ಪುಟ:Chirasmarane-Niranjana.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೬೩ ಕರಕೊಂಡುಬಂದಿದ್ದೆ, ನೆನಪಿದೆಯಾ? ಆದರೆ ಆ ಸಲ ಹಾಗೇ ಹೋರಠೋದೆ. ಆಮೇಲೆ ಎಷ್ಟೋಸಾರೆ ನೀನು ಊಟಕ್ಕೆ ಬಂದಿದ್ದರೂ ಕರಿಗಡುಬು ಮಾಡಿರ್ಲಿಲ್ಲ. ಇವತ್ತು ಮಾಡಿದೆ. ಅದಕ್ಕೇ, ನಿನ್ನೊಬ್ಬನನ್ನೇ ಕರೆದದ್ದು."

 ಕರಿಗಡುಬು ತಿನ್ನಲೆಂದು ಮೊದಲೊಮ್ಮೆ ಬಂದಿದ್ದ. ಆ ರಾತ್ರೆಯೊ, ಅದೆಂದು

ಮರೆಯಲಾಗದ ನೆನಪು. ಕಣ್ಣನ ಮಾತುಗಳನ್ನು ಕೇಳುತ್ತ ಅಪ್ಪುವಿನ ಮನಸ್ಸು ನಿರ್ಮಲವಾಯಿತು; ಹೃದಯ ಹಗುರವಾಯಿತು. ಆತ ಲವಲವಿಕೆಯಿಂದ ಮಾತನಾಡತೊಡಗಿದ. ಹೆಂಗಸರು ಮುಖ್ಯವಾಗಿ-ದೇವಕಿ ಜಾನಕಿಯರು-ಜಾನಕಿ ದೇವಕಿಯರು-ತಮ್ಮ ಸಂಭಾಷಣೆಗೆ ಕಿವಿಗೊಡುತ್ತಿರುವೆಂಬ ಅರಿವಿನಿಂದಲೇ, ಆ ವಿಷಯ ಈ ವಿಷಯ ಪ್ರಸ್ತಾಪಿಸಿ ಅಪ್ಪು ಸ್ವಾರಸ್ಯವಾಗಿ ಮಾತನಾಡಿದ.... ಊಟವಾಯಿತು. ಅಪ್ಪು ವೀಳ್ಯದೆಲೆ ಹಾಕಿಕೊಳ್ಳಲಿಲ್ಲ. ಕಣ್ಣ ಒತ್ತಾಯಿಸಿದಾಗ ದೇವಕಿ, "ಅವರು ವೀಳ್ಯ ಹಾಕಿಕೊಳ್ಳದ ಬ್ರಹ್ಮಚಾರಿ! ಬಲವಂತ ಮಾಡ್ಬೇಡಿ" ಎಂದಳು. ಕಣ್ಣ ನಕ್ಕ. ಏನು ಹೇಳಬೇಕೆಂದು ತಿಳಿಯದೆ ಪೆಚ್ಚಾಗಿ ಅಪ್ಪುವೂ ನಕ್ಕ.

 ಆತ ಹೊರಟು ನಿಂತಾಗ ಬಾಗಿಲ ಬಳಿಗೆ ಬಂದು ದೇವಕಿ ಕೇಳಿದಳು:
 "ಬ್ಯಾಟರಿ ತರ್ಲಿಲ್ವ ಇವತ್ತು?"
 "ಇಷ್ಟೊಂದು ತಿಂಗಳ ಬೆಳಕಿದೆ!"
 "ಆದರೂ ತರಲಿಲ್ವೇನೋಂತ ಕೇಳ್ದೆ."
 ಇದು ಅರ್ಥವಿಲ್ಲದ ಮಾತಾಗಿ ಅಪ್ಪುವಿಗೆ ತೋರಿತು. ಆದರೆ ದೇವಕಿ ಒಳಕ್ಕೆ

ತಿರುಗಿ ಹೇಳಿದಳು:

"ಬ್ಯಾಟರಿ ಅಂದರೆ ಇವರಿಗೆ ಪ್ರಾಣವಿದ್ದ ಹಾಗೆ!"
ಒಳಗಿನಿಂದ ಇಂಪಾದ ಕಿಲಕಿಲ ಮುಗ್ಧನಗು ಕೇಳಿಸಿತು. ಆ ನಗೆಯ ಗುಂಗಿನಲ್ಲೇ

ಅಪ್ಪು ಹಾದಿ ನಡೆದ.

 ".....ಅಡುಗೆ ಚೆನ್ನಾಗಿ ಮಾಡಿದ್ದರೇನೊ?" ಎಂದು ತಾಯಿ ಮನೆಯಲ್ಲಿ

ಕೇಳಿದಳು.

 ಆತ "ಹೂಂ" ಎಂದ.
 "ಎಲ್ಲರೂ ಬಂದಿದ್ದರಾ?"
 ಮತ್ತೊಮ್ಮೆ "ಹೂಂ."
 .....ಆ ರಾತ್ರೆ ನಿದ್ದೆ ಅಪ್ಪುವಿನ ಬಳಿಗೆ ಬರುವುದು ತಡವಾಯಿತು.