ಪುಟ:Chirasmarane-Niranjana.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೩೨ ಚಿರಸ್ಮರಣೆ ಹೊಸತಾಗಿರಲಿಲ್ಲ, ಇಲ್ಲಿಯೂ ಅಷ್ಟೇ ರುಚಿಯಾಗಿತ್ತು ಚಹಾ, ಬಿಸಿಯಾಗಿದ್ದ ಆ ಗುಟುಕು ಪಾನೀಯ ಅವರ ನಾಲಿಗೆಗೆ ಚುರುಕು ಮುಟ್ಟಿಸಿತು.

   ಹುಡುಗರು ಫೂ ಫೂ ಎಂದು ಊದುತ್ತ ಆರಿಸಿ ಚಹಾ ಕುಡಿಯುತ್ತಿದ್ದುದನ್ನೆ

ಅಂಗಡಿಯವನು ದಿಟ್ಟಿಸಿದ.

    ಅಪ್ಪುವಿಗೆ ಒಮ್ಮೆಲೆ ಅಸಮಾಧಾನವೆನಿಸಿತು. ತಾವು ಬಂದ ಕೆಲಸವೇನು?

ಮಾಡುತ್ತಿದ್ದುದೇನು? ಆತ ಚಿರುಕಂಡನನ್ನು ನೋಡಿದ.ಇವನನ್ನೂ ಅದೇ ಯೋಚನೆ ಬಾಧಿಸುತ್ತಿತ್ತು, ಈತ ಅಪ್ಪುವನ್ನು ನೋಡಿದ.

   ಹುಡುಗರು ಚಾ ಕುಡಿದು ಗ್ಲಾಸುಗಳನ್ನು ಕೆಳಗಿಡುತ್ತಿದ್ದಂತೆಯೇ

ಅಂಗಡಿಯವನೆಂದ:

    "ಎಲ್ಲಿಗೆ ಹೊರಟಿದ್ದೀರಾ?"
     ಇಬ್ಬರಿಗೂ ಒಮ್ಮೆಲೆ ದಿಗಿಲಾಯಿತು. ಆದರೂ ಚಿರುಕಂಡ ಶಾಂತವಾಗಿರಲು

ಯತ್ನಿಸುತ್ತ ಹೇಳಿದ:

   "ಹೀಗೇ ಬಂದ್ವಿ."
   "ಹಾಗೋ!"
   ಅದು, 'ಎಲ್ಲಾ ಗೊತ್ತಿದೆ' ಎನ್ನುವ ನಗೆಯ ಧ್ವನಿ. ಅಪ್ಪುವಿಗೆ ಆ ಧ್ವನಿ 

ಇಷ್ಟವಾಗಲಿಲ್ಲ.

   ಸ್ವಲ್ಪ ಹೊತ್ತಿನ ಮೌನದ ಬಳಿಕ ಅಂಗಡಿಯವನು ಮತ್ತೊಂದು ಪ್ರಶ್ನೆ ಕೇಳಿದ:
   "ನಿಮ್ಮ ಹೆಸರು ಚಿರುಕಂಡ ಮತ್ತು ಅಪ್ಪು ಅಲ್ಲ?"
    ಹುಡುಗರು ಬೆಚ್ಚಿ ಬಿದ್ದರು. ಅಲ್ಲಗಳೆಯುವುದೇ ಯೋಗ್ಯವೆನಿಸಿತು. ಆದರೆ

ಮಾತು ಹೊರಡಲಿಲ್ಲ.

    ಅಂಗಡಿಯವನು ನಗುತ್ತ ಎಂದ;
    "ಹೆದರಬೇಡಿ. ನಿಮ್ಮ ಮಾಸ್ತರು ರಾತ್ರಿಯೇ ಹೇಳಿ ಹೋಗಿದ್ದಾರೆ."
    ಇಬ್ಬರ ಮುಖವೂ ಅಗಲವಾಯಿತು. ಉತ್ಸಾಹಗೊಂಡು ಅಪ್ಪು ಕೇಳಿದ:
    "ನಮ್ಮ ಮಾಸ್ತರು ಗೊತ್ತಾ ನಿಮಗೆ?"
    "ಓಹೋ! ಏನು ಗೊತ್ತಿಲೆ ?"
    ಚಿರಕಂಡನೆಂದ:
    "ನಾವು ಮಾಸ್ತರನ್ನು ನೋಡ್ಬೇಕು. ಅವರು ನಮ್ಮನ್ನು ಇಲ್ಲಿಗೆ ಬರೋದಕ್ಕೆ 

ಹೇಳಿದ್ರು." "ಎರಡು ನಿಮಿಷ ಇಲ್ಲೇ ಇರಿ, ನೀವು ಬಂದಿರೋದು ಗೊತ್ತಾದ ತಕ್ಷಣ