ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ಜಿಲ್ಲೆಯಲ್ಲಿ ಕೊಂಕಣಿ ಸಾಹಿತ್ಯಕ್ಕೂ ಶ್ರೀಮಂತ ಪರಂಪರೆಯಿದ್ದು, ಕೆಥೋಲಿಕ್ ಕೊಂಕಣಿ ಮತ್ತು ಗೌಡಸಾರಸ್ವತ ಕೊಂಕಣಿಗಳೆರಡರಲ್ಲೂ ಕಾವ್ಯ, ನಾಟಕ, ಕಾದಂಬರಿ ಮೊದಲಾದ ಪ್ರಕಾರಗಳ ಕೃತಿಗಳು ಬಂದಿದೆ. ಪ್ರಸಿದ್ಧ ಕೀರ್ತನಕಾರ ಅಚ್ಯುತದಾಸರು 'ಗುರುಚರಿತ್ರೆ' ಎಂಬ ಕೊಂಕಣಿ ಮಹಾಕಾವ್ಯವನ್ನು ರಚಿಸಿದ್ದಾರೆ. ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ಕಚೇರಿಯೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಸಂಸ್ಕೃತ

ಸಂಸ್ಕೃತ ಸಾಹಿತ್ಯ, ಸಂಸ್ಕೃತ ಅಧ್ಯಯನದಲ್ಲೂ ಈ ಜಿಲ್ಲೆ ದೀರ್ಘ ಪರಂಪರೆ ಹೊಂದಿದೆ. ಜಗತ್ತಿನ ದಾರ್ಶನಿಕ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಕೊಡುಗೆಯಾದ—ಮಧ್ವಾಚಾರ್ಯರು, ಈ ಪರಂಪರೆಗೆ ಬಹುಶಃ ಆದ್ಯರು. ಅವರು ರಚಿಸಿದ ಮೂವತ್ತೊಂಬತ್ತು ಸಂಸ್ಕೃತ ಗ್ರಂಥಗಳು 'ಸರ್ವಮೂಲ' ಗ್ರಂಥಗಳೆಂದು ವಿಖ್ಯಾತವಾಗಿದ್ದು, ದ್ವೈತವೇದಾಂತದ ಆಧಾರಗಳಾಗಿವೆ. ಸುಂದರವಾದ ಅಡಕವಾದ ಶೈಲಿ, ಪಾಂಡಿತ್ಯಗಳಿಗೆ ಈ ಗ್ರಂಥಗಳು ಮಾದರಿಗಳಾಗಿವೆ. ಮಧ್ವಾಚಾರ್ಯರ ಅನಂತರ ಅದೇ ಪರಂಪರೆಯಲ್ಲಿ ವಿಷ್ಣು ತೀರ್ಥ, ತ್ರಿವಿಕ್ರಮ ಪಂಡಿತ, ಕಲ್ಯಾಣಿ ದೇವಿ, ವಾದಿರಾಜಸ್ವಾಮಿ ಮೊದಲಾದ ಯತಿಗಳು ಗ್ರಂಥ ರಚನೆ ಮಾಡಿದ್ದಾರೆ. ಇತರ ಅನೇಕ ಲೇಖಕರ ಕೃತಿಗಳೂ ಲಭ್ಯವಾಗಿವೆ. ಜಿಲ್ಲೆಯಲ್ಲಿ ಸಂಸ್ಕೃತ ಸಾಹಿತ್ಯ ರಚನೆ ಈಗಲೂ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ. ಸಂಸ್ಕೃತ ಅಧ್ಯಯನವೂ ನಡೆಯುತ್ತಿದೆ.

ಮುನ್ನೋಟ
ಉದ್ಯಮೀಕರಣದ ಸವಾಲುಗಳು

ಈ ಜಿಲ್ಲೆಯು ಮುಖ್ಯವಾಗಿ ಬ್ಯಾಂಕಿಂಗ್‌ನಂತಹ ಸೇವಾ ಉದ್ಯಮಗಳಿಗೆ, ಮತ್ತು ಕೆಲವು ಕಿರು ಉದ್ಯಮಗಳಿಗೆ ಪ್ರಸಿದ್ಧವಾದುದು. ಇದೀಗ ಜಿಲ್ಲೆಗೆ, ವಿಶೇಷತ:

52