ಪುಟ:Daaminii.pdf/೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
8
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಹಿಡಿವ ಪ್ರಯಾಸವಿಲ್ಲ;.-ಕಳ್ಳನು ತಾನಾಗಿಯೇ ಬಂದು, ಸಿಕ್ಕುಬಿದ್ದನು.
ರಮೇಶನು ದಾಮಿನಿಯ ಗಲ್ಲಗಳನ್ನು ಹಿಡಿದನು. ಹಾಗೆಯೆ, ತನ್ನ ಎರಡು
ಕಯ್ಗ ಳಿಂದ ಅವಳ ಕಿವಿಗಳೆರಡನ್ನೂ ಮುಚ್ಚಿ, ಮುಖವನ್ನು ಮೇಲಕ್ಕೆತ್ತಿ ಹಿಡಿದು ಕೊಂಡು, ನೋಡತೊಡಗಿದನು. ದಾಮಿನಿಯೂ ರಮೇಶನ ಬಾಹುಗಳನ್ನು ಹಿಡಿ ದುಕೊಂಡು, ಊಧ್ವರವದನೆಯಾಗಿ ಅವನನ್ನು ನೋಡಲಾರಂಭಿಸಿದಳು. ಹಾಗೆಯೆ, ನೋಡುನೋಡುತ್ತ,-“ನನ್ನ ಸರ್ವಸ್ವ!” – ಎಂದಳು. ದಾಮಿನಿಯ ಕಣ್ಣುಗಳಲ್ಲಿ ಒಮ್ಮೆಯಿಂದೊಮ್ಮೆಯೆ, ನೀರು ತುಂಬಿತು. ಅವಳು ದೊಡ್ಡದಾಗಿ ಅತ್ತು ಬಿಟ್ಟಳು.
ರಮೇಶನು ದಾಮಿನಿಯನ್ನು ಬಿಟ್ಟು ಬಿಟ್ಟು, ಭಗ್ನಸ್ಪರದಿಂದ-“ನೀನು ನಿತ್ಯವೂ
ಅಳುತ್ತಿರುವೆಯೇಕೆ? – ಎಂದನು. ಕಣ್ಣನ್ನೂರಸಿಕೊಳ್ಳುತ್ತ, ದಾಮಿನಿಯು ನೀವು ನನ್ನನ್ನು ನಿತ್ಯವೂ ಆದರಿಸುತ್ತಿರುವಿರೇಕೆ?”- ಎಂದಳು.
ಅಷ್ಟರಲ್ಲಿಯೆ, ಬಾಗಿಲ ಬಳಿಯಲ್ಲಿ, ಘನನಿಶ್ವಾಸದ ಶಬ್ದವುಂಟಾಯಿತು,
ಆರೋ, ಇನ್ನೊಬ್ಬರು ಸಿಕ್ಕಿಬಿಕ್ಕಿ ಅಳುತ್ತಿರುವಂತಿದ್ದಿತು. ರಮೇಶನೂ ದಾಮಿನಿ ಯೂ ಇಬ್ಬರೂ ವ್ಯಸ್ತರಾಗಿ, ನೋಡುವುದಕ್ಕೆಂದು ಆ ಕಡೆಗೆ ಓಡಿಹೋದರು. ಅರ್ಧ ವಯಸ್ಕಳಾದ ಅಸುಚಿತೆಯಾದ ಒಬ್ಬ ಹೆಂಗಸು ಸೀರೆಯ ಸೆರಗಿನಿಂದ ಕಣ್ಣ ನ್ನೊರಸಿಕೊಳ್ಳುತ್ತೆ ನಡೆದುಹೋಗುತ್ತಿದ್ದಳು, ದಾಮಿನಿಯೂ ಆ ಹೆಂಗಸಿನ ಹಿಂಗ ಡೆಯೇ ನಡೆದಳು. ಇಬ್ಬರೂ ಹೊರಬಾಗಿಲಿನ ಹತ್ತಿರಹತ್ತಿರವಾದರು. ಒಡನೆಯೆ ಆ ಹೆಂಗುಸು ಹಠಾತ್ತಾಗಿ ಹಿಂದಿರುಗಿದಳು; ಹಿಂದಿರುಗಿ, ದಾಮಿನಿಯನ್ನು ನೋಡಿ, ಒಮ್ಮೆಯಿಂದೊಮ್ಮೆಯೆ ಒಂದೇ ಬಿಟ್ಟಳು. ಅವಳನ್ನು ನೋಡಿದರೆ, ಉನ್ಮಾದಿನಿ ಯೆಂದು ಬೋಧೆಯಾಗುತ್ತಿತ್ತು. ನೋಡುತ್ತಿದ್ದ ಹಾಗೆ, ದಾಮಿನಿಗೆ ಏನೋ ಮನ ಸ್ಸಿಗೆ ಬಂದಿತು. ಅದೇನೆಂಬುದನ್ನು ಅವಳಿಂದ ನಿಶ್ಚಯಮಾಡಲಾಗಲಿಲ್ಲ. ಹರಾ ತ್ತಾಗಿ ದಾಮಿನಿಯ ಗಲ್ಲಗಳನ್ನು ಹಿಡಿದುಕೊಂಡು, ಅವಳ ವಕ್ಷಸ್ಕೃತದಲ್ಲಿ ತನ್ನ ಮುಖವನ್ನಿಟ್ಟು, ಉನ್ಮಾದಿನಿಯು- .. ಅಮ್ಮಾ! ಅಮಾ??...ಎಂದು ಅಳಲಾರಂಭಿಸಿ ದಳು. ಏನೇನೋ ಹೇಳಿದಳು; ಎಷ್ಟೋ ಆಶೀರ್ವಾದಮಾಡಿದಳು; ದಾಮಿನಿಗೆ ಅದಾವುದೂ ಅರ್ಥವಾಗಲಿಲ್ಲ; ಆದರೂ, ಅವಳು ಆಳತೊಡಗಿದಳು. ಅಳ ವರನ್ನು ಕಂಡರೆ, ತನಗೂ ಅಳು ಬರುವುದು; ಅದೇತಕ್ಕೆಂಬುದನ್ನು ಆರಿಂದಾದರೂ ತಿಳಿವುದಕ್ಕಾದೀತೆ? ಮೆಲ್ಲ ಮೆಲ್ಲನೆ, ಅವಳು ಉನ್ಮಾದಿನಿಯ ಆ ಗಾಢಾಲಿಂಗನದಿಂದ ಮುಕ್ತಿಯನ್ನು ಹೊಂದಿ- ಅಮ್ಮಾ ನೀನು ಯಾರೆ?” ಎಂದು ಕೇಳಿದಳು.
ಉನ್ಮಾದಿನಿಯೊಂದನ್ನೂ ಹೇಳಲಿಲ್ಲ. ಸುಮ್ಮನೆ “ ಅಮಾ! ಅಮ್ಮಾ!” –
ಎಂದು ಅಳತೊಡಗಿದಳು. ದಾಮಿನಿ ಕೇಳಿದಳು:- ಅಮ್ಮಾ! ಅಳುವೆಯೇಕೆ ???