ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆಯ ಕಾಲದಿ೦ದ ಒಂದು ಕ್ಷಣ ಹಿಂದೆ ಸರಿದು ಈ ಭೂಮಿ ರಚನೆ ಹೇಗಾಯಿತು ಎಂದು ಯೋಚಿಸದರೆ ಪಶ್ಚಿಮ ಘಟ್ಟದ ತುದಿಯಲ್ಲಿ ನಿ೦ತು ಕೊಡಲಿ ರಾಮನು ಎಸೆದ ಕೊಡಲಿಯಿಂದಾಗಿ ಅರಬೀ ಸಮುದ್ರವು ಹಿಂದೆ ಸರಿಯಿತೆಂದು ಒಂದು ಪುರಾಣ ಕಥೆಯಿದೆ. ಆದರೆ ವೈಜ್ಞಾನಿಕವಾಗಿ ಪರಿಶೀಲಿಸಿದಾಗ ಸಮುದ್ರದಲ್ಲಿ ಉಂಟಾದ ಸ್ತರಭ೦ಗದಿಂದಾಗಿ ದಕ್ಷಿಣ ಕನ್ನಡದ ಭೂರಚನೆ ಉಂಟಾಯಿತೆಂದು ಕ೦ಡುಹಿಡಿದಿದ್ದಾರೆ.

ಹಿ೦ದೂ ಮಹಾಸಾಗರದ ತೀರ ಮತ್ತು ತಳಭಾಗಗಳನ್ನು "ಗ್ಲೋಮರ್‌ ಛಾಲೆ೦ಜರ್‌" ಎಂಬ ಸ೦ಶೋಧನಾ ಹಡಗು ಪರಿಶೀಲಿಸಿದಾಗ ಪಶ್ಚಿಮ ಸಮಾನಾ೦ತರವಾಗಿ ಸಮುದ್ರದಲ್ಲಿ ಸ್ತರಭ೦ಗ ಉ೦ಟಾಗಿ ಸಮುದ್ರ ತಳದ ಒಂದು ಭಾಗ ಕುಸಿದಿರುವುದು ಕಂಡು ಬಂದಿದೆ. ಈ ಕುಸಿತದಿಂದಾಗಿ ಸಮುದ್ರದಲ್ಲಿ ಆಳವು ಹೆಚ್ಚಾಗಿ ಅದಕ್ಕೆ ನೀರು ಹರಿದು ತುಂಬಿದಾಗ ತೀರದ ನೀರು ಹಿಂದೆ ಸರಿದಿರಬೇಕು ಎ೦ದು ತಿಳಿದು ಬಂದಿದೆ.

ಅ೦ದರೆ ಪರಶುರಾಮನ ಕುರಿತಾದ ಕತೆಗೂ ವೈಜ್ಞಾನಿಕವಾಗಿ ಭೂರಚನೇಯ ಕುರಿತಾದ ಸ೦ಶೋಧನೆಗೂ ಸ೦ಬ೦ಧವಿರುವುದು ಒಂದು ಕುತೂಹಲದ ಸ೦ಗತಿಯಾಗಿದೆ. ಒಂದು ಸ೦ಪ್ರದಾಯದ ಕತೆಯಂತೆ ಪರಶುರಾಮ ತನ್ನ ತಾಯಿಗಾಗಿ ಉಡುಪಿ ಸಮೀಪದ ಕುಂಜಾರುಗಿರಿಯಲ್ಲಿ ಒ೦ದು ದೇವಸ್ಥಾನವನ್ನು ಕಟ್ಟಿಸಿದನೆಂದು ಪ್ರತೀತಿ ಇದೆ. ದಕ್ಷಿಣ ಕನ್ನಡದ ಮುಖ್ಯನದಿಗಳಾದ ಕುಮಾರಧಾರ, ಪಯಸ್ಟಿನಿ, ಚಂದ್ರಗಿರಿ, ನೇತ್ರಾವತಿ, ನದಿಗಳ ವಿಚಾರ ಕ್ರಮವಾಗಿ ಮಾರ್ಕ೦ಡೇಯ ಪುರಾಣ, ವಾಯು ಪುರಾಣ ಮತ್ತು ಭವಿಷ್ಯೋತ್ತರ ಪುರಾಣಗಳಲ್ಲಿ ತಿಳಿದುಬರುತ್ತವೆ.

ಕ್ರಿ. ಶ. ಮೂರು ಮತ್ತು ನಾಲ್ಕನೇ ಶತಮಾನಗಳಿಗೆ ಸಂಬಂಧಿಸಿದ ತಮಿಳಿನ 'ಸ೦ಘ೦' ಗ್ರ೦ಥಗಳಲ್ಲಿ ಕವಿ ಮಮುಲನಾರ್‌ ಈ ಪ್ರದೇಶವನ್ನು ತುಳುನಾಡು ಎಂದು ಕರೆದ ದಾಖಲೆ ಸಿಗುತ್ತದೆ. ಮೌರ್ಯರ ದೊರೆ ಅಶೋಕನ ಕಾಲದಲ್ಲಿ ಈ ನಾಡಿಗೆ ಸತಿಯಪುತ್ರ ಎ೦ಬ ಉಲ್ಲೇಖವಿದ್ದುದು ಕಂಡು ಬರುತ್ತದೆ.

ಭಾರತದ ಪಶ್ಚಿಮ ಕರಾವಳಿ ಮತ್ತು ಮೆಡಿಟರೇನಿಯನ್‌ ದೇಶಗಳ ವ್ಯಾಪಾರ ಸ೦ಬ೦ಧಗಳನ್ನು ನಾವು ಗ್ರೀಕ್‌ ಮತ್ತು ರೋಮನ್‌ ಬರಹಗಾರರ ಗ್ರ೦ಥಗಳಲ್ಲಿ ಕಾಣುತ್ತೇವೆ. ಇವನ್ನು ಎಷ್ಟರ ಮಟ್ಟಿಗೆ ನಂಬಬಹುದೆಂಬುದು ಬೇರೆಯೇ ವಿಚಾರ.

15