ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

'ಚಿರಸ್ಮರಣೆ'ಯನ್ನು ನಾನು ಅರ್ಪಿಸಿರುವ ಮೂವರು ಮಹಾನುಭಾವರಲ್ಲಿ ಇಬ್ಬರು ಈಗ ಇಲ್ಲ. ಅವಿಭಾಜ್ಯ ಕಮಾನಿಸ್ಟ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಗಣಪತಿ ಕಾಮತ್ ನಡುವಯಸ್ಸಿನಲ್ಲೇ ತೀರಿಕೊಂಡರು. ಕೇರಳ ವಿಧಾನ ಸಭೆಯಲ್ಲಿ ಕಮ್ಯೂನಿಸ್ಟ್ (ಮಾರ್ಕ್ಸ್‌ವಾದಿ) ಸದಸ್ಯರಾಗಿದ್ದ ವಿ. ವಿ. ಕು೦ಞಂಬುರವರೂ ಮುಪ್ಪಿಗೆ ಮುನ್ನವೇ ನಿಧನರಾದರು.