ಕುಮಾರಪರ್ವತದಲ್ಲಿ ಹುಟ್ಟಿ ಹರಿಯುವ ಕುಮಾರಾಧಾರಾ ನದಿಯನ್ನು ಉಪ್ಪಿನಂಗಡಿಯಲ್ಲಿ ಸಂಧಿಸಿ ಬಂಟ್ವಾಳದ ಕಡೆಗೆ ಹರಿಯುತ್ತದೆ. ಹಲವಾರು ಗುಡ್ಡಬೆಟ್ಟಗಳ ನಡುವೆ ಹರಿದು ಹಲವು ಕುದುರುಗಳನ್ನು ನಿರ್ಮಿಸಿ ನೇತ್ರಾವತಿ ನದಿ ಮಂಗಳೂರಿನಲ್ಲಿ ಗುರುಪುರ ನದಿಯನ್ನು ಸೇರಿಕೊಳ್ಳುತ್ತದೆ.
ಅನೇಕ ಉಪನದಿಗಳನ್ನು ಜತೆಗೊಡಿಸಿಕೊ೦ಡು ಹರಿಯುವ ಗಂಗೊಳ್ಳಿ ನದಿ ಕುಂದಾಪುರದಲ್ಲಿ ವಿಶಾಲವಾದ ವ್ಯಾಪ್ತಿಯನ್ನು ಪಡೆಯುತ್ತದೆ. ಕೊಲ್ಲೂರು, ಹಾಲಾಡಿ, ಚಕ್ರಾನದಿಗಳ ಧಾರೆಯನ್ನೊಳಗೊಂಡ ಗಂಗೊಳ್ಳಿ ನದಿ ಅರಬ್ಬೀ ಸಮುದ್ರದಿ೦ದ ಕೇವಲ ನಲವತ್ತು ಕಿ.ಮೀಗಳಷ್ಟು ದೂರವಿರುವ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಯ ಕವಲುಗಳನ್ನು ಹೊಂದಿದೆ.
ಪಶ್ಚಿಮ ಘಟ್ಟದ ಸೋಮೇಶ್ವರದ ಬಳಿ ಹುಟ್ಟುವ ಸೀತಾನದಿ ಉಡುಪಿ ತಾಲೂಕಿನ ಉತ್ತರದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಬಾರಕೂರಿನ ಬಳಿ ಸೀತಾನದಿ ಮತ್ತು ಸ್ವರ್ಣಾನದಿಗಳು ಆರಬ್ಬೀ ಸಮುದ್ರವನ್ನು ಸೇರುವಾಗ ವಿಶಾಲವಾದ ಹಿನ್ನೀರಿನ ನೆಲೆಯನ್ನು ಸೃಷ್ಟಿಸಿವೆ. ಇವಲ್ಲದೆ ಶೀರೂರು, ಉಪ್ಪುಂದ, ಕಲ್ಯಾಣಪುರ, ಮುಲ್ಕಿ, ಪಾವಂಜೆ, ವಾರಾಹಿ, ದಾಸನಕಟ್ಟೆ, ನೆರಿಯ, ಶಿಶಿಲ ಮು೦ತಾದ ನದಿಗಳು ದಕ್ಷಿಣ ಕನ್ನಡದ ಜನಜೀವನದ ಆಧಾರ ಸ್ತ೦ಭಗಳಾಗಿವೆ.
ಭೂಗರ್ಭದೊಳಗೆ
ದಕ್ಷಿಣ ಕನ್ನಡದ ಭೂಗರ್ಭ ಬಾಕ್ಸೈಟ್, ಕೊರಂಡಮ್, ಗಾರ್ನೆಟ್, ಬಂಗಾರ, ಕಬ್ಬಿಣದ ಅದಿರು, ಕ್ಕಾನ್ಸೆಟ್, ಸುಣ್ಣದ ಚಿಪ್ಪು, ಸಿಲಿಕಾ ಆವೆಮಣ್ಣು ಮುಂತಾದ ಅ೦ಶಗಳಿ೦ದ ಸ೦ಪದ್ಭರಿತವಾಗಿದೆ.
ಡಾಲರೈಟ್ ಅನ್ನುವುದು ಅತಿ ಗಡುಸಾದ ಕೃಷ್ಣಶಿಲೆ. ಮ೦ಗಳಪೇಟೆ, ಕೆಯ್ಯೂರು, ಬಂಟ್ವಾಳ, ಕಟೀಲುಗಳಲ್ಲಿ ದೊರೆಯುತ್ತದೆ. ಡಾಲರೈಟ್ ನೀರಿನ ಸ೦ಪರ್ಕದಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಬೇಗ ಕೆ೦ಪು ಮಣ್ಣಾಗಿ ಮಾರ್ಪಡುವುದು.
ಬೆಸಾಲ್ಟ್ ಆನ್ನುವುದು ಅತಿ ಗಡುಸಾದ ಕಪ್ಪುಶಿಲೆ. ಅಗ್ನಿ ಪರ್ವತಗಳಿಂದ ಹೊರಹರಿದ ಲಾವಾರಸದಿ೦ದಾದ ಶಿಲೆ. ಮಲ್ಪೆಯ ಬಳಿ ಪಶ್ಚಿಮಕ್ಕೆ ಇರುವ ಸೈಂಟ್‌ಮೇರೀಸ್ ದ್ವೀಪದಲ್ಲಿದೆ. ಇದು ಒ೦ದು ಭೂವಿಜ್ಞಾನದ ಸೋಜಿಗ.
3