ಪುಟ:Chirasmarane-Niranjana.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಚಿರಸ್ಮರಣೆ "ನಮ್ಮ ಸಂಘದ ಧ್ಯೇಯ ಧೋರಣೆ ಏನೂಂತ ವಿವರಿಸಿ ನಾವೊಂದು ಕರ ಪತ್ರ ಹೊರಡಿಸಿದ್ದೇವೆ.ನೀವು ನೋಡಿರಬಹುದು."

  "ಹೂಂ."

"ಅದನ್ನೋದಿ.ಎಲ್ಲ ವಿಷಯವೂ ನಿಮಗೆ ತಿಳೀತದೆ." "ರೈತರ ಹಿತರಕ್ಷಣೆ ಮಾಡೋದರ ಹೊರತು ಬೇರೆ ಉದ್ದೇಶವೇನೂ ಇಲ್ಲವೊ?" "ಹೇಳಿದೆನಲ್ಲ.ಎಲ್ಲಾ ಆ ಕರಪತ್ರದಲ್ಲಿದೆ." ತೃಪ್ತಿಕರವಾದ ರೀತಿಯಲ್ಲಿ ಪ್ರಶ್ನೋತ್ತರ ನಡೆಯುತ್ತಿಲ್ಲವೆಂದು ನಂಬಿಯಾರರು ಘೌಜದಾರರಿಗೆ ಹೇಳಿದರು:"ಆ ಬಾವುಟದ ವಿಷಯ ಕೇಳಿ." ಘೌಜದಾರರು ಒಂದು ನಿಮಿಷ ಮೌನವಾಗಿದ್ದು ಅಂದರು: "ಅ ಬಾವುಟ ನಿಮಗೆ ಯಾರು ಕೊಟ್ಟರು?" "ನಾವೇ ಮಾಡಿದೆವು." "ಅದನ್ನು ಹಾರಿಸೋದು ರಾಜದ್ರೋಹ ಅಂತ ನಿಮಗೆ ಗೊತ್ತೊ?" "ಅದು ಯಾವ ದ್ರೋಹವೂ ಅಲ್ಲ.ಅದು ಅಖಿಲ ಭಾರತ ರೈತ ಸಂಘದ ನಿಶಾನೆ.ಕಾನೂನುಬದ್ಧ." 'ಓಹೋ!ಕಾನೂನು ಬೇರೆ ಮಾತಾಡ್ತೀರೋ?ಎಷ್ಟು ಓದಿದ್ದೀರಪ್ಪ ನೀವು?" "ನಿಮ್ಮಷ್ಟು ಓದಿಲ್ಲ!"ಎಂದ ಅಪ್ಪು. ನಂಬಿಯಾರರು ಥಟಕ್ಕನೆ ಕುರ್ಚಿಯಲ್ಲೇ ಮೈ ನಿಡಿದು ಕುಳಿತು ಕೈಬೀಸಿ ಕೂಗಾಡಿದರು. "ಬಿಗಿಯಿರಿ ಅವನಿಗೆ ನಾಲ್ಕೇಟು!ರ್ಯಸ್ಕಲ್!ಹ್ಯಾಗೆ ಆಡ್ತಿದ್ದಾನೆ ನೋಡಿ!" ನಂಬಿಯಾರರ ಆಳುಗಳು ಆಪ್ಪುವಿನ ಮೇಲೆ ಧುಮುಕಲು ಮುಂದಾದರು. ಆದರೆ ಆ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು ಪೋಲೀಸರಿರುವರೆಂದು ಅವರು ಸುಮ್ಮ ನಿರಬೇಕಾಯಿತು.ಪೋಲಿಸರೇನೋ ಸಿದ್ದವಾಗಿದ್ದರು.ಆದರೆ ಘೌಜದಾರರ ಸೂಚನೆ ಬರದೆ ಇದ್ದುದರಿಂದ,ಅವರು ಮುಂದುವರಿಯಲಿಲ್ಲ. ಜಮೀನ್ದಾರರು ಕತ್ತನ್ನು ಮುಂದಕ್ಕೆ ಚಾಚಿ ಮೊಗಸಾಲೆಯ ಅಡ್ಡ ಗೋಡೆಯಾಚೆ "ಥೂ!"ಎಂದು ಉಗುಳಿದರು. ಘೌಜದಾರರು ಏರುದನಿಯಲ್ಲಿ ನುಡಿದರು: "ಮಲಬಾರಿನಲ್ಲಿರೋ ಈ ರೋಗ ನಮ್ಮ ತಾಲ್ಲೂಕಿಗೂ ಹಬ್ಬಬೇಕೂಂತ ಮಾಡಿದ್ದೀರೇನು?ಖಂಡಿತ ಬಿಡೋದಿಲ್ಲ!ನಾವಿರೋದು ಯಾತಕ್ಕೆ?ಹಿಂದೆ ದೊಡ್ಡ