ಪುಟ:Duurada Nakshhatra.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ಯಾಮಲೆಯನ್ನು ಕರೆದುಕೊಂಡು ಹೋಗಲು ಆಕೆಯ ಗಂಡ ಬಂದ. ಅಂತಸ್ತಿನಲ್ಲಿ ಆತ ಜಯರಾಮಶೆಟ್ಟರಿಗಿಂತ ಕಡಮೆಯವನೆಂಬುದು ಸ್ಪಷ್ಟವಾಗಿತ್ತು, ಶ್ಯಾಮಲಾ ಅವನೆದುರೇ ಅಂದು ಬಿಟ್ಟಳು :

“ನೀವು ಬೇರೆ ಮನೆ ಮಾಡಿದರೆ ಬರ್ತೀನಿ.”

ಹಾಸನದಲ್ಲೇ ಇದ್ದು ಬೇರೆ ಮನೆ ಮಾಡುವುದು ಸಾಧ್ಯವಿರಲಿಲ್ಲ. ವರ್ಗ ಮಾಡಿಸಿಕೊಳ್ಳಲು ಯತ್ನಿಸುವುದಾಗಿ ಆತ ಹೇಳಿದ.

ಶ್ಯಾಮಲಾ ತಾಯಿ ಮನೆಯಲ್ಲೇ ಉಳಿದಳು,

ಮುಗುಳು ನಗುವುದು-ಗಹಗಹಿಸಿಯೂ ನಗುವುದು-ಕಳೆದು, ಸಣ್ಣ ಪುಟ್ಟ ಸಂಭಾಷಣೆಗೆ ಆರಂಭವಾಯಿತು.

“ನಿಮಗೆ ತುಂಬಾ ಸಂಕೋಚ!” ಎಂದೂ ಒಮ್ಮೆ ಆಕೆ ಹೇಳಿದಳು.

ಜಯದೇವ ಮಾತ್ರ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದವನಂತೆ ದಿನ ಕಳೆದ.

ವಾರ್ಷಿಕೋತ್ಸವ ವಿಜೃಂಭಣೆಯಿಂದಲೆ ಜರಗಿತು. ಜಿಲಾ ವಿದ್ಯಾಧಿಕಾರಿ ಬಂದರು. ಶಂಕರಪ್ಪ ಹಿರಿತನ ವಹಿಸಿದರು. ನಾಟಕ ನೋಡಲು ಮಧಾಹ್ನದಿಂದಲೆ ಕಾದು ಕುಳಿತಿದ್ದ ಪುಟ್ಟ ಹುಡುಗರ ಗದ್ದಲ ಗೊಂದಲಗಳ ನುಡುವೆ, ಮಾತನಾಡಿದವರಿಗಷ್ಟೇ ಕೇಳಿಸುವಂತೆ ಅವರಿಗೆ ಮಾತ್ರವೇ ಅರ್ಥವಾಗುವಂತೆ, ಭಾಷಣಗಳಾದುವು, ಶುಭ್ರವಾದ ಕ್ಚ್ಚೆ ಪಂಚೆಯುಟ್ಟು ಅಷ್ಟೇ ಶುಭ್ರವಾದ ಜುಬ್ಬ ಧರಿಸಿ, ನೆರೆದವರ ಗಮನದ ಕೇಂದ್ರವಾಗಿ ಜಯದೇವ ಓಡಾಡಿದ. ರಂಗಭೂಮಿಯ ಎಲ್ಲ ಉಸಾವಾರಿಯನ್ನೂ ತಿಮ್ಮಯ್ಯ ಮೇಷ್ಟ್ರು ವಹಿಸಿಕೊಂಡರು.

ಮೊದಲು 'ಕೃಷ್ಣ ಪ್ರೇಮ'ದ ಅಭಿನಯ. ಆ ಬಳಿಕ 'ರೊಹ್ರಾಬ್ ರುಸ್ತುಂ.' ಎರಡು ನಾಟಕಗಳೂ ಚೆನಾಗಿದ್ದುವು. ಅಧ್ಯಕ್ಷರಾಗಿದ್ದ ವಿದ್ಯಾಧಿಕಾರಿಗಳಿಗೆ ನಾಟಕಗಳ ನಡುವೆ ವಂದನಾರ್ಪಣೆ ಮಾಡುವ ಸಂದರ್ಭದಲ್ಲಿ ವೆಂಕಟರಾಯರು ತಿಮ್ಮಯ್ಯನವರ ವಿಷಯ ಪ್ರಸ್ತಾಪಿಸಲೇ ಇಲ್ಲ, ನಾಟಕಗಳ ವಿಚಾರವಾಗಿ ಮಾತನಾಡುವ ನೆಪಮಾಡಿಕೊಂಡು ಜಯದೇವ ತಿಮ್ಮಯ್ಯನವರ ಗುಣಗಾನ ಮಾಡಿದ. ಪರದೆಯ ಹಿಂದೆ ಮೂಲೆಯಲ್ಲಿ ಒಬ್ಬರೇ ಕುಳಿತಿದ್ದ ತಿಮ್ಮಯ್ಯನವರ ಕಣ್ಣಗಳು ಹನಿಗೂಡಿದುವು. ಮಾಧ್ಯ.