ಪುಟ:Chirasmarane-Niranjana.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ೨೧೨                                        ಚಿರಸ್ಮರಣೆ                                                                            
         ಸಶಸ್ತ್ರದಳದವರು ದಸ್ತಗಿರಿ ಮಾಡಿದ ಮೂವತ್ತು ಜನರನ್ನು ಪೋಲೀಸರ
   ವಶಕ್ಕೆ ಕೊಟ್ಟು ಹೊಸದುರ್ಗಕ್ಕೆ ಕಳುಹಲು ಅಧಿಕಾರಗಳು ತೀರ್ಮಾನಿಸಿದರು.
  ವಿಜೃಂಭಣೆಯಿಂದಲೆ ನಡೆಯಿತು ಬೀಳ್ಕೊಡುಗೆ, ಕೈದಿಗಳು ಹೊರಗೆ ನಿಲ್ಲಿಸಿ
  ಸಂಘದ ಛಾವಣಿಗೆ ಸೈನಿಕರು ಬೆಂಕಿ ಕೊಟ್ಟರು. ಉರಿ ಆಕಾಶವೇರುತ್ತಿದ್ದಾಗ
  ಅಧಿಕಾರಿಯ ಅನುಜ್ಞೆಯಂತೆ "ಸಂಘ ನಾಶವಾಗಲಿ! ಬ್ರಿಟಿಷ್ ಸರಕಾರಕ್ಕೆ
  ಜಯವಾಗಲಿ! ಜಮೀನ್ದಾರರು ನೂರು ವರ್ಷ ಬಾಳಲಿ!" ಎಂದು ನಂಬಿಯಾರರ
  ಸೇವಕರು ಕೂಗಿದರು. ಬಳಿಕ ದಿನವೆಲ್ಲ ಉಪವಾಸ ಇದ್ದು ರಾತ್ರೆ ನಿದ್ದೆಗೆಟ್ಟಿದ್ದ
  ಬಂಧಿತರನ್ನು ಚರ್ವತ್ತೂರು ನಿಲ್ದಾಣಕ್ಕೆ ಪೋಲೀಸರು ನಡೆಸಿದರು.
       ಈ ಬೀಳ್ಕೊಡುಗೆಯ ಬಳಿಕ ಮತ್ತೆ ಬೇಟೆ, ಏನೂ ಸಿಗದೆ ಹೋದಾಗ,
  ಒಬ್ಬೊಬ್ಬರನ್ನೇ ಕರೆಸಿ ಚತುರನಾದ ಪೋಲೀಸ್ ಅಧಿಕಾರಿಯಿಂದ ವಿಚಾರಣೆ.
      ಕಯ್ಯೂರು ಶಾಲೆಯ ಹೊಸ ಮಾಸ್ತರು ಅವರೆದುರು ಕೈಕಟ್ಟಿ ನಿಲ್ಲಿಬೀಕಾಯಿತು.
 ಸ್ವತಃ ನಂಬಿಯಾರರೇ ಓಡಿ ಬಂದು,"ಈತ ನಮ್ಮವನು" ಎಂದು ಹೇಳಿದುದರಿಂದ
 ఆ ಉಪಾಧ್ಯಾಯನಿಗೆ ಹೊಡೆತ ತಪ್ಪಿತು.
     ಆದರೂ ಅಧಿಕಾರಿ ಕೇಳಿದ:
     "ಈತ ಕ್ರಾಂತಿಕಾರನಲ್ಲ ಅನ್ನೋದು ಖಂಡಿತವೋ?"
     "ನಾನು ಭರವಸೆ ಕೊಡ್ತೇನೆ" ಎಂದರು ನಂಬಿಯಾರರು.
     ಅಧಿಕಾರಿ ಉಪಾಸಧ್ಯಾಯನನ್ನು ಪ್ರಶ್ನಿಸಿದ:
     "ಏನಯ್ಯಾ, ಇವತ್ತು ಶಾಲೆ ಯಾಕೆ ನಡೆಸ್ಬಾರ್ದು?" 
     ನಡುಗುತ್ತಿದ್ದವನಿಂದ ತೊದಲು ಉತ್ತರ ಬಂತು.
     "ಹುಡುಗರಿಲ್ಲ ಸರ್."
     "ಹುಡುಗರಿಲ್ಲದಿದ್ದರೂ ಶಾಲೆ ನಡೆಸ್ಬೇಕು!"
     "ಆಗಲಿ ಸಾರ್."
     "ಪರೀಕ್ಷೆ ಹತ್ತಿರ ಬಂತು, ಏನ್ಮಾಡ್ತೀಯಾ?" 
     "ಹುಡುಗರು--" 
     "ಹುಡುಗರ್ನ ಕೂಡಿಸ್ಕೊಂಡು ಬಂದು ಪರೀಕ್ಷೆ ನಡೆಸ್ಬೇಕು."
     "ಆಗಲಿ--ಆಗಲಿ ಸಾರ್." 
     "ಹೂಂ. ಹೋಗು!"
     ಬದುಕಿನೆಂದು ಆತ ತಿರುಗಿದೊಡನೆ ಅಧಿಕಾರಿ ಪುನಃ ಕರೆದ:
     "ಎಲ್ಲಿ ಹೇಳು---ಲಾಂಗ್ ಲಿವ್ ದಿ ಕಿಂಗ್!"