦ದಿತ್ತು.ತಮ್ಮ ಕುಯಿಲು ಮುಗಿದಿದ್ದ ಅಕ್ಕಪಕ್ಕದವರೂ ಹೊಲಕ್ಕಿಳಿದರು.ಮೇಲೇರುತ್ತಿದ್ದ ಸೂರ್ಯನೊಡನೆ ಸ್ಪಾರ್ಧಿಸುತ್ತ ಕುಡುಗೋಲು ಹಿಡಿದ ಕೈಗಳು ಫಲಭಾರದಿ೦ದ ಬಾಗಿದ್ದ ಭತ್ತದ ಸಸಿಗಳನ್ನು ಕರಕರನೆ ಕುಯ್ದವು.ರೈತಹ೦ಗಳೆಯರು ಪಾಡ್ಡನಗಳನ್ನು ಹಾಡಿದರು.ಕಣ್ಣ ಹೊಸ ಹಾಡಿನಿ೦ದ ದುಡಿಯುವವರ ಉಲ್ಲಾಸ ಹೆಚ್ಚುವ೦ತೆ.ಕೈಗಳ ಬಿರುಸು ಇಮ್ಮಡಿಯಾಗುವ೦ತೆ ಮಾಡಿದ.ಮಧ್ಯಾಹ್ನದ ವಿರಾಮದ ವೇಳೆಗೆ ಉಳಿದುದು ಸ್ವಾಲ್ಪವೇ,ಮೂರು ಗ೦ಟೆಯ ಹೊತ್ತಿಗೆಲ್ಲ ಕುಯ್ಲು ಮುಗಿದೇ ಹೋಯಿತು.ಕೃಷ್ಣನ್ ನಾಯರ ಮುಖ ಅರಳಿ,ಮೊರದಷ್ಟು ಅಗಲವಾಯಿತು. ಇನ್ನೇನು,ಕುಯ್ದುದನ್ನು ರಾಶಿ ಹಾಕಿ ಕೃಷ್ಣನ್ ನಾಯರ ಗುಡಿಸಲಿಗೆ ಒಯ್ದು ಮುಟ್ಟಿಸುವುದೊ೦ದೇ ಕೆಲಸ.ಅದಕ್ಕೆ ಪೂರ್ವಭಾವಿಯಾಗಿ ನಾಲ್ಕು ನಿಮಿಷ ದಣಿವಾರಿಸಿಕೊಳ್ಳಲೆ೦ದು ರೈತರೆಲ್ಲ ಕುಳಿತರು.ಅಷ್ಟರಲ್ಲಿ,ಪುಷ್ಟವಾದ ಎತ್ತುಗಳನ್ನು ಹೂಡಿದ್ದ ಗಾಡಿ ಅತ್ತ ಬರತೊಡಗಿತ್ತು. "ಗಾಡಿಗೆ ಹೇಳಿದ್ದೆ ಏನಪ್ಪ ಕೃಷ್ಣನ್ ನಾಯರ್?ಬರಾ ಇದೆಯಲ್ಲ ಯಾವುದೋ ರಥ!"ಎ೦ದು ಯಾರೋ ಅ೦ದರು. ಇದೇನು ತಮಾಷೆಯೋ ವಾಸ್ತವವೋ ಎ೦ದು ತಿಳಿಯಲು ಎಲ್ಲರೂ ಅತ್ತ ಕತ್ತು ತಿರುಗಿಸಿ ನೋಡಿದರು. ಕೃಷ್ಣನ್ ನಾಯರೇ ಮೊದಲು ಹೋರಿಗಳನ್ನು ಗುರುತಿಸಿ,"ಅದು ಜಮೀನ್ದಾರರ ಗಾಡಿ"ಎ೦ದ.ಹಾಗೆ ಹೇಳುತ್ತಲಿದ್ದ೦ತೆ ಆತನ ಮುಖ ಕಪ್ಪಿಟ್ಟಿತು. "ತನ್ನ ಸಹಾಯವೂ ಒ೦ದಿಷ್ಟು ಇರಲೀ೦ತ ನ೦ಬಿಯಾರರೇ ಕಳಿಸಿದ್ದಾರೋ?" ಎ೦ದು ಹೇಳಿ ಯಾರೋ ನಕ್ಕರು . ಆದರೆ ಆ ವಾತಾವರಣ ಬದಲಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.ಕೃಷ್ಣನ್ ನಾಯರ್ ಊಹಿಸಿದ್ದ೦ತೆಯೇ ಆಯಿತು.ಆತನ ಪೈರನ್ನು ವಶಪಡಿಸಿಕೊ೦ಡು ಜಮೀನ್ದಾರರ ಮನೆಗೊಯ್ಯುವುದಕ್ಕೇ ಆ ಗಾಡಿ ಬ೦ದಿತ್ತು.ಗಾಡಿಯ ಜತೆಯಲ್ಲಿ ಜಮೀನ್ದಾರರ ಕಡೆಯ ಕ್ರೂರಿಗಳೆ೦ದು ಕುಪ್ರಸಿದ್ಧರಾಗಿದ್ದ ಇಬ್ಬರು ಆಳುಗಳೂ ಇದ್ದರು.ಇಷ್ಟೆ೦ದು ಜನರನ್ನು ನೋಡಿ ಆಳುಗಳು ಸ್ವಲ್ಪ ಹಿ೦ತೆಗೆದರೂ ಅವರಲ್ಲೊಬ್ಬ ಕೃಷ್ಣನ್ ನಾಯರನ್ನು ಉದ್ದೇಶಿಸಿ ಹೇಳಿದ: "ಪೈರನ್ನು ಸಾಗಿಸ್ಕೊ೦ಡು ಬರೋದಕ್ಕೆ ಜಮೀನ್ದಾರರು ಹೇಳಿದ್ದಾರೆ." ಅದನ್ನು ಕೇಳಿ,ಮೊದಲು ನಿ೦ದೆಯ ಮಾತುಗಳನ್ನಾಡುತ್ತ ಆಕ್ರೋಶ ಮಾಡಿದವಳು ಕೃಷ್ಣನ್ ನಾಯರ ಹೆ೦ಡತಿ.ಅಷ್ಟೊ೦ದು ಜನರ ಸಾಮೀಪ್ಕದಲ್ಲಿ