ಪುಟ:Chirasmarane-Niranjana.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಚಿರಸ್ಮರಣೆ

        "ನನಗೆ ಕೋಪ ಬಂತೂಂತ ನೀವು ತಪ್ಪು ತಿಳೀಬೇಡಿ. ಬೇಸರವಾಯ್ತು ಅದಕ್ಕೆ

ಹಾಗೆಂದೆ."

       "ಇರಲಿ, ದೊಡ್ಡದಲ್ಲ"
       "ನೀವು ಇಲ್ಲಿತಯ ಪರಿಸ್ಥಿತಿ ವಿಷಯ ಮೇಲಧಿಕಾರಿಗಳಿಗೆ ಜೋರಗಿಯೇ ವರದಿ

ಮಾಡ್ಬೇಕು."

       "ಮಾಡ್ತೇನೆ."
       "ವೊಳಕೇಲೇ ಚಿವುಟದಿದ್ದರೆ, ಮರವಾದ್ಮೇಲೆ ಕಷ್ಟ. ಇವರ ಒಗ್ಗಟ್ಟಿನಿಂದಾಗಿ

ನಮಗಿನ್ನು ಇದರಿಂದ ಯಾವ ರೀತಿಯ ಸಹಾಯವೂ ಸಿಗೋದಿಲ್ಲ. ನಮ್ಮ ಸಾಲ ವಸೂಲಾಗೋದು ಕಷ್ಟವಾಗ್ತದೆ. ಗೇಣಿ ಸಂದಾಯವೂ ನಿಂತು ಹೋಗ್ಬಹುದು. ಗೌರವ ಮರ್ಯಾದೆ ಯಾವುದೂ ಇಲ್ಲದೆ ನಾವು ಊರು ಬಿಡ್ಭೇಕಾಗ್ತದೆ, ಅಷ್ಟೆ... ಹಾಂ... ಇದು ನಮಗೆ ಸಂಬಂಧಿಸಿದ್ದು ಮಾತ್ರವಲ್ಲ ಇವರೆಲ್ಲ ಸರಕಾರದ ಮಾಅತನ್ನೂ ಆಡ್ತಾರೆ. ಸಮ್ರಾಜ್ಯಶಾಹಿಯನ್ನು ನಿರ್ನಾಮ ಮಾಡ್ತೇವೇಂತ ಪ್ರತಿಜ್ಞೆ ತಗೊಂಡಿದ್ದಾರಂತೆ. ಆ ಮಾಸ್ತರು ಗುಡುಗರ್ನ ಹ್ಯಾಗೆ ಕೆಡಿಸ್ತಿದ್ದ ಅನ್ನೋದಂತೂ ಮಧ್ಯಾಹ್ನವೇ ಹೇಳಿದ್ದೇನೆ. ಇವರು ಗಾಂಧೀವಾದಿಗಳಂತೂ ಅಲ್ಲ. ನೀವು ಊಹಿಸಿದ ಹಾಗೆ ಕ್ರಾಂತಿಕಾರರೇ ಇರಬಹುದು.ನನ್ನ ಅಭಿಒರಾಯ, ಈ ರೈತ ಸಂಘದ ಮೇಲೆಯೇ ನಿಷೇಧಾಜ್ಞೆ ಹೊರಿಸ್ಬೇಕು. ಏನೇಳ್ತಿರಾ?"

      ನಂಬಿಯಾರರ ಮಾತುಗಳನ್ನೆಲ್ಲ ಮೌನವಾಗಿ ಕೇಳಿದ ಘೌಜದಾರರೆಂದರು:
      "ನಿಷೇಧಾಜ್ಞೆ ಹೊರಡಿಸೋದು ಪ್ರಾಂತ ಸರಕಾರಕ್ಕೆ ಸಂಬಂಧಿಸಿದ ವಿಷಯ.

ರೈತ ಸಂಘ ಅನ್ನೋದು ಎಲ್ಲಾ ಕಡೇಲೂ ಇದೆನೋಡಿ."

      "ಅದು ನನಗೆ ತಿಳೀದಾ? ನಿಷೇಧಿಸೋ ಹಾಗೆ ನೀವು ಒತ್ತಾಯಿಸ್ಬೇಕೂಂತ

ನಾನಂದೆ."

      "ಹೂಂ."
      "ಇದು ನನ್ನೊಬ್ಬನದೇ ಅಲ್ಲ; ನಂಬೂದಿರಿ ಜಮೀನ್ದಾರರ ಅಭಿಒರಾಯವೂ

ಇದೇ ಅಂತ ಬರೆದ್ಬಿಡಿ.... ಆತ ಮಹಾ ಪುಕ್ಕಲು. ಹ್ಯಾಗೆ ಕೂತಿದ್ದಾಂತ ನೋಡಿದಿರೋ ಇಲ್ಲವೊ? ನಾಳೆ ಈ ರೈತರೆಲ್ಲ, 'ಜಮಿನು ನಮ್ಮದೇ'- ಅಂದರೆ, 'ಒಪ್ದೆ, ನಿಮ್ಮದೇ'- ಅನ್ನೋ ಜಾತಿ. ಇಂಥವರನ್ನು ನಂಬಿಕೊಂಡು ನಾವು ಕೆಲಸ ಮಾಡ್ಬೇಕು! ಇಲ್ಲಿ ದಿನ ಲಲೆಯೋದು ಎಷ್ಟು ಕಷ್ಟ ಗೊತ್ತೋ?"

     ಹೌದು, ಹೌದೆನ್ನುವಂತೆ ಘೌಜದಾರರು ಮಖಬಾವದ ಮೂಲಕ ಸಂಪೂರ್ಣ

ಸಹಾನುಬೂತಿಯನ್ನು ವ್ಯಕ್ತಪಡಿಸಿದರು.....