ವಿಷಯಕ್ಕೆ ಹೋಗು

ಪುಟ:Durga Puja Kannada.djvu/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಓಂ ಪೃಥ್ವಿ ತ್ವಯಾ ಧೃತಾ ಲೋಕಾ ದೇವಿ ತ್ವಂ ವಿಷ್ಣುನಾಧೃತಾ |
ತ್ವಂ ಚ ಧಾರಯ ಮಾಂ ನಿತ್ಯಂ ಪವಿತ್ರಂ ಕುರುಚಾಸನಮ್ |
ಈಗ ಆಸನದ ಮೇಲೆ ತ್ರಿಕೋಣಮಂಡಲ ಬರೆದು ಪೂಜಿಸಿ -

ಹ್ರೀಂ ಏತೇ ಗಂಧಪುಷ್ಪೇ ಆಧಾರಶಕ್ತಯೇ ಕಮಲಾಸನಾಯ ನಮಃ |

ಗುರುಪ್ರಣಾಮ

ಎಡ ಕಿವಿಯ ಮೇಲೆ - ಐಂ ಗುರುಮ್ಮೋ ನಮಃ |
ಅದರ ಮೇಲೆ - ಐಂ ಪರಮಗುರುಬ್ಬೋ ನಮಃ |
ಅದಕ್ಕೂ ಮೇಲೆ - ಐಂ ಪರಾಪರಗುರುಭೋ ನಮಃ |
ಅದಕ್ಕಿಂತಲೂ ಮೇಲೆ - ಐಂ ಪರಮೇಷ್ಠಿಗುರುಭೋ ನಮಃ |
ಬಲಕಿವಿಯ ಮೇಲೆ - ಓಂ ಗಣೇಶಾಯ ನಮಃ |
ಮಧ್ಯಭಾಗದಲ್ಲಿ - ಓಂ ಐಂ ಸರ್ವದೇವದೇವೀಸ್ವರೂಪಾಯ ಶ್ರೀರಾಮಕೃಷ್ಣಾಯ ನಮಃ |

ಕರಶುದ್ದಿ

'ಹ್ ಸೌಂ' ಮಂತ್ರದಿಂದ ಬಲಗೈಯಲ್ಲಿ ಸಚಂದನ ರಕ್ತಪುಷ್ಪವನ್ನು ತೆಗೆದುಕೊಂಡು – (ಪ್-Silent)

ಆಂ ಹೂಂ ಫಟ್ ಸ್ವಾಹಾ |
ಮಂತ್ರದಿಂದ ಎರಡೂ ಕೈಗಳಲ್ಲಿ ಮರ್ದನ ಮಾಡಿ ಎಡಕೈಯಲ್ಲಿ ತೆಗೆದು
'ಕ್ಲೀಂ' - ಎಂದು ಮಸ್ತಕದ ಸುತ್ತು ತಿರುಗಿಸಿ
'ಐಂ' - ಮಂತ್ರದಿಂದ ಘ್ರಾಣಿಸಿ

'ಫಟ್' - ಮಂತ್ರದಿಂದ ನಾರಾಚ ಮುದ್ರೆಯಲ್ಲಿ ಈಶಾನ್ಯಕ್ಕೆ ಎಸೆಯಿರಿ.

ಪುಷ್ಟಶುದ್ದಿ

ಹೂಗಳ ಮೇಲೆ ಜಲ ಪ್ರೋಕ್ಷಿಸಿ -

ಓಂ ಶತಾಭಿಷೇಕ ಹೂಂ ಫಟ್ ಸ್ವಾಹಾ |
ನಂತರ ಪುಷ್ಪವನ್ನು ಸ್ಪರ್ಶಿಸುತ್ತಾ -
ಓಂ ಪುಷ್ಪೇ ಪುಷ್ಪೇ ಮಹಾಪುಷ್ಪೇ ಸುಪುಷ್ಪೇ ಪುಷ್ಪಸಂಭವೇ |

ಪುಷ್ಪಚಯಾವಕೀರ್ಣೇ ಚ ಹೂಂ ಫಟ್ ಸ್ವಾಹಾ ||

ದಿವ್ಯವಿಘ್ನನಿವಾರಣ

ಓಂ ಹ್ರೀಂ ಶ್ರೀದುರ್ಗಾಯ್ ದೇವತಾಯ್ ನಮಃ |
ಎನ್ನುತ್ತಾ ಮೇಲೆ ನೋಡಿ (ದಿವ್ಯಲೋಕ) ಸ್ವಲೋಕದ ವಿಘ್ನ ನಿವಾರಣೆಯಾಯಿತೆಂದು ಭಾವಿಸಿ

3