15 68
- ಇರಲಿ, ಹಾಡೇ.
“ಖಂಡಿತ ಇಲ್ಲ..ಆ ಮೇಲೆ, ಪದುಮ ಕಾಣೋಕೆ ಸಿಗಲಿಲ್ಲಾಂತ ರಾಯರು ಸಿಟ್ಟಾಗ್ತಾರೆ.” ಈಗ ಪ್ರತಿಯೊಂದೂ ಅರ್ಥವಾಗಿ ವೆಂಕಟರಾಮಯ್ಯ ಪರಮ ಸಂತುಷ್ಟನಾದ. “ನಿಮ್ಮನೇಲಿ ಆ ಹಾಡಿನ ಪುಸ್ತಕ ಇದೆಯೆ?” ಎಂದು, ಏನನ್ನೂ ಯೋಚಿಸು ಶಿದ್ದವನಂತೆ, ಆತ ಹೆಂಡತಿಯನ್ನು ಕೇಳಿದ. “ಪುಸ್ತಕ ಇಲ್ಲ, ಬರಕೊಂಡಿರೋದಿದೆ," ಎಂದಳು ವಿಜಯ. “ಶಿವಮೊಗ್ಗೆಗೆ ಹೋದ್ಮಲೆ ನಮ್ಮನೆಗೆ ಆ ಪುಸ್ತಕ ಕೊಂಡುತರಬೇಕು.” “ನಾನು ಹಾಡಿದರೆ ಅತ್ತೆ ಸುಮ್ಮಿ ರಾರ?” ಅಸ್ಪಷ್ಟವಾದ ಕಾತರವನ್ನು ಸೂಚಿಸುತ್ತಿದ್ದ ಧ್ವನಿ. ಆತ ತನ್ನವಳನ್ನು ಬರ ಉತ್ತರ ಮೃದುವಾಗಿತ್ತು: “ಹುಚ್ಚ! ನಿನ್ನ ನರರಾಕ್ಷಸೀಂತ ತಿಳಕೊಂಡ್ಯಾ? ಸಾಕಷ್ಟು ಸಂಕಷ್ಟ ಅನುಭವಿ ನೀನು ಮನೆಗೆ ಬಂದೆ ಅಂದರೆ ಆಕೆಗೆ ಎಷ್ಟೊಂದು ಸಂತೋಷ ಸಿದ ಜೀವ ಅದು. ವಾಗುತ್ತೆ ಗೊತ್ತಾ?” ಮತ್ತೊಮ್ಮೆ ಸುನಂದೆಯ ಸ್ವರ ಕೇಳಿಸಿತು. ನಿರ್ಮಿಕರವಾದ ಮಲುದನಿ. ತುಂಟತನದ ಛಾಯೆ ಇಲ್ಲದೆ “ವಿಜಯಾ, ಸ್ನಾನಕ್ಕೆ ಕರಕೊಂಡರಬೇಕಂತೆ ಕಣೇ. “ಬಂದೆ ಅಕ್ಕಾ, ಎನ್ನುತ್ತ ಗಂಡನ ಕಡೆಗೆ ತಿರುಗಿ ವಿಜಯಾ ಅಂದಳು: “ಕೈಬಿಡಿ. ಏಳಿ, ಹೊತ್ತಾಯ್ತು, ಆತ ಮೆಲ್ಲನೆದ್ದು, ಮೈಮುರಿದು, ಊ ಎಂದು ಉಸಿರುಬಿಟ್ಟು, ಹೆಂಡತಿಯನ್ನು అంబలిసిద... ಸ್ನಾನದ ಮನೆಗೆ ಗಂಡನನ್ನು ಕರೆದೊಯ್ಯುತ್ತಿದ್ದ ವಿಜಯಳನ್ನು, ಅಡುಗೆ ಮನೆಯ ಬಾಗಿಲಿನಲ್ಲಿ ನಿಂತು ಸುನಂದಾ ನೋಡಿದಳು. ತಂಗಿ ತಲೆಯೆತ್ತಿದಾಗ ಆಕೆ ಯನ್ನು ನೋಡಿ ಅಕ್ಕ ಸಣ್ಣನೆ ನಕ್ಕಳು. ವಿಜಯಳಿಗೆ ನಾಚಿಕೆಯಾಯಿತು, ಆ ನಾಚಿಕೆಯ ಜಾಗದಲ್ಲಿ ಬೇರೊಂದು ಭಾವನೆ ಮರುಕ್ಷಣವೆ ಮೊಳೆಯಿತು. ಎಂತಹ ಹಿರಿಯ ಜೀವಿ ತನ್ನ ಅಕ್ಕ ಹೃದಯದೊಳಗೆ ಅಷ್ಟೊಂದು ಬೇಗುದಿಯಿದ್ದರೂ ಆಕೆಯ ವೈಯುಕ್ತಿಕ ಬದುಕು ಬರಡು ಭೂಮಿಯಾಗಿ ಮಾರ್ಪಟ್ಟಿದ್ದರೂ ನಗುನಗುತ್ತ ಹೇಗೆ ಓಡಾಡುತ್ತಿದ್ದಾಳೆ ಆಕೆ! ತನ್ನ ಅಕ್ಕನನ್ನು ಈಗ ಆವರಿಸಿರುವುದು ತಂಗಿ ಸುಖ ಯಾಗಿರಬೇಕೆಂಬ ಆಸೆ ಮಾತ್ರ; ಒಡಹುಟ್ಟಿದವಳ ಬದುಕು ಸುಗಮವಾಗಬೇಕೆಂಬ ಅಭಿಲಾಷೆ ಮಾತ್ರ, ಅಕ್ಕನ ದುರವಸ್ಥೆಯ ವಿಷಯ ತನ್ನ ಗಂಡನಿಗೆ ತಿಳಿಯದು. ಅವರಿಂದ ಬಜ್ಜಿ ಡುವುದಕ್ಕುಂಟೆ? ಅದಷ್ಟು ಬೇಗನೆ ಅದೆಲ್ಲವನ್ನೂ ತಾನು ಅವರಿಗೆ ಹೇಳಬೇಕು,