ವಿಷಯಕ್ಕೆ ಹೋಗು

ಪುಟ:Durga Puja Kannada.djvu/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀದುರ್ಗಾಪೂಜೆ ಮೂಲಮಂತ್ರ ಓಂ ಕ್ರೀಂ ಶ್ರೀದುರ್ಗಾಯ್ಕೆ ದೇವತಾಯ್ಕೆ ನಮಃ | ಪೂಜಾಸಿದ್ಧತೆ: ನಮಸ್ಕಾರ, ಅಲಂಕಾರ, ಪೂಜಾಸಾಮಗ್ರಿಗಳ ಇಡುವಿಕೆ, ಧೂಪದೀಪ ಬೆಳಗಿಸಿ, ಅರ್ಥ್ಯವನ್ನು ನೀಡಿ, ಪೂಜಾಯಂತ್ರ ಸ್ಥಾಪನೆ, ಜಪ ಇತ್ಯಾದಿ ಪ್ರಣಾಮ ಕೈಮುಗಿದು - ಓಂ ಸರ್ವಮಂಗಲಮಾಂಗಲ್ಯಂ ವರೇಣ್ಯಂ ವರದಂ ಶುಭಮ್ | ನಾರಾಯಣಂ ನಮಸ್ಕತ್ಯ ಸರ್ವಕರ್ಮಾಣಿ ಕಾರಯೇತ್ || ಆಚಮನ - ಓಂ ವಿಷ್ಣುಃ || - ಎಂದು 3 ಬಾರಿ ಕೈತೊಳೆದು, ಕೈಮುಗಿದು - ಓಂ ತದ್ವಿಷ್ಟೋ ಪರಮಂ ಪದಂ ಸದಾ ಪಶ್ಯಂತಿ ಸೂರಯಃ ದಿವೀವಚಕ್ಷುರಾತತಮ್ | ಓಂ ಅಪವಿತ್ರಃ ಪವಿತ್ತೋ ವಾ ಸರ್ವಾವಸ್ಥಾಂ ಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ | ಸಾಮಾನ್ಯಾರ್ಥ್ಯ ಸ್ಥಾಪನೆ ಮುಂಭಾಗದಲ್ಲಿ ಸ್ವಲ್ಪ ಎಡಕ್ಕೆ ಮಂಡಲ ಬರೆದು ಪೂಜಿಸಿ - ಓಂ ಏತೇ ಗಂಧಪುಷ್ಟೇ ಆಧಾರಶಕ್ತಾದಿಭೈ ನಮಃ | 'ಫಟ್” - ಕೋಶ ತೊಳೆಯಿರಿ 'ನಮಃ' - ಮಂತ್ರದಿಂದ ನೀರನ್ನು ಹಾಕಿ “ಓಂ' - ಮಂತ್ರದಿಂದ ಅರ್ಫ್ ಕೊಡಿ ಈಗ ಅಂಕುಶ ಮುದ್ರೆಯಿಂದ ನೀರನ್ನು ಸ್ಪರ್ಶ ಮಾಡಿ, ಸೂರ್ಯಮಂಡಲದಿಂದ ತೀರ್ಥ ಆವಾಹನೆ ಮಾಡಬೇಕು ಓಂ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು || ಈಗ ಕೋಶದ ಜಲಕ್ಕೆ ಗಂಧಪುಷ್ಪಅಕ್ಷತೆಯನ್ನು ಹಾಕಿ - 'ಹೂಂ' ಮಂತ್ರದಿಂದ – ಅವಗುಂಠನ ಮುದ್ರೆ