ಪುಟ:Duurada Nakshhatra.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಏುಕ ಶಾಲೆಯು ನಗರವಾಸಿ ಮೇಷ್ಟ್ರು ಹಳ್ಳಿಯ ಪಾಥಮಿಕ ಶಾಲೆಯ ಬಡ ಉಪಾಧ್ಯಾಯರನ್ನು ಹೊಗಳಿದುದು ನೆರೆದಿದ್ದ ಹಲವರಲ್ಲಿ ಆಶ್ಚರ್ಯ నేన్నుంటిు ಮಾಡದೆ ಇರಲಿಲ್ಲ.

ರಂಗಭೂಮಿಯು ಮೇಲೆ ರಾಧೆಯಾಗಿ ರಾಣಿಯಾಗಿ ಮೆರೆದ: ಇಂದಿರಾ ಮುಖದ ಮೇಲಿನ ಬಣ್ಣವನ್ನು ಅರ್ಧಕ್ಕರ್ಧ ಮಾತ್ರ ತೆಗೆದು. ಅಲ್ಲಿಯೆ ನಿಂತಿದ್ದಳು ಆಕೆಯ ತಾಯಿಯೂ ಒಳಗೆ ಬಂದುಬಿಟ್ಟರು. ಇಂದಿರೆಯನ್ನು ನೋಡುತ್ತ ಹೃದಯದಲ್ಲೊಂದು ವಿಚಿತ್ರ ನೋವಿನ ಅನುಭವ ಜಯದೇವನಿಗಾಯಿತು. ನಾಲ್ವತ್ತು ದಾಟಿದ್ದರೂ ಇಂದಿರೆಯ ಸೌಂದರ್ಯವೇ ಗಾಂಭೀರ್ಯದ ಪ್ರೌಢತೆಯ ಒಪ್ಪಪಡೆದು ನಿಂತಹಾಗಿದ್ದರು ಆ ವಿಧವೆ ತಾಯಿ.

ಜಯದೇವನನ್ನೆ ಸೂಕ್ಷ್ಮವಾಗಿ ದಿಟ್ಟಿಸುತ್ತ ಅವರೆಂದರು:

“ನಮ್ಮ ಮನೆಗೆ ನೀವು ಬರಲೇ ಇಲ್ಲ ಮೇಷ್ಟ್ರೆ,.”

“ಬರ್ತೀನಮ್ಮ...”

ಒಬ್ಬೊಬ್ಬರಾಗಿ ಅಲ್ಲಿದ್ದವರೆಲ್ಲ ಹೊರಟು ಹೋದರು. ತಾಯಿಯನ್ನು ಹಿಂಬಾಲಿಸುತ್ತ ಹಿಂದಿರುಗಿ ಜಯದೇವನನ್ನೇ ನೋಡುತ್ತ ಇಂದಿರೆಯೂ ಹೊರಟಳು. ಪೆಟ್ರೋಮಾಕ್ಸ್ ದೀಪಗಳು ಇನ್ನು ಆರಿ ಹೋಗುತ್ತೇವೆ ಹಾರಿ ಹೋಗುತ್ತೇವೆ' ಎಂದು ಬೆದರಿಸಿದುವು.

ಅಷ್ಟರಲ್ಲಿ ನಾಗರಾಜ ಬಂದ.

“ಇದೇನೋ ? ಮನೆಗೆ ಹೋಗಿಲ್ವಾ ಇನ್ನೂ?”

“ನಮ್ಮಪ್ಪ ಆಗ್ಲೆ ಹೋದ್ರು.. ನೀವು ಬರ್ತೀರಿಂತ ಅಮ್ಮ ಅಕ್ಕ ಕಾದು ನಿಂತಿದ್ದಾರೆ. ಬರ್ತೀರಾ ಸಾರ್?”

ಓಡಾಡುವ ಗಡಿಬಿಡಿಯಲ್ಲಾ ಶಾಮಲೆಯನ್ನು ಜಯದೇವ ಕಂಡಿದ್ದ. ಯೌವನವೊಂದೆ ತಿಳಿದುಕೊಳ್ಳಲು ಸಮರ್ಥವಾಗುವಂಥ ಕಾತರ ತುಂಬಿದ. ಕಣ್ಣುಗಳಿಂದ ತನ್ನನ್ನು ಆಕೆ ನೋಡುತಿದ್ದಳು.

ಈಗ ಆಕೆಯ ಸಮಿಾಪದಲ್ಲೆ ಇದು ಮನೆಗೆ ಹಿಂತಿರುಗಬೇಕಾದಂತಹ ಪರಿಸ್ಥಿತಿ. . .

“ನಡಿ ನಾಗರಾಜ, ಬಂದೆ.”